Karwar| ಬೆಂಗಳೂರಿನಿಂದ ಬಂತು ಹೆಲಿಕಾಪ್ಟರ್ ಕಾರವಾರ ಕಡಲತೀರದಲ್ಲಿ ಭೂಸ್ಪರ್ಷ |ಪೊಲೀಸರಿಗೆ ತಂತು ಪಚೀತಿ!

Karwar news :- ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಒಂದೆಡೆ ಕರಾವಳಿ ಉತ್ಸವ ಭರದಿಂದ ಸಾಗುತ್ತಿದೆ. ಮತ್ತೊಂದೆಡೆ ಜನರ ಮನೋರಂಜನೆಗಾಗಿ ಬೆಂಗಳೂರಿನ ಖಾಸಗಿ ಕಂಪನಿಯೊಂದು ಹೆಲಿಕಾಪ್ಟರ್ ನನ್ನು ತಂದು ಕಾರವಾರದ ಲಂಡನ್ ಬ್ರಿಡ್ಜ್ ನ ಪಕ್ಕದಲ್ಲಿ ಇಳಿಸಿದ್ದು ನಾಳೆಯಿಂದ ಹೆಲಿಕಾಪ್ಟರ್ ಏರಲು ಬಯಸುವ ಜನರನ್ನು ಏಳು ನಿಮಿಷದ ಕಾಲ ಬಾನಲ್ಲಿ ಸುತ್ತಿಸಲಿದೆ.
Karwar | ಕಾರವಾರ ಕಡಲ ತೀರದಲ್ಲಿ ಮಹಿಳೆ ಶವಪತ್ತೆ|ಅತ್ಯಾಚಾರ ಮಾಡಿರುವ ಶಂಕೆ!
ಈ ಹೆಲಿಕಾಪ್ಟರ್ ಇಂದು ಸಂಜೆ ಬೆಂಗಳೂರಿನಿಂದ ಕಾರವಾರಕ್ಕೆ ಬಂದಿದೆ. ಕೆಲವು ಸಿಬ್ಬಂದಿಗಳ ಜೊತೆ ಬಂದ ಈ ಹೆಲಿಕಾಪ್ಟರ್ ಲಂಡನ್ ಬ್ರಿಡ್ಜ್ ನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ನಿಲ್ಲಿಸಲಾಗಿದ್ದು ಪೊಲೀಸರಿಗೆ ಭದ್ರತೆಗೆ ನಿಯೋಜನೆ ಮಾಡಲಾಗಿದೆ.
Karwar | ಕರಾವಳಿ ಉತ್ಸವ ಸೋನು ನಿಗಮ್ ಗೆ ಎದುರಾಯ್ತು ಸಂಕಷ್ಟ! ಕರವೇ ವಿರೋಧ
ಇನ್ನು ಹೆಲಿಕಾಪ್ಟರ್ ತಂದ ಕ್ಯಾಪ್ಟನ್ ಸೇರಿದಂತೆ ಸಿಬ್ಬಂದಿಗಳು ವ್ಯವಸ್ತಿತವಾಗಿ ವ್ಯವಸ್ಥೆ ಮಾಡುವುದರೊಳಗೆ ಲಾಂಡಿಂಗ್ ಮಾಡಿ ಊಟದ ನೆಪದಲ್ಲಿ ಹೆಲಿಕಾಪ್ಟರ್ ಬಿಟ್ಟು ತೆರಳಿದ್ದಾರೆ.

ಹೆಲಿಕಾಪ್ಟರ್ ತಂದ ಸಿಬ್ಬಂದಿಗಾಗಿ ಕಾದು ಸುಸ್ತಾದ ಪೊಲೀಸರು ಕುದ್ದು ಹೆಸ್ಕಾಂ ಸಿಬ್ಬಂದಿ ಕರೆಯಿಸಿ ಲೈಟಿಂಗ್ ವ್ಯವಸ್ಥೆ ಮಾಡಿಸಿದೆರು.
Kumta | ವೈದ್ಯಕೀಯ ಪರೀಕ್ಷೆ ವೇಳೆ ಪರಾರಿಯಾಗಿ ಹುಡುಗಿ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲು ಹೋಗಿದ್ದ ಆರೋಪಿ ಸೆರೆ!
ಇಷ್ಟಡಲ್ಲಾ ಮಾಡಿಸಿದರೂ ಸ್ಥಳಕ್ಕೆ ಮಾತ್ರ ಹೆಲಿಕಾಪ್ಟರ್ ಗೆ ಸಮ್ಮಂದಪಟ್ಟ ಸಿಬ್ಬಂದಿಗಳು ಬರಲಿಲ್ಲ. ಇನ್ನು ಅವರಿಗಾಗಿ ಪೊಲೀಸ್ ಅಧಿಕಾರಿಗಳು ಹಲವು ಸಮಯ ಸಮಯ ವ್ಯರ್ಥ ಮಾಡುವಂತಾಯಿತು.
ಇಷ್ಟು ನಿರ್ಲಕ್ಷ ಮಾಡುವ ಹೆಲಿಕಾಪ್ಟರ್ ಸಿಬ್ಬಂದಿ ನಾಳೆಯಿಂದ ಹಣಕೊಟ್ಟು ಹೋಗುವ ಜನರ ಸುರಕ್ಷತೆ ಹೇಗೆ ನಿರ್ವಹಿಸುತ್ತಾರೆ ಎಂಬ ಪ್ರಶ್ನೆ ಎದ್ದಿದೆ.
ಒಟ್ಟಿನಲ್ಲಿ ಕರಾವಳಿ ಉತ್ಸವದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರ ಹೆಣಗಾಟ ಆ ದೇವರಿಗೇ ಪ್ರೀತಿ ಎನ್ನುವಂತಾಗಿದೆ.







