Hebbar fan club has warned of protest in front of leader's house if BJP leaders demand resignation of Yallapur MLA

BJP ಗರು ಪದೇ ಪದೇ ಹೆಬ್ಬಾರ್ ರಾಜೀನಾಮೆ ಕೇಳುವ ನಾಯಕರ ಮನೆಮುಂದೆ ಪ್ರತಿಭಟನೆ ಎಚ್ಚರಿಕೆ!

85

ಕಾರವಾರ:-ಯಲ್ಲಾಪುರ ಶಾಸಕ ಶಿವರಾಮ (yallapura mla shivaram hebbar) ಹೆಬ್ಬಾರ್ ಅವರ ರಾಜೀನಾಮೆ ನೀಡುವಂತೆ ಬಿಜೆಪಿ ನಾಯಕರು ಪದೇ ಪದೇ ಹೇಳಿಕೆ ನೀಡಿದರೆ, ಅವರ ಮನೆ ಎದುರೇ ಹೆಬ್ಬಾ‌ರ್ ಪರಿವಾರದ ಸದಸ್ಯರೆಲ್ಲ ಜತೆಗೂಡಿ ಪ್ರತಿಭಟನೆ ನಡೆಸುತ್ತೇವೆ ಎಂದು ಶಿವರಾಮ ಹೆಬ್ಬಾರ್ ಅಭಿಮಾನಿ ಬಳಗದ ಅಧ್ಯಕ್ಷ ದ್ಯಾಮಣ್ಣ ದೊಡ್ಮಿನಿ ಬಿಜೆಪಿಗರಿಗೆ ಎಚ್ಚರಿಕೆ ನೀಡಿದ್ದಾರೆ.

ಶಿರಸಿಯಲ್ಲಿ ಪತ್ರಿಕಾ ಗೋಷ್ಟಿ ನಡೆಸಿ ಮಾತನಾಡಿದ ಅವರು ಬಿಜೆಪಿಯಿಂದ ಹೊರ ಬಂದ ನಾವು ಹೆಬ್ಬಾರ್ ಅಭಿಮಾನಿ ಬಳಗ ಕಟ್ಟಿಕೊಂಡಿದ್ದೇವೆ. ಹೆಬ್ಬಾರ್ ಪರಿವಾರವಾಗಿ ನಾವಿದ್ದೇವೆ. ಬಿಜೆಪಿಯ ಕೆಲವರಲ್ಲಿ ಸೈದ್ಧಾಂತಿಕ ಬದ್ಧತೆಯಿಲ್ಲ. ಹೆಬ್ಬಾರ್ ಪಕ್ಷ ಬಿಡುವಂತೆ ಹೇಳಲು ಅಂಥವರಿಗೆ ನೈತಿಕತೆ ಇಲ್ಲ. ಶಾಸಕ ಹೆಬ್ಬಾರ್ ತಪ್ಪೆಸಗಿದರೆ, ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕೆ ಹೊರತು ರಾಜೀನಾಮೆ ಕೇಳುವುದಲ್ಲ. ಇದನ್ನು ಮೊದಲು ಬಿಜೆಪಿಗರು ತಿಳಿದುಕೊಳ್ಳಬೇಕು ಎಂದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯವರೇ ಹೆಬ್ಬಾ‌ರ್ ಅವರನ್ನು ಸೋಲಿಸಲು ಪ್ರಯತ್ನಿಸಿದ್ದರು. ಆದರೆ ಹೆಬ್ಬಾರ್ ಬೆಂಬಲಿಗರು ಅವರನ್ನು ಗೆಲ್ಲಿಸಿದರು. ಪಕ್ಷದ್ರೋಹಿಗಳಿಗೆ ಪಾಠ ಕಲಿಸಲಾಗದ ಬಿಜೆಪಿಯವರು ಈಗ ಹೆಬ್ಬಾರ್ ಅವರನ್ನು ಹೊರಹಾಕಲು ಪ್ರಯತ್ನ ನಡೆಸಿದ್ದಾರೆ ಎಂದು ಅವರು ಟೀಕಿಸಿದರು.

ಇದನ್ನೂ ಓದಿ:-ಯಲ್ಲಾಪುರ | ಬಸ್ ನಿಲ್ದಾಣದಲ್ಲೇ ಮಹಿಳಾ ಕಂಡಾಕ್ಟರ್ ಬಿತ್ತು ಪೆಟ್ಟು!




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!