Honnavar | ಹೊನ್ನಾವರದಲ್ಲಿ ಚಿರತೆ ದಾಳಿ ಹಸು ಸಾ**ವು |ಅರಣ್ಯ ಇಲಾಖೆ ಪರಿಹಾರ ಮರೀಚಿಕೆ!

Honnavar:cow belonging to a farmer was killed in a leopard attack near Salakodu in Honnavar taluk of Uttara Kannada district. Farmers allege delay in compensation from the forest department due to lack of veterinary post-mortem facilities.
honnavar news1 honnavar news1

Honnavar | ಹೊನ್ನಾವರದಲ್ಲಿ ಚಿರತೆ ದಾಳಿ ಹಸು ಸಾ**ವು |ಅರಣ್ಯ ಇಲಾಖೆ ಪರಿಹಾರ ಮರೀಚಿಕೆ!

 

Honnavar :- ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ (honnavar) ತಾಲೂಕಿನ ಸಾಲಕೋಡು ,ಕವಲಕ್ಕಿ ಸುತ್ತಮುತ್ತ ಚಿರತೆ ಕಾಟ ಮಿತಿಮೀರಿದ್ದು ಚಿರತೆ ದಾಳಿಗೆ ಮತ್ತೆ ಹಸುವೊಂದು ಬಲಿಯಾಗಿದೆ.

ಹೌದು ಕಳೆದ ಎರಡು ತಿಂಗಳಿಂದ ಈ ಭಾಗದಲ್ಲಿ ಚಿರತೆ  ಕಾಟ ಕಡಿಮೆ ಆಗಿತ್ತು.ಆದರೇ ಇದೀಗ ಮತ್ತೆ ಚಿರುತೆ ಪ್ರತ್ಯಕ್ಷವಾಗಿದ್ದು ರೈತರ ಮೇಯಲು ಬಿಟ್ಟ ಹಸುಗಳೇ ಇದರ ಟಾರ್ಗೆಟ್ ಆಗುತ್ತಿದೆ.

Advertisement

Honnavar| ಪಂಪ್ ಸ್ಟೋರೇಜ್ ಯೋಜನೆ ವಿರೋಧಿಸಿ ಡಿಸಿಎಂ ಎದುರು ಒಂದೂ ಮಾತನಾಡದ ದಗಲಬಾಜಿಗಳು-ಸಚಿವ ವೈದ್ಯ ಹೇಳಿದ್ದು ಯಾರಿಗೆ?

ಸಾಲಕೋಡಿನ ಹೊಸರಮಕ್ಕಿಯ ಎಸ್.ಪಿ ಶಟ್ಟಿ ಎಂಬುವವರಿಗೆ ಸೇರಿದ ಹಸು ಇದಾಗಿದ್ದು ಮೇಯಲು ಬಿಟ್ಟಾಗ ಹಸು ಮೇಲೆ ದಾಳಿ ಮಾಡಿ ಅರೆಬರೆ ತಿಂದು ಬಿಟ್ಟು ತೆರಳಿದೆ.

ಹಸು ಕೊಟ್ಟಿಗೆಗೆ ಬರದ ಹಿನ್ನಲೆಯಲ್ಲಿ ಕಾಡಿನಲ್ಲಿ ಹುಡುಕಿದಾಗ ಹಸು ಚಿರತೆ ದಾಳಿಯಿಂದ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ಅರಣ್ಯ ಇಲಾಖೆಯಿಂದ ಪರಿಹಾರ ಇಲ್ಲ!

ಇನ್ನು ವನ್ಯಜೀವಿಗಳ ದಾಳಿಯಿಂದ ಹಸುಗಳು ಮೃತಪಟ್ಟರೇ ಅವುಗಳಿಗೆ ಅರಣ್ಯ ಇಲಾಖೆ ಪರಿಹಾರ ನೀಡುತ್ತದೆ. ಆದರೇ ಈ ಪರಿಹಾರ ಸಿಗಬೇಕಾದರೇ ಸತ್ತ ಹಸುವನ್ನು ಮರಣೋತ್ತರ ಪರೀಕ್ಷೆ ನಡೆಸಬೇಕು.  ಆದರೇ ಮೃತ ಹಸುವನ್ನು ಮರಣೋತ್ತರ ಪರೀಕ್ಷೆ ನಡೆಸಲು ಪಶು ವೈದ್ಯರು ಬೇಕಾಗುತ್ತದೆ. ಸೂಕ್ತ ಪಶು ವೈದ್ಯರಿಲ್ಲದೇ ಮರಣೋತ್ತರ ಪರೀಕ್ಷೆ ನಡೆಸಲು ವಿಳಂಬ ಆಗುತ್ತಿದೆ. ಸತ್ತ ಹಸುವನ್ನ ವಾರಗಟ್ಟಲೇ ಕಳೆಬರಹ ಇಟ್ಟುಕೊಂಡು ಕಾಯುವ ಸ್ಥಿತಿ ರೈತರದ್ದಾಗಿದೆ. ಹೀಗಾಗಿ ಪರಿಹಾರ ಸಿಗದೇ ರೈತ ತೊಂದರೆಗಿಡಾಗುತಿದ್ದಾರೆ.

Honnavar| ಪಂಪ್ ಸ್ಟೋರೇಜ್ ಯೋಜನೆ ವಿರೋಧಿಸಿ ಡಿಸಿಎಂ ಎದುರು ಒಂದೂ ಮಾತನಾಡದ ದಗಲಬಾಜಿಗಳು-ಸಚಿವ ವೈದ್ಯ ಹೇಳಿದ್ದು ಯಾರಿಗೆ?

ಇನ್ನು  ಜಿಲ್ಲೆಯಲ್ಲಿ ಅರಣ್ಯ ಇಲಾಖೆಯಿಂದ ಕಾಡುಪ್ರಾಣಿಗಳ ದಾಳಿಗೆ ನೀಡುವ ಪರಿಹಾರ ಸೂಕ್ತ ಸಮಯದಲ್ಲಿ ಸಿಗುತ್ತಿಲ್ಲ.

 ಅರಣ್ಯ ಇಲಾಖೆ ಈವರೆಗೆ 5673941 ಲಕ್ಷ ರೂ ರೈತರಿಗೆ ಬೆಳೆನಾಶದ ಪರಿಹಾರ ನೀಡಿದೆ ಆದರೇ 293 ರೈತರ 2302631 ಲಕ್ಷಗಳು ಪರಿಹಾರದ ಹಣ ಈವರೆಗೂ ಬಂದಿಲ್ಲ.

ಇದನ್ನೂ ಓದಿ:-https://kannadavani.news/wp-content/uploads/2023/04/TextMaster_04-21-07.41.50.jpeg https://share.google/2plpVWl5Al6cvKQwe

ಇನ್ನು ಸಾಕುಪ್ರಾಣಿಗಳು ವನ್ಯಜೀವಿಗಳ ದಾಳಿಗೆ ಹಳಿಯಾಳ ಜೋಯಿಡಾ ಭಾಗದಲ್ಲಿ ಒಟ್ಟು 198 ಸಾವಾಗಿದೆ. ಇದರಲ್ಲಿ ಭಾಗವತಿ ಭಾಗದಲ್ಲಿ 55 ಸಾಕುಪ್ರಾಣಿಗಳ ಸಾವು ಹೆಚ್ಚು ದಾಖಲಾಗಿದೆ.ಇವುಗಳಿಗೆ ಅರಣ್ಯ ಇಲಾಖೆ ನಿಗದಿ ಮಾಡಿದ ಮೊತ್ತ 4008190 ಲಕ್ಷ ವಾದರೇ ,ಪರಿಹಾರ ನೀಡಿದ್ದು 10,20000ಲಕ್ಷಗಳು ಮಾತ್ರ . ಉಳಿದ 2988190 ಲಕ್ಷ ಹಣ ಬಾಕಿ ಉಳಿದಿದೆ ಉಳಿದ ಕರಾವಳಿ ತಾಲೂಕಿನಲ್ಲಿ ಬೆಳೆ ಹಾನಿ ,ಸಾಕುಪ್ರಾಣಿ ಸಾವುಗಳಿಗೆ ಪರಿಹಾರವೇ ಸಿಗದಿರುವುದು ದುರಂತ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement