Dandeli| ಮೊಸಳೆಗೆ ಆಹಾರ ಕೊಡಬೇಡಿ ಎಂದಿದ್ದ ಎಸಿಎಫ್ ಹತ್ಯೆ ಮಾಡಿದವನಿಗೆ ಶಿಕ್ಷೆ!
Dandeli news :-ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ 2012 ರಲ್ಲಿ ಪ್ರವಾಸಿಗರಿಂದಲೇ ಹತ್ಯೆಯಾಗಿದ್ದ ಎಸಿಎಫ್ ಮದನ್ ನಾಯ್ಕ ರವರ ಪ್ರಕರಣದಲ್ಲಿ ಆರೋಪಿಗೆ ಯಲ್ಲಾಪುರ ಸಂಚಾರಿ ನ್ಯಾಯಾಲಯದಲ್ಲಿ ಶಿಕ್ಷೆ ಪ್ರಕಟಿಸಿದೆ.
Dandeli| ನಿಂತಲ್ಲೇ ನಿಂತ ಗೂಡ್ಸ್ ಟ್ರೈನ್ |ಐದು ತಾಸು ಟ್ರಾಫಿಕ್ ಜಾಮ್
2012 ಮೇ 6 ರಂದು ದಾಂಡೇಲಿ ಮೊಸಳೆ ಪಾರ್ಕ ನಲ್ಲಿ ಬಾಗಲಕೋಟೆಯಿಂದ ಪ್ರವಾಸಕ್ಕೆ ಬಂದಿದ್ದ ಪ್ರವಾಸಿಗರು ಮೊಸಳೆಗಳಿಗೆ ಮಾಂಸವನ್ನು ಹಾಕುತಿದ್ದ ವೇಳೆ ಇಲ್ಲಿನ ಅರಣ್ಯ ಇಲಾಖೆಯ ಎಸಿಎಫ್ ಆಗಿದ್ದ ಮದನ್ ನಾಯ್ಕ ರವರು ಪ್ರವಾಸಿಗರಿಗೆ ಮೊಸಳೆಗೆ ಮಾಂಸ ಹಾಕದಂತೆ ತಿಳಿ ಹೇಳಿದ್ದರು.

.ಆದರೇ ಅದನ್ನು ಕೇಳದ ಪ್ರವಾಸಿಗರು ಎಸಿಎಫ್ ಗೆ ಮಾರಣಾಂತಿಕ ಹಲ್ಲೆ ಮಾಡಿದ್ದರು.ತಲೆಗೆ ಗಂಭೀರ ಗಾಯವಾಗಿ ಮೇ 8 ರಂದು ಎಸಿಎಫ್ ಮದನ್ ನಾಯ್ಕ ಮೃತ ಪಟ್ಟಿದ್ದರು.ಈ ಕುರಿತು ಅವರ ಪತ್ನಿ ಸುಮತಿ ದೂರು ನೀಡಿದ್ದರು. ಇನ್ನು ಹಲ್ಲೆ ಮಾಡಿದವರೆಲ್ಲರೂ ಸರ್ಕಾರಿ ನೌಕರರಾಗಿದ್ದು ,ಪೊಲೀಸ್ ತನಿಖೆಯಲ್ಲೂ ಪ್ರಭಾವ ಬೀರಿದ್ದರು. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿ.ಐ.ಡಿಗೆ ವಹಿಸಿತ್ತು.

ಇದೀಗ 14 ವರ್ಷದ ನಂತರ ಯಲ್ಲಾಪುರ ಸಂಚಾರಿ ನ್ಯಾಯಲಯದ ನ್ಯಾಯಾದೀಶ ಕಿರಣ್ ಕಿಣಿ ರವರು ಮೂರನೇ ಆರೋಪಿ ಪ್ರಶಾಂತ್ ರಾಮು ಲಂಬಾಣಿ 10 ವರ್ಷ ಕಾರಾಗೃಹ ವಾಸ 11 ಸಾವಿರ ದಂಡ ವಿಧಿಸುವ ಜೊತೆ ಎಸಿಎಫ್ ಕುಟುಂಬ ಅವಲಂಭಿತರಾದ ಪತ್ನಿ,ಪುತ್ರ,ಪುತ್ರಿಗೆ ಐವತ್ತು ಸಾವಿರ ಪರಿಹಾರ ನೀಡಲು ಆದೇಶ ಮಾಡಿದ್ದು ಆರೋಪಿತರಾದ ಆನಂದ್ ರೂಪಸಿಂಗ್ ನಾಯ್ಕ, ಸುರೇಶ್ ಶಂಕರಪ್ಪ ನಾಯ್ಕ, ಶೈಲಜಾ , ದಾನಾಬಾಯಿ, ಮಾದುರೀ ರಾಥೋಡ್, ರಾಧ ನಾಯ್ಕ ಗೆ ತಲಾ ಒಂದು ಸಾವಿರ ದಂಡ ವಿಧಿಸಿದೆ. ಸರ್ಕಾರದ ಪರ ಶಿರಸಿಯ ರಾಜೇಶ್ ಮಾಳಗೇಕರ್ ವಾದ ಮಂಡಿಸಿದ್ದರು.
