Karwar|ಕಾಳಿ ನದಿಯ ಕಾಳಿ ದೇವಿ ಜಾತ್ರೆ| ನಿಂಬೆಹಣ್ಣಿನ ಹರಕೆ ಏನಿದು ವಿಶೇಷ

Karwar news:-The annual Kali Devi Jatra was celebrated on an island in the Kali River at Karwar.
Devotees traveling by boats to Kali Devi temple located on an island in the Kali River during the annual Kali Devi Jatra in Karwar, Uttara Kannada. Devotees traveling by boats to Kali Devi temple located on an island in the Kali River during the annual Kali Devi Jatra in Karwar, Uttara Kannada.
ಕಾರವಾರ ಕಾಳಿ ದೇವಿ ದೇವಾಲಯ

Karwar|ಕಾಳಿ ನದಿಯ ಕಾಳಿ ದೇವಿ ಜಾತ್ರೆ| ನಿಂಬೆಹಣ್ಣಿನ ಹರಕೆ ಏನಿದು ವಿಶೇಷ

IMG 20250125 WA0007
ಪ್ರಕೃತಿ ಮೆಡಿಕಲ್ ,ಕಾರವಾರ.

Karwar news 01 January 2026 :-ಭಾರತೀಯರಾದ ನಾವು  ನದಿಗಳನ್ನು ದೇವರಸ್ಥಾನದಲ್ಲಿ ಇಟ್ಟು ಪೂಜೆ ಗೈಯುತ್ತೇವೆ. ಜೀವನದಿ ಕಾವೇರಿಗೆ ಪ್ರತಿವರ್ಷ ತೀರ್ಥ ಉದ್ಭವವಾದ ದಿನ ಪೂಜೆ ನಡೆಸಿದರೇ , ರಾಜ್ಯಕ್ಕೆ ಬೆಳಕು ನೀಡಿ ,ಲಕ್ಷಾಂತರ ಜನರ ಜೀವ ನದಿಯಾದ ಕಾಳಿ ನದಿಗೆ ಕರಾವಳಿಗರು ಪ್ರತಿ ವರ್ಷ ಜನವರಿ ತಿಂಗಳಲ್ಲಿ ಪೂಜೆ ಸಲ್ಲಿಸಿ ಸಂವೃದ್ಧಿಯ ಪ್ರಾರ್ಥನೆ ಸಲ್ಲಿಸುತ್ತಾರೆ.

Devotees traveling by boats to Kali Devi temple located on an island in the Kali River during the annual Kali Devi Jatra in Karwar, Uttara Kannada.
ಕಾರವಾರ ಕಾಳಿ ದೇವಿ ದೇವಾಲಯ

 ಕಾರವಾರನಗರದ(karwar) ಕಾಳಿ ನದಿ ನಡುಗಡ್ಡೆಯಲ್ಲಿ ಗುರುವಾರ ಕಾಳಿ ದೇವಿಯ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗಿದೆ.

Advertisement

Karwar |ಬೇಡ್ತಿ,ವರದಾ ನದಿ ತಿರುವು ಯೋಜನೆ, ಶರಾವತಿ ಪಂಪ್ ಸ್ಟೋರೇಜ್ ಯೋಜನೆ ಮಾಡುವುದಾಗಿ -ಡಿಕೆ ಶಿವಕುಮಾರ್ ಪುನರುಚ್ಛಾರ

ನಗರದ ಕೊಡಿಭಾಗದಿಂದ ಎರಡು ಕಿಲೋಮೀಟರ್ ದೂರದ ವಿಶಾಲ ದ್ವೀಪದಲ್ಲಿರುವ ಕಾಳಿ ದೇವಿಯನ್ನು ಅನಾದಿಕಾಲದಿಂದಲೂ ಪೂಜಿಸಲಾಗುತ್ತಿದೆ.

ಪ್ರತಿ ವರ್ಷದಂತೆ ಈ ಬಾರಿಯು ಮೂರು ದಿನಗಳ ಜಾತ್ರೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ದೇವಿಯ ದರ್ಶನ ಪಡೆಯಲು ನಂದನಗದ್ದಾದ ಸಂತೋಷಿ ಮಾತಾ ದೇವಸ್ಥಾನ ಬಳಿಯ ಕಾಳಿನದಿಯ ದಡದಿಂದ ದೋಣಿಯ ವ್ಯವಸ್ಥೆ ಕಲ್ಪಿಸಲಾಗಿತ್ತು.

Boat service arranged for devotees to reach Kali Devi temple on Kali River island during the Kali Devi Jatra in Karwar.
ಕಾಳಿ ನದಿ ದೇವಸ್ಥಾನ ಕ್ಕೆ ತೆರಳಲು ಬೋಟ್ ವ್ಯವಸ್ಥೆ

 ಈ ವಿಶಿಷ್ಠ ಅನುಭವ ಪಡೆಯುವುದಕ್ಕಾಗಿಯೇ ಸಾಕಷ್ಟು ಜನರು ಜಿಲ್ಲೆಯಿಂದ ಮಾತ್ರವಲ್ಲದೆ ಗೋವಾ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯದಿಂದಲೂ ಅನೇಕ ಭಕ್ತರು ದೇವಿಯ ದರ್ಶನ ಪಡೆಯಲು ಆಗಮಿಸಿದ್ದ ನೂರಾರು ಭಕ್ತರು ದೋಣಿಗಳ ಮೂಲಕ ತೆರಳಿ ಕಾಳಿಕಾ ಮಾತೆಯ ದರ್ಶನ ಪಡೆದರು.

Karwar| ಡಿ28 ಕಾರವಾರದ ಈ ಭಾಗದಲ್ಲಿ ಒಂದು ದಿನ ಮೀನುಗಾರಿಕೆ ನಿಷೇಧ|ಕಾರಣ ಇಲ್ಲಿದೆ.

ಜಾತ್ರೆಯ ಮೊದಲ ದಿನವಾದ ಹೋಮ ಹವನ ಸೇರಿದಂತೆ ವಿಶೇಷ ಪೂಜೆ ಸಲ್ಲಿಸಲಾಯಿತು. ಗುರುವಾರ ಭಕ್ತರು ದೀಪ ಹಚ್ಚುವ ಹಾಗೂ ದೇವಿಗೆ ಲಿಂಬೆ ಹಣ್ಣಿನ ಹಾರ ನೀಡುವ ಮೂಲಕ ಇಷ್ಟಾರ್ಥಗಳನ್ನು ಪ್ರಾರ್ಥಿಸಿಕೊಂಡರು.

ನಿಂಬೆ ಹಣ್ಣಿನ ವಿಶೇಷ

Hundreds of devotees visiting Kali Devi temple on Kali River island during the annual religious festival in Karwar.
ದೇವಾಲಯದ ಆವರಣ

ಈ ದೇವಿಗೆ ಇಷ್ಟಾರ್ಥ ಸಿದ್ದಿಗಾಗಿ ನಿಂಬೆಹಣ್ಣನ್ನು ನೀಡಲಾಗುತ್ತದೆ. ನಿಂಬೆಹಣ್ಣಿನ ಹಾರ ಮಾಡಿ ದೇವಿಗೆ ಅರ್ಪಣೆ ಮಾಡುವುದು ಇಲ್ಲಿನ ವಿಶೇಷ.

ಹರಕೆ ಕಟ್ಟಿಕೊಳ್ಳುವವರು ನಿಂಬೆಹಣ್ಣಿನ ಹಾರ ಹಾಕುವ ಹರಕೆ ಕಟ್ಟಿಕೊಳ್ಳುತ್ತಾರೆ.ಈಮೂಲಕ ಪ್ರಾರ್ಥನೆ ಸಲ್ಲಿಸುವ ಭಕ್ತರು ,ಇಷ್ಟಾರ್ಥ ನೆರವೇರಿದ ನಂತರ ಕಾಳಿ ದೇವಿಗೆ ನಿಂಬೆ ಹಣ್ಣಿನ ಹಾರವನ್ನು ಹರಕೆ ರೂಪದಲ್ಲಿ ಸಲ್ಲಿಕೆ ಮಾಡುತ್ತಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement