Karwar | ಚೈನಾ ಟ್ರಾಕರ್ ನೊಂದಿಗೆ ಸಿಕ್ಕ ಸೀಗಲ್ | ಏನಾಯ್ತು ಗೊತ್ತಾ?
Karwar news (20 december2025):– ಕಾರವಾರ (karwar)ಕಡಲ ತೀರ ಭಾಗದ ತಿಮ್ಮಕ್ಕ ಗಾರ್ಡನ್ ಹಿಂಭಾಗದಲ್ಲಿ ಡಿಸೆಂಬರ್ 16 ರಂದು ಸೀಗಲ್ ಹಕ್ಕಿಯ ಬೆನ್ನಿನ ಭಾಗದಲ್ಲಿ ಚೈನಾದ (china)ಜಿಪಿಎಸ್ (GPS)ಟ್ರ್ಯಾಕರ್ ಕಂಡುಬಂದಿ ಹಿನ್ನಲೆಯಲ್ಲಿ ಅರಣ್ಯ ಇಲಾಖೆಯ ಮರೈನ್ ವಿಭಾಗದ ಅಧಿಕಾರಿಗಳಿಗೆ ಆ ಹಕ್ಕಿಯನ್ನು ವಶಕ್ಕೆ ಪಡೆದಿದ್ದರು.
Karwar | ಮಂಜುಗುಣಿ ಕಡಲ ತೀರದಲ್ಲಿ ಕಡಲಾಮೆ ಮೊಟ್ಟೆ ಗೂಡು ಪತ್ತೆ – ಅರಣ್ಯ ಇಲಾಖೆಯಿಂದ ರಕ್ಷಣೆ
GPS ಟ್ರಾಕರ್ ಇದ್ದ ಕಾರಣ ಇದರ ಬಗ್ಗೆ ಪೊಲೀಸ್ ಇಲಾಖೆ ಸಹಿತ ಅರಣ್ಯ ಇಲಾಖೆ ಅಧಿಕಾರಿಗಳು ಅದರ ಮೂಲ ಪತ್ತೆಗೆ ಬೆವರು ಸುರಿಸಿದ್ದರು.
Karwar | ಕರಾವಳಿ ಭಾಗದಲ್ಲಿ ಕೋಲ್ಡ್ ವೇವ್ ಅಲರ್ಟ | ಎರಡು ದಿನ ತೀವ್ರ ಚಳಿ ಎಚ್ವರಿಕೆ
ಆದರೇ ಕೊನೆಗೆ ಜಿಪಿಎಸ್ ಟ್ರಾಕರ್ ಹಾಕಿರುವುದು ಪಕ್ಷಿಯ ಜೀವನ ಕ್ರಮ ಅಧ್ಯಯನಕ್ಕೆ ಎಂಬ ಮಾಹಿತಿ ಹೊರಬಂದರೂ ಪೊಲೀಸ್ ಇಲಾಖೆಯಾಗಲಿ ಅರಣ್ಯ ಇಲಾಖೆಯಾಗಲಿ ಅಧಿಕೃತ ಪ್ರಕಟಣೆ ನೀಡಲಿಲ್ಲ.
Karwar | ಸಿಎಂ ಕನಸು ಹೊತ್ತು ಡಿಕೆಶಿ ದೇವಾಲಯ ದರ್ಶನ – ಆಂದ್ಲೆ ಜಗದೀಶ್ವರಿ ದೇವಿಗೆ ವಿಶೇಷ ಪೂಜೆ.
ಇನ್ನು ಈ ಸೀಗಲ್ ನ ಟ್ರಾಕರ್ ತೆಗೆದು ತಪಾಸಣೆ ಮಾಡಲು ಅರಣ್ಯ ಇಲಾಖೆ ಪ್ರಯತ್ನ ಪಟ್ಟಾಗ ಸೀಗಲ್ ಅನಾರೋಗ್ಯದಲ್ಲಿ ಇರುವುದು ಗೊತ್ತಾಗಿದೆ.
ಏನಾಯ್ತು ಸೀಗಲ್ ಪಕ್ಷಿ?

ಆಹಾರ ಸೇವಿಸದೇ ನಿತ್ರಾಣವಾಗಿದ್ದ ಈ ಸೀಗಲ್ ನನ್ನು ದಾಂಡೇಲಿಯ ವೈಲ್ಡ್ ಲೈಫ್ ರಿಸರ್ಚ & ಟ್ರೈನಿಂಗ್ ಸೆಂಟರ್ (WRTC )ಗೆ ಕಳುಹಿಸಲಾಯಿತು .
ಅಲ್ಲಿ ವೈದ್ಯರು ತಪಾಸಣೆ ನಡೆಸಿದಾಗ ಸೀಗಲ್ ನ ಕಾಲಿನ ನರ ತುಂಡಾಗಿರುವುದು ತಿಳಿದು ಬಂದಿತ್ತು. ಇದಲ್ಲದೇ ಹಲವು ದಿನದಿಂದ ಆಹಾರವನ್ನ ಸೀಗಲ್ ಸೇವಿಸಿರಲಿಲ್ಲ.
ಹೊಟ್ಟೆಯಲ್ಲಿ ಆಹಾರವೇ ಇರದೇ ನಿತ್ರಾಣವಾಗಿದ್ದ ಈ ಸೀಗಲ್ ದಾಂಡೇಲಿಯ WRTC ಕೇಂದ್ರದಲ್ಲಿ ಕೊನೆವುಸಿರು ಚಲ್ಲಿದೆ.
ಸೀಗಲ್ ಸಾವನ್ನು ದೃಢಪಡಿಸಿರುವ ಅರಣ್ಯ ಇಲಾಖೆ ಅದರ ಮರಣೋತ್ತರ ಪರೀಕ್ಷೆ ನಡೆಸಿ ,ಆಹಾರ ಸೇವಿಸದೇ ಗಾಯದಿಂದ ಸಾವು ಕಂಡಿರುವುದನ್ನ ದೃಢಪಡಿಸಿದೆ.






