Honnavar| ಪಂಪ್ ಸ್ಟೋರೇಜ್ ಯೋಜನೆ ವಿರೋಧಿಸಿ ಡಿಸಿಎಂ ಎದುರು ಒಂದೂ ಮಾತನಾಡದ ದಗಲಬಾಜಿಗಳು-ಸಚಿವ ವೈದ್ಯ ಹೇಳಿದ್ದು ಯಾರಿಗೆ?

Honnavar:District in-charge minister Mankal Vaidya criticized Honnavar Congress leaders during the Sharavathi pump storage project protest meeting held at Mudaganapati temple in Honnavar, Uttara Kannada district.
Minister Mankal Vaidya speaking at Sharavathi pump storage protest meeting in Honnavar Uttara Kannada Minister Mankal Vaidya speaking at Sharavathi pump storage protest meeting in Honnavar Uttara Kannada
Minister Mankal Vaidya speaking at Sharavathi pump storage protest meeting in Honnavar Uttara Kannada

Honnavar| ಪಂಪ್ ಸ್ಟೋರೇಜ್ ಯೋಜನೆ ವಿರೋಧಿಸಿ ಡಿಸಿಎಂ ಎದುರು ಒಂದೂ ಮಾತನಾಡದ ದಗಲಬಾಜಿಗಳು-ಸಚಿವ ವೈದ್ಯ ಹೇಳಿದ್ದು ಯಾರಿಗೆ?

 

Honnavar:- ಶರಾವತಿ ಪಂಪ್ ಸ್ಟೋರೇಜ್ ಯೋಜನೆ ವಿರೋಧಿಸಿ ಹೊನ್ನಾವರದಲ್ಲಿನ (honnavar) ಮೂಡಗಣಪತಿ ದೇವಾಲಯದಲ್ಲಿ ಶರಾವತಿ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಮಾವೇಶದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಭಾಗವಹಿಸಿ ಮಾತನಾಡಿ ತಾನು ಶರಾವತಿ ಪಂಪ್ ಸ್ಟೋರೇಜ್ ಯೋಜನೆ ಗೆ ಸಂಪೂರ್ಣ ವಿರೋಧ ವ್ಯಕ್ತಪಡಿಸುವುದಾಗಿ ಹೇಳಿದರು.

Advertisement

Karwar |ಮುಖ್ಯಮಂತ್ರಿಗಳ ಮುಂದೆ ಹೊರಬರಲಿಲ್ಲ ಪತ್ರಕರ್ತರ ನೂರೆಂಟು ಪ್ರಶ್ನೆಗಳು ! ಕಾರವಾರದಲ್ಲಿ ಆಗಿದ್ದೇನು?

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಇತ್ತೀಚೆಗೆ ನಡೆದ ಕರಾವಳಿ ಉತ್ಸವದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಶರಾವತಿ ಪಂಪ್ ಸ್ಟೋರೇಜ್ ಯೋಜನೆ ಮಾಡುವುದನ್ನ  ವಿರೋಧಿಸಿ ಯಾರೂ ಕೂಡ ಒಂದೂ ಮಾತನಾಡಲಿಲ್ಲ ,ದಗಲಬಾಜಿ ರಾಜಕಾರಣ ಮಾಡುವವರು , ರಾಜಕಾರಣ ಮಾಡಲು ಯೋಗ್ಯತೆ ಇರಬೇಕು ಎಂದು ಕಿಡಿ ಕಾರಿದರು.

ಮಂಕಾಳು ವೈದ್ಯ ಹೇಳಿದ್ದೇನು? ವಿಡಿಯೋ ಇಲ್ಲಿದೆ.

ಆದರೇ ಡಿ.ಸಿ.ಎಂ ಶರಾವತಿ ಪಂಪ್ ಸ್ಟೋರೇಜ್ ಮಾಡುವುದಾಗಿ ಹೇಳಿದಾಗ ಕುದ್ದು ಸಚಿವರೇ ಪಕ್ಕದಲ್ಲಿ ಕುಳಿತಿದ್ದರು ಆಗ ಏಕೆ ವಿರೋಧ ವ್ಯಕ್ತಪಡಿಸಲಿಲ್ಲ? ಬೇಡ ಎಂದು ಏಕೆ ಹೇಳಲಿಲ್ಲ ಎಂಬ ಪ್ರಶ್ನೆ ಏಳುವಂತೆ ಮಾಡಿದೆ.

ಡಿಕೆ ಶಿವಕುಮಾರ್ ಹೇಳಿಕೆ ವಿಡಿಯೋ ನೋಡಿ:-

ಸಚಿವ ಮಂಕಾಳು ವೈದ್ಯ ಶರಾವತಿ ಪಂಪ್ ಸ್ಟೋರೇಜ್ ಹೋರಾಟ ಸಮಿತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ತಮ್ಮ ಮುಖಕ್ಕೆ ತಾವೇ ಉಗಿದುಕೊಂಡಂತಾಗಿದೆ.

Sharavathi|ಪಂಪ್ ಸ್ಟೋರೇಜ್ ಸ್ಥಳ ಪರಿಶೀಲನೆ ವರದಿಗೆ ವನ್ಯಜೀವಿ ಮಂಡಳಿ ನಿರ್ದೇಶನ|ವಿವರ ನೋಡಿ

ನಾನು ಎಲ್ಲದಕ್ಕೂ ವಿರೋಧ ಇದ್ದೇನೆ ಎನ್ನುವ ಇವರು ದೆಹಲಿಗೆ ನಿಯೋಗ ಹೋದಾಗ ಗೈರಾಗಿದ್ದು ಏಕೆ ಎಂಬ ಪ್ರಶ್ನೆ ಏಳುವಂತೆ ಮಾಡಿದೆ.

ರಾಜಕಾರಣ ಮಾಡುವುದಕ್ಕೆ ಸುಳ್ಳು ಹೇಳುವುದು ಬಿಟ್ಟರೇ ಏನೂ ಇಲ್ಲ ಎಂದು ಸಭೆಯಲ್ಲಿ ಇನ್ನೊಬ್ಬರನ್ನ ಬೊಟ್ಟುಮಾಡಿದ ಸಚಿವರು ,ಏನು ಮಾತನಾಡಿದರೂ ನಾನು ಉತ್ತರ ಕೊಡಲು ಸಿದ್ದ ಎಂದು ಸಭೆಯಲ್ಲಿ ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡರು.

ಆದರೇ ಸತ್ಯ ಬೇರೆಯೇ ಇದೆ ಎಂಬುದು ಮಾತ್ರ ಸ್ಥಳೀಯರಿಗೆ ಮಾತ್ರ ಗೊತ್ತಿರುವ ವಿಷಯವಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement