Karwar | ಚೈನಾ GPS ಟ್ರಾಕರ್ ಹೊಂದಿದ್ದ ಸೀಗಲ್ ಸಾವು – ಅರಣ್ಯ ಇಲಾಖೆ ತನಿಖೆ ವಿವರ ಏನು?

Karwar news:-ಕಾರವಾರ ಕಡಲ ತೀರದಲ್ಲಿ ಚೈನಾ GPS ಟ್ರಾಕರ್ ಹೊಂದಿದ್ದ ಸೀಗಲ್ ಪತ್ತೆ. ದಾಂಡೇಲಿ Wildlife Research & Training Centre ನಲ್ಲಿ ಚಿಕಿತ್ಸೆ ವೇಳೆ ಸೀಗಲ್ ಸಾವು. ಸಂಪೂರ್ಣ ವರದಿ.
China GPS tracker found on seagull at Karwar beach China GPS tracker found on seagull at Karwar beach
China GPS tracker found on seagull at Karwar beach

Karwar | ಚೈನಾ ಟ್ರಾಕರ್ ನೊಂದಿಗೆ ಸಿಕ್ಕ ಸೀಗಲ್ | ಏನಾಯ್ತು ಗೊತ್ತಾ?

 

Karwar news (20 december2025):– ಕಾರವಾರ (karwar)ಕಡಲ ತೀರ ಭಾಗದ ತಿಮ್ಮಕ್ಕ ಗಾರ್ಡನ್ ಹಿಂಭಾಗದಲ್ಲಿ  ಡಿಸೆಂಬರ್ 16 ರಂದು  ಸೀಗಲ್ ಹಕ್ಕಿಯ ಬೆನ್ನಿನ ಭಾಗದಲ್ಲಿ ಚೈನಾದ (china)ಜಿಪಿಎಸ್ (GPS)ಟ್ರ್ಯಾಕರ್ ಕಂಡುಬಂದಿ ಹಿನ್ನಲೆಯಲ್ಲಿ ಅರಣ್ಯ ಇಲಾಖೆಯ ಮರೈನ್ ವಿಭಾಗದ ಅಧಿಕಾರಿಗಳಿಗೆ ಆ ಹಕ್ಕಿಯನ್ನು ವಶಕ್ಕೆ ಪಡೆದಿದ್ದರು.

Karwar | ಮಂಜುಗುಣಿ ಕಡಲ ತೀರದಲ್ಲಿ ಕಡಲಾಮೆ ಮೊಟ್ಟೆ ಗೂಡು ಪತ್ತೆ – ಅರಣ್ಯ ಇಲಾಖೆಯಿಂದ ರಕ್ಷಣೆ

Advertisement

GPS ಟ್ರಾಕರ್ ಇದ್ದ ಕಾರಣ ಇದರ ಬಗ್ಗೆ ಪೊಲೀಸ್ ಇಲಾಖೆ ಸಹಿತ ಅರಣ್ಯ ಇಲಾಖೆ ಅಧಿಕಾರಿಗಳು ಅದರ ಮೂಲ ಪತ್ತೆಗೆ ಬೆವರು ಸುರಿಸಿದ್ದರು.

Karwar | ಕರಾವಳಿ ಭಾಗದಲ್ಲಿ ಕೋಲ್ಡ್ ವೇವ್ ಅಲರ್ಟ | ಎರಡು ದಿನ ತೀವ್ರ ಚಳಿ ಎಚ್ವರಿಕೆ

ಆದರೇ ಕೊನೆಗೆ ಜಿಪಿಎಸ್ ಟ್ರಾಕರ್ ಹಾಕಿರುವುದು ಪಕ್ಷಿಯ ಜೀವನ ಕ್ರಮ ಅಧ್ಯಯನಕ್ಕೆ ಎಂಬ ಮಾಹಿತಿ ಹೊರಬಂದರೂ ಪೊಲೀಸ್ ಇಲಾಖೆಯಾಗಲಿ ಅರಣ್ಯ ಇಲಾಖೆಯಾಗಲಿ ಅಧಿಕೃತ ಪ್ರಕಟಣೆ ನೀಡಲಿಲ್ಲ.

Karwar | ಸಿಎಂ ಕನಸು ಹೊತ್ತು ಡಿಕೆಶಿ ದೇವಾಲಯ ದರ್ಶನ – ಆಂದ್ಲೆ ಜಗದೀಶ್ವರಿ ದೇವಿಗೆ ವಿಶೇಷ ಪೂಜೆ.

ಇನ್ನು ಈ ಸೀಗಲ್ ನ ಟ್ರಾಕರ್ ತೆಗೆದು ತಪಾಸಣೆ ಮಾಡಲು ಅರಣ್ಯ ಇಲಾಖೆ ಪ್ರಯತ್ನ ಪಟ್ಟಾಗ ಸೀಗಲ್ ಅನಾರೋಗ್ಯದಲ್ಲಿ ಇರುವುದು ಗೊತ್ತಾಗಿದೆ.

ಏನಾಯ್ತು ಸೀಗಲ್ ಪಕ್ಷಿ?

China GPS tracker found on seagull at Karwar beach
China GPS tracker found on seagull at Karwar beach

ಆಹಾರ ಸೇವಿಸದೇ ನಿತ್ರಾಣವಾಗಿದ್ದ ಈ ಸೀಗಲ್ ನನ್ನು ದಾಂಡೇಲಿಯ ವೈಲ್ಡ್ ಲೈಫ್ ರಿಸರ್ಚ & ಟ್ರೈನಿಂಗ್ ಸೆಂಟರ್  (WRTC )ಗೆ ಕಳುಹಿಸಲಾಯಿತು .

ಅಲ್ಲಿ ವೈದ್ಯರು ತಪಾಸಣೆ ನಡೆಸಿದಾಗ ಸೀಗಲ್ ನ ಕಾಲಿನ ನರ ತುಂಡಾಗಿರುವುದು ತಿಳಿದು ಬಂದಿತ್ತು. ಇದಲ್ಲದೇ ಹಲವು ದಿನದಿಂದ ಆಹಾರವನ್ನ ಸೀಗಲ್ ಸೇವಿಸಿರಲಿಲ್ಲ.

ಹೊಟ್ಟೆಯಲ್ಲಿ ಆಹಾರವೇ ಇರದೇ ನಿತ್ರಾಣವಾಗಿದ್ದ ಈ ಸೀಗಲ್ ದಾಂಡೇಲಿಯ WRTC ಕೇಂದ್ರದಲ್ಲಿ ಕೊನೆವುಸಿರು ಚಲ್ಲಿದೆ.

ಸೀಗಲ್ ಸಾವನ್ನು ದೃಢಪಡಿಸಿರುವ ಅರಣ್ಯ ಇಲಾಖೆ ಅದರ ಮರಣೋತ್ತರ ಪರೀಕ್ಷೆ ನಡೆಸಿ ,ಆಹಾರ ಸೇವಿಸದೇ ಗಾಯದಿಂದ ಸಾವು ಕಂಡಿರುವುದನ್ನ ದೃಢಪಡಿಸಿದೆ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement