Karwar | ಕರಾವಳಿ ಉತ್ಸವ ಸೋನು ನಿಗಮ್ ಗೆ ಎದುರಾಯ್ತು ಸಂಕಷ್ಟ! ಕರವೇ ವಿರೋಧ 

Karwar:-Karavali Utsava in Karwar faces controversy as Karave demands cancellation of Sonu Nigam’s program, alleging neglect of Kannada artists.
Karnataka Rakshana Vedike protests against Sonu Nigam performance, alleging neglect of Kannada artists at Karavali Utsava in Karwar Karnataka Rakshana Vedike protests against Sonu Nigam performance, alleging neglect of Kannada artists at Karavali Utsava in Karwar
ಮನವಿ ನೀಡಿದ ಕರವೇ

Karwar | ಕರಾವಳಿ ಉತ್ಸವ ಸೋನು ನಿಗಮ್ ಗೆ ಎದುರಾಯ್ತು ಸಂಕಷ್ಟ! ಕರವೇ ವಿರೋಧ 

Karwar news (18 december2025) :– ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ (karwar) ನಡೆಯುವ ಕರಾವಳಿ ಉತ್ಸವ ಕಾರ್ಯಕ್ರಮದಲ್ಲಿ ಸಂಗೀತಗಾರ ಸೀನು ನಿಗಮ್ ಕಾರ್ಯಕ್ರಮ ರದ್ದು ಮಾಡಬೇಕು ಇಲ್ಲವಾದಲ್ಲಿ ವೇದಿಕೆಯ ಮೇಲೆ ಕಪ್ಪು ಪಟ್ಟಿ ಪ್ರದರ್ಶಿಸಿ ಪ್ರತಿಭಟನೆಯ ಎಚ್ಚರಿಕೆಯನ್ನು ಕರ್ನಾಟಕ ರಕ್ಷಣಾ ವೇದಿಕೆ (ಪುವೀಣ್ ಶೆಟ್ಟ ಬಣ)ಆಗ್ರಹಿಸಿದೆ.

Karwar| ಕಡಲ ತೀರದಲ್ಲಿ ಸೀಗಲ್ ಹಕ್ಕಿಯ ದೇಹದಲ್ಲಿ ಚೀನಾ GPS ಟ್ರ್ಯಾಕರ್ ಪತ್ತೆ.

Advertisement

ಕರ್ನಾಟಕ ರಕ್ಷಣಾ ವೇದಿಕೆ. (ಪ್ರವೀಣ್ ಶೆಟ್ಟಿ ಬಣ)ದ ಜಿಲ್ಲಾಧ್ಯಕ್ಷ ಅಕ್ಷಯ್ ನಾಗೇಕರ್ ಇಂದು ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

Karnataka Rakshana Vedike protests against Sonu Nigam performance, alleging neglect of Kannada artists at Karavali Utsava in Karwar
ಮನವಿ ನೀಡಿದ ಕರವೇ

ಕರಾವಳಿ ಉತ್ಸವಕ್ಕೆರಾಜ್ಯದ ಕನ್ನಡ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಬೇಕು ಹಾಗೆಯೇ ಕನ್ನಡ ವಿರೋಧಿ ಸೋನು ನಿಗಮ ರವರ ಕಾರ್ಯಕ್ರಮ ರದ್ದು ಗೊಳಿಸಬೇಕು.

ಕರಾವಳಿ ಉತ್ಸವ ಡಿಸೆಂಬರ್ 22 ರಿಂದ 28 ರವರೆಗೆ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ನಡೆಯಲಿರುವ ಈ ಏಳು ದಿನಗಳ ಉತ್ಸವವು ಸಾಂಸ್ಕೃತಿಕ ವೈಭವಕ್ಕಿಂತ ಹೆಚ್ಚಾಗಿ ವಿವಾದಗಳ ಕೇಂದ್ರಬಿಂದುವಾಗಿ ಮಾರ್ಪಟ್ಟಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 5 ಕೋಟಿ ರೂಪಾಯಿ ಅನುದಾನವಿದ್ದರೂ, ಕನ್ನಡದ ಕಲಾವಿದರನ್ನು ಕಡೆಗಣಿಸಿ ಪಾಶ್ಚಿಮಾತ್ಯ ಸಂಸ್ಕೃತಿಗೆ ಕೆಂಪು ಹಾಸು ಹಾಸಲಾಗಿದೆ.

Karwar|ಸರ್ಕಾರ ಖಜಾನೆ ಖಾಲಿ ಅಂತೆ! ಕಾರವಾರದಲ್ಲಿ PWD ಹೆಸರಲ್ಲಿ ಭಿಕ್ಷೆ ಬೇಡಿದ ಆಟೋ ಚಾಲಕರು

ಜಿಲ್ಲಾಡಳಿತದ ನೇತೃತ್ವದಲ್ಲಿ ನಡೆಯುತ್ತಿರುವ ಈ ಉತ್ಸವದಲ್ಲಿ, ಪ್ರತಿದಿನ ಸಂಜೆ ರಾಜ್ಯ ಹಾಗೂ ಸ್ಥಳೀಯ ಕಲಾವಿದರಿಗೆ ವೇದಿಕೆ ಕಲ್ಪಿಸುವುದಾಗಿ ಆರಂಭದಲ್ಲಿ ಹೇಳಲಾಗಿತ್ತು. ಆದರೆ, ಅಂತಿಮವಾಗಿ ಕಾರ್ಯಕ್ರಮದ ಪಟ್ಟಿ ಬಿಡುಗಡೆಯಾದಾಗ ಚಿಂತ್ರಣವೇ ಬದಲಾಗಿದೆ. ಕನ್ನಡದ ಕಲಾವಿದರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ. ಹೊರರಾಜ್ಯದ ಹಾಗೂ ಪಾಶ್ಚಿಮಾತ್ಯ ಶೈಲಿಯ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಿರುವುದು ಸರಿಯಲ್ಲಾ.

Karave protest against Sonu Nigam program at Karavali Utsava, Karwar
ಕಾರವಾರದ ಕರಾವಳಿ ಉತ್ಸವದಲ್ಲಿ ಸೋನು ನಿಗಮ್ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ಕರವೇ ಕಾರ್ಯಕರ್ತರು ಮನವಿ ಸಲ್ಲಿಸಿದರು

 

ಹಿಂದಿನ ವರ್ಷಗಳಲ್ಲಿ ವೇದಿಕೆ ನಿರ್ಮಾಣ ಸೇರಿದಂತೆ ಉತ್ಸವದ ವಿವಿಧ ಜವಾಬ್ದಾರಿಗಳನ್ನು ಜಿಲ್ಲೆಯ ಕಲಾವಿದರು ಮತ್ತು ಸ್ಥಳೀಯ ಕುಶಲಕರ್ಮಿಗಳಿಗೆ ನೀಡಲಾಗುತ್ತಿತ್ತು. ಇದರಿಂದ ಸ್ಥಳೀಯರಿಗೆ ಉದ್ಯೋಗ ದೊರೆತು, ಆ ಹಣದಿಂದ ಅವರು ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದರು. ಅದರೆ ಈ ಬಾರಿ ಸಂಪ್ರದಾಯ ಮುರಿದು. ಹೊರಗಿನ ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಗಳಿಗೆ ಗುತ್ತಿಗೆ ನೀಡುವ ಮೂಲಕ ಸ್ಥಳೀಯರ ಹೊಟ್ಟೆಯ ಮೇಲೆ ಹೊಡೆಯಲಾಗಿದೆ. ಕಳೆದ ಬಾರಿ ಜನಮನ ಸೆಳೆದಿದ್ದ ಕೃಷಿ ಫಲಪುಷ್ಪ ಚಿತ್ರಕಲೆ ಪ್ರದರ್ಶನ ಮತ್ತು ಕ್ರೀಡಾ ಸ್ಪರ್ಧೆ, ಪ್ರದರ್ಶನಗಳ ಬದಲಿಗೆ, ಈ ಬಾರಿ ನಮ್ಮತನವನ್ನು ಬಿಟ್ಟು ಅನ್ಯ ಸಂಸ್ಕೃತಿಯ ಪ್ರದರ್ಶನಕ್ಕೆ ಒತ್ತು ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement