Shiva temple|ಶಿವಭಕ್ತರ ಪುಣ್ಯ ಸ್ಥಳ ಕಾಳಿ ಒಡಲಿನ ಕವಳೇಶ್ವರ ಭೂ ಕೈಲಾಸ ಹೇಗಿದೆ ಗೊತ್ತಾ?

Shiva temple:-Discover Kavaleshwara Cave Temple near Dandeli in Uttara Kannada, a natural Shiva Linga inside Kavala Caves located
Natural Shiva Linga inside Kavaleshwara Kavala Cave surrounded by limestone formations and dripping water in Dandeli forest Natural Shiva Linga inside Kavaleshwara Kavala Cave surrounded by limestone formations and dripping water in Dandeli forest
Natural Shiva Linga Kavaleshwara

ಶಿವಭಕ್ತರ ಪುಣ್ಯ ಸ್ಥಳ ಕಾಳಿ ಒಡಲಿನ ಕವಳೇಶ್ವರ ಭೂ ಕೈಲಾಸ ಹೇಗಿದೆ ಗೊತ್ತಾ?

Natural Shiva Linga inside Kavaleshwara Kavala Cave surrounded by limestone formations and dripping water in Dandeli forest
Natural Shiva Linga Kavaleshwara

 

Shiva temple /ಕಾರವಾರ/ದಾಂಡೇಲಿ (14 February 2026) :-ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ಉತ್ತರ ಕನ್ನಡ (uttarakannada )ಜಿಲ್ಲೆ ಶಿವನ ಆತ್ಮಲಿಂಗ ಪ್ರತಿಷ್ಟೆ ಗೊಂಡ ಜಿಲ್ಲೆ.

ಇಲ್ಲಿನ ಶಿವನ ದೇವಾಲಯಗಳು ಒಂದೊಂದಕ್ಕೂ ಅದರದೇ ಆದ ಇತಿಹಾಸ ಇದೆ. ಹೌದು ಉತ್ತರ ಕನ್ನಡ ಜಿಲ್ಲೆ ಎಂದಕೂಡಲೇ ಗೋಕರ್ಣದ ಮಹಾಬಲೇಶ್ವರ ದೇವರೇ ಎಲ್ಲರ ಕಣ್ಣಮುಂದೆ ಬರುತ್ತದೆ.

Advertisement

ಇದನ್ನು ಬಿಟ್ಟರೇ ಮುರುಡೇಶ್ವರ ,ದಾರೇಶ್ವರ ಶಿವನ ಸ್ಥಾನಗಳು ಮುಖ್ಯವಾಗಿದೆ.ಆದರೇ ದಾಂಡೇಲಿಯ (Dandeli) ದಟ್ಟ ಅರಣ್ಯದಲ್ಲಿ ನೈಸರ್ಗಿಕವಾಗಿ ಸೃಷ್ಟಿಯಾಗಿರುವ ಕವಳೇಶ್ವರ ನ ಬಗ್ಗೆ ಹಲವರಿಗೆ ತಿಳಿದೇ ಇಲ್ಲ.

Dandeli |ದಾಂಡೇಲಿ ಅಂಬಿಕಾನಗರದಲ್ಲಿ ರಸ್ತೆಯ ಮಧ್ಯೆ ಕಾಡಾನೆ! ಸವಾರರಿಗೆ ಶಾಕ್ ಕೊಟ್ಟ ವಿಡಿಯೋ ನೋಡಿ

ಸ್ಥಳೀಯವಾಗಿ ಜನರಿಗೆ ಪರಿಚಿತವಾಗಿದ್ದರೂ ,ದಟ್ಟ ಅರಣ್ಯದ ಕವಳಾ ಗುಹೆಯಲ್ಲಿರುವ ಐತಿಹಾಸಿಕ ಈ ಕವಳೇಶ್ವರ ಹೊರಜಗತ್ತಿಗೆ ಅಷ್ಟೊಂದು ತೆರೆದುಕೊಂಡಿಲ್ಲ.

ಅರಣ್ಯ ಇಲಾಖೆಯ ನಿರ್ಬಂಧ ಹಾಗೂ ಈ ಪ್ರದೇಶಕ್ಕೆ ತೆರಳಲು ಸೂಕ್ತ ವ್ಯವಸ್ಥೆ ಇಲ್ಲದೇ ಇರುವುದರಿಂದ ಇಲ್ಲಿಗೆ ಶಿವ ಭಕ್ತರು ತೆರಳಬೇಕು ಎಂದರೇ ಬಲು ಸಾಹಸ ಪಡಬೇಕು. ಹಾಗಿದ್ರೆ  ನೀವು ಇದರ ಬಗ್ಗೆ ತಿಳಿದುಕೊಳ್ಳಬೇಕಾ ,ಇಲ್ಲಿದೆ ಮಾಹಿತಿ.

ತೆರಳುವುದು ಹೇಗೆ ?

Entrance view of Kavala Caves trekking path and forest steps leading to Kavaleshwara cave temple near Dandeli Karnataka.
Entrance view of Kavala Caves trekking path and forest steps leading to Kavaleshwara cave temple

ಕವಳಾ ಗುಹೆ ದಾಂಡೇಲಿಯಿಂದ ಸುಮಾರು 22 ಕಿಲೋಮೀಟರ್ ದೂರದಲ್ಲಿನ ನಾಗಝರಿ ಕಣಿವೆಯ ಪ್ರದೇಶದಲ್ಲಿದೆ.

ಇಲ್ಲಿನ ಫಣಸೋಲಿ ಗ್ರಾಮದಿಂದ 3–4 ಕಿಲೋಮೀಟರ್ ದಟ್ಟ ಕಾಡು ದಾರಿಯಲ್ಲಿ ನಡೆದು, 300ಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಹತ್ತಿಳಿದು, ಗುಹೆಗೆ ತಲುಪಬೇಕಾಗುತ್ತದೆ.

Dandeli| ಆರ್.ವಿ. ದೇಶಪಾಂಡೆ ಗ್ಯಾರಂಟಿ ಯೋಜನೆಗೆ ಮತ್ತೆ ವ್ಯಂಗ್ಯ |ಏನಂದ್ರು ವಿಡಿಯೋ ಇಲ್ಲಿದೆ.

ಕವಳಾ ಗುಹೆಯ ಪ್ರಮುಖ ವಿಶೇಷತೆ ಎಂದರೆ, ಸುಮಾರು 40 ಅಡಿ ಆಳದ ಕಿರಿದಾದ ಸುರಂಗದೊಳಗೆ ತೆವಳುತ್ತಾ ಹೋಗಿ ಸ್ವಾಭಾವಿಕವಾಗಿ ನಿರ್ಮಾಣಗೊಂಡ ಶಿವಲಿಂಗ. ಈ ಸಾಹಸಮಯ ಅನುಭವ ಶಿವಭಕ್ತರ ಪಾಲಿಗೆ ವಿಶಿಷ್ಟ ಆಧ್ಯಾತ್ಮಿಕ ಅನುಭವವಾಗಿದೆ. ಗುಹೆಯೊಳಗಿನ ನೈಸರ್ಗಿಕ ವಿನ್ಯಾಸ, ತೇವಭರಿತ ವಾತಾವರಣ ಹಾಗೂ ಶಿಲಾರಚನೆಗಳು ಭಕ್ತರು ಮತ್ತು ಪ್ರವಾಸಿಗರನ್ನು ಮಂತ್ರಮುಗ್ಧಗೊಳಿಸುತ್ತವೆ.

ಹೇಗಿದೆ ಕವಶೇಶ್ವರ

Entrance view of Kavala Caves trekking path and forest steps leading to Kavaleshwara cave temple near Dandeli Karnataka.
ಕವಳೇಶ್ವರ ದೇವಾಲಯ ,ದಾಂಡೇಲಿ

ದಾಂಡೇಲಿಯ ದಟ್ಟ ಅರಣ್ಯದಲ್ಲಿರುವ ಕವಳಾ ಗುಹೆಗಳು (Kavala Caves) ಪ್ರಸಿದ್ಧ ಸುಣ್ಣದ ಕಲ್ಲಿನ ಗುಹೆಗಳಾಗಿದ್ದು, ಇವು ಕೋಟ್ಯಂತರ ವರ್ಷಗಳ ಹಿಂದಿನ ಜ್ವಾಲಾಮುಖಿ ಚಟುವಟಿಕೆಗಳಿಂದ ರೂಪುಗೊಂಡಿವೆ.

ಗುಹೆಯ ಒಳಗೆ ಸುಮಾರು 4 ಅಡಿ ಎತ್ತರ ಮತ್ತು 3-4 ಅಡಿ ವ್ಯಾಸದ ನೈಸರ್ಗಿಕ ಸುಣ್ಣದ ಕಲ್ಲಿನ ಕವಳೇಶ್ವರ ಶಿವಲಿಂಗವಿದೆ. ಗುಹೆಯ ಮೇಲ್ಛಾವಣಿಯಿಂದ ನೀರು ನಿರಂತರವಾಗಿ ಶಿವಲಿಂಗದ ಮೇಲೆ ಬೀಳುತ್ತದೆ ಹೀಗಾಗಿ ಪಕೃತಿಯೇ ಸೃಷ್ಟಿಸಿದ ಈ ಶಿವಲಿಂಗ ನೋಡಲು ಅದ್ಭುತವಾಗಿದೆ.

ಕವಳಾ ಗುಹೆ ಪ್ರದೇಶವು ಕಾಳಿ ಹುಲಿ ಸಂರಕ್ಷಿತಾರಣ್ಯ ವ್ಯಾಪ್ತಿಗೆ ಒಳಪಟ್ಟಿರುವುದರಿಂದ, ಸಾಮಾನ್ಯ ದಿನಗಳಲ್ಲಿ ಪ್ರವೇಶಕ್ಕೆ ನಿರ್ಬಂಧವಿದೆ. ಅರಣ್ಯ ಇಲಾಖೆಯ ಪೂರ್ವಾನುಮತಿ ಇದ್ದರೆ ಮಾತ್ರ ಪ್ರವಾಸಿಗರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.

ಜಾತ್ರೆ ಸಮಯದಲ್ಲಿ ಮಾತ್ರ ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸಿ ಭಕ್ತರಿಗೆ ಪ್ರವೇಶ ಅವಕಾಶ ನೀಡಲಾಗುತ್ತದೆ.

ಭಾನುವಾರ ಕವಳೇಶ್ವರ ಜಾತ್ರೆ.

ಕವಳಾ ಗುಹೆಯ ಕವಳೇಶ್ವರ ಜಾತ್ರೆ ಭಕ್ತಿ, ಸಾಹಸ ಮತ್ತು ಪ್ರಕೃತಿ ಸೌಂದರ್ಯಗಳ ಅಪೂರ್ವ ಸಂಗಮವಾಗಿದೆ. ಆಧ್ಯಾತ್ಮಿಕ ಅನುಭವದ ಜೊತೆಗೆ ನಿಸರ್ಗದ ಮಡಿಲಲ್ಲಿ ಸಮಯ ಕಳೆಯಲು ಇದು ಅತ್ಯುತ್ತಮ ತಾಣವಾಗಿದ್ದು, ಶಿವಭಕ್ತರಿಗೆ ಮರೆಯಲಾಗದ ಅನುಭವವನ್ನು ನೀಡುತ್ತದೆ. ಪ್ರತಿ ವರ್ಷ ಶಿವರಾತ್ರಿ ಯಂದು ಇಲ್ಲಿ ಜಾತ್ರೆ ನೆರವೇರುತ್ತದೆ. ಭಾನುವಾರ ಶಿವರಾತ್ರಿಯಂದು ಇಲ್ಲಿ ಜಾತ್ರಾ ಮಹೋತ್ಸವ ಆಯೋಜನೆ ಮಾಡಲಾಗಿದ್ದು ಭಕ್ತರು ಹಾಗೂ ಪರಿಸರ ಪ್ರೇಮಿಗಳು ಈ ಸಂದರ್ಭದಲ್ಲಿ ಇಲ್ಲಿಗೆ ತೆರಳಿ ಕವಳೇಶ್ವರನ ದರ್ಶನ ಪಡೆಯಬಹುದಾಗಿದೆ.

Dandeli| ಮೊಸಳೆಗೆ ಆಹಾರ ಕೊಡಬೇಡಿ ಎಂದಿದ್ದ ಎಸಿಎಫ್ ಹತ್ಯೆ ಮಾಡಿದವನಿಗೆ ಶಿಕ್ಷೆ!

ಇಲ್ಲಿನ ಗುಹೆಗೆ ತಲುಪಿದ ಬಳಿಕ ಅಲ್ಲಿಂದ ಕಾಳಿ ನದಿ ಕಣಿವೆಯ ಸುಂದರ ದೃಶ್ಯಾವಳಿ ಕಾಣಸಿಗುತ್ತದೆ. ಇದು ನಿಸರ್ಗ ಪ್ರೇಮಿಗಳು ಮತ್ತು ಸಾಹಸಿಗರಿಗೆ ಅತ್ಯುತ್ತಮ ತಾಣವಾಗಿದೆ. ಹಾಗಿದ್ರೆ ಏಕೆ ತಡ ಶಿವರಾತ್ರಿಗೆ ದಾಂಡೇಲಿಯ ದಟ್ಟ ಕಾಡಿನ ನಡುವೆ ಪ್ರಕೃತಿ ಮಡಿಲಲ್ಲಿ ಇರುವ ಕವಳೇಶ್ವರಕ್ಕೆ ಒಮ್ಮೆ ಭೇಟಿ ನೀಡಿ ಬನ್ನಿ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement