Karwar|ಎಂಟು ದಿನದ ನಂತರ ನದಿಯಿಂದ ಮೇಲೆದ್ದ ಲಾರಿ! ಹೇಗಿತ್ತು ಕಾರ್ಯಾಚರಣೆ ವಿವರ ನೋಡಿ.

Karwar operation to lift the lorry that had fallen eight days ago from the Kali River has been completed Karwar operation to lift the lorry that had fallen eight days ago from the Kali River has been completed

ಕಾರವಾರ :- ಆಗಷ್ಟ್ ಏಳರಂದು ಕಾರವಾರ ನಗರದ ರಾಷ್ಟ್ರೀಯ ಹೆದ್ದಾರಿ 66 ರ ಗೋವಾ- ಕಾರವಾರ ಸಂಪರ್ಕ ಮಾಡುವ ಕೋಡಿಬಾಗ್ ನ ಕಾಳಿ ಬ್ರಿಡ್ಜ್ ನಲ್ಲಿ ಲಾರಿ ಚಾಲಕನ ಸಮೇತ ಬಿದ್ದಿದ್ದ ತಮಿಳುನಾಡು ಮೂಲದ ಲಾರಿಯನ್ನು ಎಂಟು ದಿನದ ನಂತರ ಕಾರ್ಯಾಚರಣೆ ನಡೆಸಿ ಇಂದು ಹೊರತೆಗೆಯಲಾಯಿತು.

ಗುರವಾರದ ಬೆಳಗ್ಗೆ ಕಾರ್ಯಾಚರಣೆಗೆ ಐ.ಆರ್‌ಬಿ ತಲಕಂಪನಿಯು ಮೂರು ಕ್ರೇನ್ ಹಾಗೂ ಎರಡು ಬೋಟ್ ಬಳಸಿ ಕಾರ್ಯಾಚರಣೆಗೆ ಇಳಿದಿತ್ತು. ಆದರೇ ಲಾರಿ ಹೆಸ್ಕಾಂ ನ ತಂತಿಯ ಮೇಲೆ ತೇಲುತಿದ್ದು ತಂತಿ ಕಟ್ ಮಾಡಿದಲ್ಲಿ ಲಾರಿ ಇನ್ನೂ ಕೆಳಕ್ಕೆ ಹೋಗುವ ಆತಂಕವಿತ್ತು.

1001180051

ಆದರೇ ಯಲ್ಲಾಪುರದ ಸನ್ನಿ ಸಿದ್ದಿ ಎಂಬುವರು ಯಾವುದೇ ಸಾಧನ ಬಳಸದೇ ನೀರಿನಾಳಕ್ಕೆ ಹೋಗಿ ರೋಪ್ ಕಟ್ಟಿ ಬಂದಿದ್ದರು. ಇದರ ನಂತರ ಈಶ್ವರ್ ಮಲ್ಪೆ ತಂಡ ಮೂರು ರೂಪ್ ಕಟ್ಟಿ ಕೇಬಲ್ ತುಂಡರಿಸಿ ರೋಪ್ ನನ್ನು ಟೋಯಿಂಗ್ ಮೂಲಕ ಎಳೆಸಿದ್ದು ದಡಕ್ಕೆ ನೂರು ಮೀಟರ್ ಇರುವಾಗ ಕಲ್ಲಿನಭಾಗದಲ್ಲಿ ಸಿಲುಕಿಕೊಂಡಿತ್ತು.ಆದರೂ ಶತ ಪ್ರಯತ್ನ ನಡೆಸಿ ಸುಮಾರು 7.5 ಟನ್ ಗೂ ಹೆಚ್ಚು ತೂಕದ ಲಾರಿಯನ್ನು ದಡಕ್ಕೆ ತಂದು ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ 50 ಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು.

Advertisement

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement