Karwar | ಮಂಜುಗುಣಿ ಕಡಲ ತೀರದಲ್ಲಿ ಕಡಲಾಮೆ ಮೊಟ್ಟೆ ಗೂಡು ಪತ್ತೆ – ಅರಣ್ಯ ಇಲಾಖೆಯಿಂದ ರಕ್ಷಣೆ

Karwar News:- ಕಾರವಾರ ತಾಲೂಕಿನ ಮಂಜುಗುಣಿ ಕಡಲ ತೀರದಲ್ಲಿ ಅಲಿವ್ ರಿಡ್ಲೆ ಕಡಲಾಮೆ ಮೊಟ್ಟೆ ಗೂಡು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಇನ್‌ಸಿಟು ಕನ್ಸರ್ವೇಷನ್ ಮೂಲಕ ರಕ್ಷಣೆ ಮಾಡಿದೆ.
Olive Ridley sea turtle nest protected by forest department at Manjuguni beach near Karwar, Karnataka. Olive Ridley sea turtle nest protected by forest department at Manjuguni beach near Karwar, Karnataka.
ಕಡಲಾಮೆಗಳ ಮೊಟ್ಟೆ ರಕ್ಷಣೆ ಸ್ಥಳ:- ಕಾರವಾರ

Karwar | ಮಂಜುಗುಣಿ ಕಡಲ ತೀರದಲ್ಲಿ ಕಡಲಾಮೆ ಮೊಟ್ಟೆ ಗೂಡು ಪತ್ತೆ – ಅರಣ್ಯ ಇಲಾಖೆಯಿಂದ ರಕ್ಷಣೆ

Karwar news (20 december 2025):-ಉತ್ತರ ಕನ್ನಡ ಜಿಲ್ಲೆಯ ಕಾರವಾರ (karwar)ತಾಲೂಕಿನ ಮಂಜುಗುಣಿ ಕಡಲ ತೀರದಲ್ಲಿ ಅಲಿವ್ ರಿಡ್ಲೆ ಕಡಲಾಮೆ (Olive Ridley Sea Turtle) ಮೊಟ್ಟೆ ಇಟ್ಟ ಗೂಡು ಪತ್ತೆಯಾಗಿದ್ದು, ಅರಣ್ಯ ಇಲಾಖೆ ರಕ್ಷಣೆ ಮಾಡಿದೆ.

 ಕಡಲ ತೀರ ಪ್ರದೇಶದಲ್ಲಿ ಗಸ್ತು ಸಂಚರಿಸುತ್ತಿದ್ದ ವೇಳೆ, ಸ್ಥಳೀಯ ಮೀನುಗಾರರ ಸಹಕಾರದೊಂದಿಗೆ ಕಡಲಾಮೆ ಮೊಟ್ಟೆ ಇಟ್ಟಿರುವ ಗೂಡನ್ನು ಗುರುತಿಸಲಾಗಿದೆ. ಇದು 2025ನೇ ಸಾಲಿನ ಕಾರವಾರ ಅರಣ್ಯ ವಿಭಾಗದ ಮೊದಲ ಕಡಲಾಮೆ ಮೊಟ್ಟೆ ಗೂಡು ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Olive Ridley sea turtle nest protected by forest department at Manjuguni beach near Karwar, Karnataka.
ಕಡಲಾಮೆಗಳ ಮೊಟ್ಟೆ ರಕ್ಷಣೆ
ಸ್ಥಳ:- ಕಾರವಾರ

ಪತ್ತೆಯಾದ ಮೊಟ್ಟೆಗಳನ್ನು ಅದೇ ಸ್ಥಳದಲ್ಲೇ ಸುರಕ್ಷಿತವಾಗಿ ಸಂರಕ್ಷಿಸುವ ಇನ್‌ಸಿಟು ಕನ್ಸರ್ವೇಷನ್ (In-situ Conservation) ವಿಧಾನದಲ್ಲಿ ರಕ್ಷಣೆ ಮಾಡಲಾಗಿದೆ. ಮೊಟ್ಟೆ ಗೂಡಿನ ಸುತ್ತಲು ಬೇಲಿ ಅಳವಡಿಸಿ, ಎಚ್ಚರಿಕೆ ಫಲಕಗಳನ್ನು ಅಳವಡಿಸಲಾಗಿದೆ.

ಈ ವೇಳೆ ಕಾರವಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್,ಅಂಕೋಲಾ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಯೇಶ್ ಸಿ,ವಲಯ ಅರಣ್ಯಾಧಿಕಾರಿಗಳಾದ ಶ್ರೀ ಪ್ರಮೋದ್ ಹಾಗೂ ಶ್ರೀ ಕಿರಣ್,ಕೋಸ್ಟಲ್ ಮತ್ತು ಮರೈನ್ ಇಕೋ-ಸಿಸ್ಟಮ್ ಘಟಕದ ಸಿಬ್ಬಂದಿಗಳುಮತ್ತು ಸ್ಥಳೀಯ ಮೀನುಗಾರರು ಉಪಸ್ಥಿತರಿದ್ದರು.

Karwar | ಸಿಎಂ ಕನಸು ಹೊತ್ತು ಡಿಕೆಶಿ ದೇವಾಲಯ ದರ್ಶನ – ಆಂದ್ಲೆ ಜಗದೀಶ್ವರಿ ದೇವಿಗೆ ವಿಶೇಷ ಪೂಜೆ.

ಮೊಟ್ಟೆ ಗೂಡು ಪತ್ತೆಹಚ್ಚಲು ಸಹಕರಿಸಿದ ಸ್ಥಳೀಯ ಮೀನುಗಾರರಿಗೆ, ಅರಣ್ಯ ಇಲಾಖೆಯ ವತಿಯಿಂದ ಅಂಕೋಲಾ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರೋತ್ಸಾಹ ಧನ ನೀಡಿ ಗೌರವಿಸಿದರು.

ಕಡಲಾಮೆ ಅಲಿವ್ ರಿಡ್ಲೆ (Olive Ridley) ವಿಶೇಷ ಏನು?

Olive Ridley ಕಡಲಾಮೆಗಳು ಸಾಮಾನ್ಯವಾಗಿ ನವೆಂಬರ್‌ನಿಂದ ಮಾರ್ಚ್ ತಿಂಗಳ ಅವಧಿಯಲ್ಲಿ ಮೊಟ್ಟೆ ಇಡುತ್ತವೆ.ಒಂದು ಕಡಲಾಮೆ ಒಂದೇ ಬಾರಿ ಸುಮಾರು 80ರಿಂದ 120 ಮೊಟ್ಟೆಗಳನ್ನು ಇಡುತ್ತದೆ.

Karwar|ಸರ್ಕಾರ ಖಜಾನೆ ಖಾಲಿ ಅಂತೆ! ಕಾರವಾರದಲ್ಲಿ PWD ಹೆಸರಲ್ಲಿ ಭಿಕ್ಷೆ ಬೇಡಿದ ಆಟೋ ಚಾಲಕರು

ಮೊಟ್ಟೆ ಇಟ್ಟ ನಂತರ ಸುಮಾರು 45 ರಿಂದ 60 ದಿನಗಳಲ್ಲಿ ಮರಿ ಹೊರಬರುತ್ತದೆ.ಮರಿ ಹೊರಬರುವ ಸಮಯದಲ್ಲಿ ಬೆಳಕು, ಶಬ್ದ ಹಾಗೂ ಮಾನವ ಚಲನವಲನ ಕಡಿಮೆ ಇರಬೇಕು.ಇನ್ನು ಹೆಚ್ಚಾಗಿ ಕಡಲ ಆಮೆಗಳು ಹದ್ದು ಹಾಗೂ ಇತರ ಪಕ್ಷಿಯಿಂದ ದಾಳಿಗೊಳಗಾಗಿ ಸಾವು ಕಾಣುತ್ತವೆ. ಹೀಗಾಗಿ ಅರಣ್ಯ ಇಲಾಖೆ ಇವುಗಳ ರಕ್ಷಣೆಗೆ ಕಾರ್ಯ ನಿರ್ವಹಿಸುತ್ತಿದೆ.

ಅವನತಿಯಲ್ಲಿ ಇರಿವ ಕಡಲಾಮೆಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ರಕ್ಷಿತ ಪ್ರಾಣಿಗಳಾಗಿವೆ.

Karwar | ಜಿಲ್ಲಾ ಆಸ್ಪತ್ರೆಯಲ್ಲಿ ಚಿನ್ನಾಭರಣ ಕಳ್ಳತನ |ಸಿಸಿ ಕ್ಯಾಮರಾ ಕೊಟ್ಟ ಸುಳಿವಿನಲ್ಲಿ ಆರೋಪಿ ಅಂದರ್

ಅರಣ್ಯ ಇಲಾಖೆ ಕಡಲಾಮೆ ಮೊಟ್ಟೆ ಗೂಡುಗಳ ರಕ್ಷಣೆಗೆ ಸ್ಥಳೀಯರ ಸಹಕಾರ ಅತ್ಯಂತ ಮುಖ್ಯವಾಗಿದ್ದು, ಸಾರ್ವಜನಿಕರು ಕಡಲ ತೀರದಲ್ಲಿ ಮೊಟ್ಟೆ ಅಥವಾ ಮರಿ ಕಂಡುಬಂದಲ್ಲಿ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement