Gokarna| ಮಹಾಬಲೇಶ್ವರನಿಗೆ ಮೇಲುಸ್ತುವಾರಿ ಸಮಿತಿ ಸದಸ್ಯರ ನೇಮಕ.

Gokarna Mahabaleshwara temple Gokarna Mahabaleshwara temple
Kannadavani Karnataka

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕುಮಟಾ(Kumta) ತಾಲೂಕಿನ ಗೋಕರ್ಣ (Gokarna)ಮಹಾಬಲೇಶ್ವರ ದೇವಸ್ಥಾನದಲ್ಲಿ ಆಡಳಿತ ಸಂಬಂಧ ಸುಪ್ರಿಂ ಕೋರ್ಟ (Court )ನಲ್ಲಿ ಆದ ಆದೇಶದಂತೆ ಸುಪ್ರೀಂ ಕೋರ್ಟ ನಿಂದಲೇ ನಿರ್ದೇಶಿಸಲ್ಪಟ್ಟ ಅಧ್ಯಕ್ಷರಿಗೆ ಪೂರ್ಣ ಅಧಿಕಾರ ನೀಡಿದ್ದು ಇದೀಗ ಅಧ್ಯಕ್ಷರು ತಮ್ಮ ಹಕ್ಕು ಚಲಾಯಿಸಿ ಪುರಾಣ ಪ್ರಸಿದ್ಧ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಆಡಳಿತ ಸಮಿತಿಗೆ ಹೊಸ ಸದಸ್ಯರ ನೇಮಕ ಮಾಡಿದೆ.

ಉಪಾಧಿವಂತರಾದ ಗೋಕರ್ಣದ ವಿದ್ವಾನ್ ಗಣಪತಿ ಶಿವರಾಮ ಭಟ್ ಹಿರೇಭಟ್ಟ, ವಿದ್ವಾನ್ ಸುಬ್ರಹ್ಮಣ್ಯ ಚಂದ್ರಶೇಖರ ಅಡಿ ಹಾಗೂ ಪರಿಣಿತ ವಿದ್ವಾಂಸರಾದ ವಿದ್ವಾನ್ ಪರಮೇಶ್ವರ ಸುಬ್ರಹ್ಮಣ್ಯ ಪ್ರಸಾದ ರಮಣಿ ಮತ್ತು ಮಹೇಶ ಗಣೇಶ ಹಿರೇಗಂಗೆ ಅವರನ್ನು ನೇಮಿಸಲಾಗಿದೆ.

ಇದನ್ನೂ ಓದಿ:-Mundgodu ವಿದ್ಯುತ್ ಅವಘಡ| 78 ಕುರಿಗಳು ಸಜೀವ ದಹನ.

Advertisement

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಮಿತಿಗೆ ಈ ನಾಲ್ವರು ಸದಸ್ಯರನ್ನು ನೇಮಿಸಿದ್ದನ್ನು ಪ್ರಶ್ನಿಸಿ ರಾಮಚಂದ್ರಾಪುರ ಮಠ ಹೈಕೋಟ್‌ರ್ನಲ್ಲಿ ತಡೆಯಾಜ್ಞೆ ತಂದಿತ್ತು.

ಇದರಿಂದ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೇಮಕಗೊಂಡಿದ್ದ ನಾಲ್ವರು ಸಮಿತಿ ಸದಸ್ಯರಾಗಿ ಮುಂದುವರೆದಿದ್ದರು. ತಡೆಯಾಜ್ಞೆ ವಿರುದ್ಧ ಸರ್ಕಾರವು ಸುಪ್ರೀಂಕೋಟ್‌ರ್ನಲ್ಲಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಜು.29 ರಂದು ಸಮಿತಿ ಅಧ್ಯಕ್ಷ ಬಿ.ಎನ್.ಶ್ರೀಕೃಷ್ಣ ಅವರ ನೇತೃತ್ವದ ಹೊಸ ಸಮಿತಿಗೆ ಅಧಿಕಾರದಲ್ಲಿ ಮುಂದುವರೆಯಲು ನಿರ್ದೇಶನ ನೀಡಿತ್ತು. ಇದರ ಜೊತೆ ಹೊಸ ಸದಸ್ಯರನ್ನು ಸೇರಿಸಿಕೊಳ್ಳುವ ಜೊತೆಗೆ ಆಡಾಳಿತದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳು ಹಕ್ಕನ್ನು ಸಹ ನೀಡಿದ್ದು ಇದೀಗ ಈ ಸಮಿತಿ ಪೂರ್ಣ ಸ್ವತಂತ್ರವಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement