Shivamogga| ಶಾಲಾ ವಾಹನಗಳ ದಿಢೀರ್ ತಪಾಸಣೆ – 7 ಚಾಲಕರ ಡಿಎಲ್‌ ರದ್ದಿಗೆ ಪೊಲೀಸರಿಂದ ಆರ್‌ಟಿಒಗೆ ಪತ್ರ!

Shivamogga:-ಶಿವಮೊಗ್ಗದಲ್ಲಿ ಶಾಲಾ-ಕಾಲೇಜು ವಾಹನಗಳ ವಿಶೇಷ ತಪಾಸಣೆ ನಡೆಸುತ್ತಿರುವ ಸಂಚಾರ ಪೊಲೀಸರು.
ಶಿವಮೊಗ್ಗದಲ್ಲಿ ಶಾಲಾ-ಕಾಲೇಜು ವಾಹನಗಳ ವಿಶೇಷ ತಪಾಸಣೆ ನಡೆಸುತ್ತಿರುವ ಸಂಚಾರ ಪೊಲೀಸರು. ಶಿವಮೊಗ್ಗದಲ್ಲಿ ಶಾಲಾ-ಕಾಲೇಜು ವಾಹನಗಳ ವಿಶೇಷ ತಪಾಸಣೆ ನಡೆಸುತ್ತಿರುವ ಸಂಚಾರ ಪೊಲೀಸರು.
ಶಿವಮೊಗ್ಗದಲ್ಲಿ ಶಾಲಾ-ಕಾಲೇಜು ವಾಹನಗಳ ವಿಶೇಷ ತಪಾಸಣೆ ನಡೆಸುತ್ತಿರುವ ಸಂಚಾರ ಪೊಲೀಸರು.

Shivamogga| ಶಾಲಾ ವಾಹನಗಳ ದಿಢೀರ್ ತಪಾಸಣೆ – 7 ಚಾಲಕರ ಡಿಎಲ್‌ ರದ್ದಿಗೆ ಪೊಲೀಸರಿಂದ ಆರ್‌ಟಿಒಗೆ ಪತ್ರ!

 

Shivamogga news:-ಶಿವಮೊಗ್ಗ ಶೈಕ್ಷಣಿಕ ವರ್ಷಾರಂಭದಲ್ಲಿ ಶಾಲಾ- ಕಾಲೇಜುಗಳು ಪುನಾರಂಭಗೊಂಡ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆಯ ಸಂಬಂಧ ಶಿವಮೊಗ್ಗ (shivamogga)ಜಿಲ್ಲಾ ಪೊಲೀಸ್ ಇಲಾಖೆಯು ಇಂದು ಸ್ಪೆಷಲ್ ಡ್ರೈವ್ ನಡೆಸಿದೆ.

ಇದನ್ನೂ ಓದಿ:-Shivamogga | ಬೆಂಗಳೂರು-ಶಿವಮೊಗ್ಗ ಇಂಡಿಗೋ ವಿಮಾನ ಸೇವೆ ಸ್ಥಗಿತ; ಕಾರಣವೇನು?

Advertisement

ಶಿವಮೊಗ್ಗ ಎಸ್ಪಿ ಬಿ.ನಿಖಿಲ್ ಸೂಚನೆ ಮೇರೆಗೆ ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಸ್ಪೆಷಲ್ ಡ್ರೈವ್ ಕೈಗೊಂಡು, ಶಾಲಾ- ವಾಹನಗಳನ್ನ ತಪಾಸಣೆ ನಡೆಸಲಾಗಿದೆ.

ಶಿವಮೊಗ್ಗ ನಗರದಲ್ಲಿ ಸಂಚಾರ ಪೊಲೀಸ್ ಠಾಣೆಯ ಸಿಪಿಐ ದೇವರಾಜ್ ನೇತೃತ್ವದಲ್ಲಿ ಸಂಚಾರ ಠಾಣೆ ಪೊಲೀಸರು, ಶಾಲಾ- ಕಾಲೇಜು ವಾಹನಗಳ ದಿಢೀರ್ ತಪಾಸಣೆ ನಡೆಸಿದ್ದಾರೆ.

ಇಂದು ಬೆಳಿಗ್ಗೆಯೇ ಕಾರ್ಯಪ್ರವೃತ್ತರಾದ ಪೊಲೀಸರು ಶಾಲಾ- ಕಾಲೇಜಿಗೆ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ 457 ವಾಹನ, ಬಸ್ಸುಗಳನ್ನು ತಡೆದು ಅವುಗಳ ಸ್ಥಿತಿಗತಿ ಪರಿಶೀಲಿಸಿ, ಮಾಹಿತಿ ಪಡೆದಿದ್ದಾರೆ. ಜೊತೆಗೆ ಚಾಲಕರು ಮದ್ಯ ಸೇವನೆ ಮಾಡಿರುವ ಕುರಿತು ಪರಿಶೀಲನೆ ನಡೆಸಿದ್ದಾರೆ.

7 ಚಾಲಕರ ಡಿಎಲ್ ರದ್ಧತಿಗೆ ಶಿಫಾರಸ್ಸು!

ಇನ್ನು ಜಿಲ್ಲೆಯಾದ್ಯಂತ 457 ವಾಹನಗಳ ಜೊತೆ ಚಾಲಕರ ಡ್ರಿಂಕ್ & ಡ್ರೈವ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 7 ಚಾಲಕರ ಮದ್ಯಪಾನ ದೃಢಪಟ್ಟ ಹಿನ್ನೆಲೆ ಎಲ್ಲರ ವಿರುದ್ಧ ಡ್ರಿಂಕ್ & ಡ್ರೈವ್ ಕೇಸ್ ದಾಖಲಿಸಲಾಗಿದೆ. ಜೊತೆಗೆ ಶಿವಮೊಗ್ಗ ಸಾರಿಗೆ ಇಲಾಖೆ ಅಧಿಕಾರಿಗಳಿಗೆ 7 ಚಾಲಕರ ಡಿಎಲ್ ರದ್ದು ಮಾಡುವಂತೆ ಶಿಫಾರಸು ಮಾಡಲಾಗಿದೆ.

ಇದನ್ನೂ ಓದಿ:-Shiva temple|ಶಿವಭಕ್ತರ ಪುಣ್ಯ ಸ್ಥಳ ಕಾಳಿ ಒಡಲಿನ ಕವಳೇಶ್ವರ ಭೂ ಕೈಲಾಸ ಹೇಗಿದೆ ಗೊತ್ತಾ?

ಇನ್ನು ತಪಾಸಣೆ ವೇಳೆ ಶಾಲಾ ವಾಹನದ ವಿಮೆ, ಎಮಿಷನ್ ರಿಪೋರ್ಟ್ ಹಾಗೂ ಫಿಟ್‌ನೆಸ್ ಸರ್ಟಿಫಿಕೇಟ್ ಅನ್ನು ಕಡ್ಡಾಯವಾಗಿ ಚಾಲ್ತಿಯಲ್ಲಿಟ್ಟುಕೊಳ್ಳುವ ಜೊತೆಗೆ, ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ವಾಹನಗಳ ಸುಸ್ಥಿತಿ ಬಗ್ಗೆ ಸದಾ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement