Train news|ಕುಮಟಾಕ್ಕೆ ವಿಸ್ತರಣೆಯಾದ ಕಾಚೆಗುಡ-ಮುರುಡೇಶ್ವರ ಎಕ್ಸ್‌ಪ್ರೆಸ್ ರೈಲು.
ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಪ್ರಯಾಣಿಕರ ಬಹುದಿನದ ಬೇಡಿಕೆಯಾಗಿದ್ದ ಕಾಚೆಗುಡ-ಮುರುಡೇಶ್ವರ ಎಕ್ಸ್‌ಪ್ರೆಸ್ ರೈಲನ್ನು ಕುಮಟಾಗೆ(kumta) ವಿಸ್ತರಣೆ ಮಾಡುವ ಬೇಡಿಕೆ ಇದೀಗ ಈಡೇರಿದೆ.
Kumta|15 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ ವಿಡಿಯೋ ನೋಡಿ.
ಕಾಚೆಗುಡ-ಮುರುಡೇಶ್ವರ ಎಕ್ಸ್‌ಪ್ರೆಸ್ ರೈಲನ್ನು (ಸಂಖ್ಯೆ: 12789/12790) ಈಗ ಅಧಿಕೃತವಾಗಿ ಕುಮಟಾ ನಿಲ್ದಾಣದವರೆಗೆ ವಿಸ್ತರಿಸುವಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ರವರು ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರನ್ನು ಭೇಟಿ ಮಾಡಿ, ಈ ಭಾಗದ ಜನರ ಅವಶ್ಯಕತೆಗಳ ಕುರಿತು ಮನವರಿಕೆ ಮಾಡಿದ್ದರು.
Kumta|ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕಿತ್ತು- ಬಿಜೆಪಿ ಶಾಸಕ ದಿನಕರ್ ಶಟ್ಟಿ
ಈ ಮನವಿಗೆ ಕೇಂದ್ರ ರೈಲ್ವೆ ಸಚಿವಾಲಯವು ಸಕಾರಾತ್ಮಕವಾಗಿ ಸ್ಪಂದಿಸಿದೆ. ಈ ರೈಲು ಸೇವೆಯ ವಿಸ್ತರಣೆಯಿಂದಾಗಿ ಕುಮಟಾ ಮತ್ತು ಸುತ್ತಮುತ್ತಲಿನ ಕ್ಷೇತ್ರದ ಜನತೆಗೆ, ವ್ಯಾಪಾರಸ್ಥರಿಗೆ ಹಾಗೂ ಪ್ರವಾಸಿಗರಿಗೆ ಹೈದರಾಬಾದ್ (ಕಾಚೆಗುಡ) ಭಾಗಕ್ಕೆ ನೇರ ಸಂಪರ್ಕ ದೊರೆಯಲಿದ್ದು, ಇದರಿಂದ ಜಿಲ್ಲೆಯ ಆರ್ಥಿಕ ಮತ್ತು ಪ್ರವಾಸೋದ್ಯಮ ಬೆಳವಣಿಗೆಗೆ ಹೆಚ್ಚಿನ ಸಹಕಾರಿಯಾಗಲಿದೆ.
ಸಮಯ ಏನು?
ವಿಸ್ತರಣೆಗೊಂಡ ರೈಲು ಸಂಖ್ಯೆ:- 12789 ಕಾಚೆಗುಡದಿಂದ ಬೆಳಿಗ್ಗೆ 06:05 ಕ್ಕೆ ಹೊರಟು, ಮಧ್ಯಾಹ್ನ 13:48 ಕ್ಕೆ ಮುರುಡೇಶ್ವರ ತಲುಪಲಿದೆ ಮತ್ತು ಮಧ್ಯಾಹ್ನ 14:30 ಕ್ಕೆ ಕುಮಟಾ ನಿಲ್ದಾಣಕ್ಕೆ ಆಗಮಿಸಲಿದೆ.
ರೈಲು ಸಂಖ್ಯೆ 12790 ಕುಮಟಾ ನಿಲ್ದಾಣದಿಂದ ಮಧ್ಯಾಹ್ನ 15:10 ಕ್ಕೆ ಹೊರಟು, 15:50 ಕ್ಕೆ ಮುರುಡೇಶ್ವರ ತಲುಪಿ, ಮರುದಿನ ರಾತ್ರಿ 23:40 ಕ್ಕೆ ಕಾಚೆಗುಡ ತಲುಪಲಿದೆ.







