Honnavar| ಪಂಪ್ ಸ್ಟೋರೇಜ್ ಯೋಜನೆ ವಿರೋಧಿಸಿ ಡಿಸಿಎಂ ಎದುರು ಒಂದೂ ಮಾತನಾಡದ ದಗಲಬಾಜಿಗಳು-ಸಚಿವ ವೈದ್ಯ ಹೇಳಿದ್ದು ಯಾರಿಗೆ?
Honnavar:- ಶರಾವತಿ ಪಂಪ್ ಸ್ಟೋರೇಜ್ ಯೋಜನೆ ವಿರೋಧಿಸಿ ಹೊನ್ನಾವರದಲ್ಲಿನ (honnavar) ಮೂಡಗಣಪತಿ ದೇವಾಲಯದಲ್ಲಿ ಶರಾವತಿ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಮಾವೇಶದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಭಾಗವಹಿಸಿ ಮಾತನಾಡಿ ತಾನು ಶರಾವತಿ ಪಂಪ್ ಸ್ಟೋರೇಜ್ ಯೋಜನೆ ಗೆ ಸಂಪೂರ್ಣ ವಿರೋಧ ವ್ಯಕ್ತಪಡಿಸುವುದಾಗಿ ಹೇಳಿದರು.
Karwar |ಮುಖ್ಯಮಂತ್ರಿಗಳ ಮುಂದೆ ಹೊರಬರಲಿಲ್ಲ ಪತ್ರಕರ್ತರ ನೂರೆಂಟು ಪ್ರಶ್ನೆಗಳು ! ಕಾರವಾರದಲ್ಲಿ ಆಗಿದ್ದೇನು?
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಇತ್ತೀಚೆಗೆ ನಡೆದ ಕರಾವಳಿ ಉತ್ಸವದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಶರಾವತಿ ಪಂಪ್ ಸ್ಟೋರೇಜ್ ಯೋಜನೆ ಮಾಡುವುದನ್ನ ವಿರೋಧಿಸಿ ಯಾರೂ ಕೂಡ ಒಂದೂ ಮಾತನಾಡಲಿಲ್ಲ ,ದಗಲಬಾಜಿ ರಾಜಕಾರಣ ಮಾಡುವವರು , ರಾಜಕಾರಣ ಮಾಡಲು ಯೋಗ್ಯತೆ ಇರಬೇಕು ಎಂದು ಕಿಡಿ ಕಾರಿದರು.
ಮಂಕಾಳು ವೈದ್ಯ ಹೇಳಿದ್ದೇನು? ವಿಡಿಯೋ ಇಲ್ಲಿದೆ.
ಆದರೇ ಡಿ.ಸಿ.ಎಂ ಶರಾವತಿ ಪಂಪ್ ಸ್ಟೋರೇಜ್ ಮಾಡುವುದಾಗಿ ಹೇಳಿದಾಗ ಕುದ್ದು ಸಚಿವರೇ ಪಕ್ಕದಲ್ಲಿ ಕುಳಿತಿದ್ದರು ಆಗ ಏಕೆ ವಿರೋಧ ವ್ಯಕ್ತಪಡಿಸಲಿಲ್ಲ? ಬೇಡ ಎಂದು ಏಕೆ ಹೇಳಲಿಲ್ಲ ಎಂಬ ಪ್ರಶ್ನೆ ಏಳುವಂತೆ ಮಾಡಿದೆ.
ಡಿಕೆ ಶಿವಕುಮಾರ್ ಹೇಳಿಕೆ ವಿಡಿಯೋ ನೋಡಿ:-
ಸಚಿವ ಮಂಕಾಳು ವೈದ್ಯ ಶರಾವತಿ ಪಂಪ್ ಸ್ಟೋರೇಜ್ ಹೋರಾಟ ಸಮಿತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ತಮ್ಮ ಮುಖಕ್ಕೆ ತಾವೇ ಉಗಿದುಕೊಂಡಂತಾಗಿದೆ.
Sharavathi|ಪಂಪ್ ಸ್ಟೋರೇಜ್ ಸ್ಥಳ ಪರಿಶೀಲನೆ ವರದಿಗೆ ವನ್ಯಜೀವಿ ಮಂಡಳಿ ನಿರ್ದೇಶನ|ವಿವರ ನೋಡಿ
ನಾನು ಎಲ್ಲದಕ್ಕೂ ವಿರೋಧ ಇದ್ದೇನೆ ಎನ್ನುವ ಇವರು ದೆಹಲಿಗೆ ನಿಯೋಗ ಹೋದಾಗ ಗೈರಾಗಿದ್ದು ಏಕೆ ಎಂಬ ಪ್ರಶ್ನೆ ಏಳುವಂತೆ ಮಾಡಿದೆ.
ರಾಜಕಾರಣ ಮಾಡುವುದಕ್ಕೆ ಸುಳ್ಳು ಹೇಳುವುದು ಬಿಟ್ಟರೇ ಏನೂ ಇಲ್ಲ ಎಂದು ಸಭೆಯಲ್ಲಿ ಇನ್ನೊಬ್ಬರನ್ನ ಬೊಟ್ಟುಮಾಡಿದ ಸಚಿವರು ,ಏನು ಮಾತನಾಡಿದರೂ ನಾನು ಉತ್ತರ ಕೊಡಲು ಸಿದ್ದ ಎಂದು ಸಭೆಯಲ್ಲಿ ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡರು.
ಆದರೇ ಸತ್ಯ ಬೇರೆಯೇ ಇದೆ ಎಂಬುದು ಮಾತ್ರ ಸ್ಥಳೀಯರಿಗೆ ಮಾತ್ರ ಗೊತ್ತಿರುವ ವಿಷಯವಾಗಿದೆ.







