Uttarakannada| ಆಫರೇಶನ್ ಬಡ್ಡಿ ದಂಧೆ-12 ರೌಡಿಗಳ ಗಡಿಪಾರು?-ಇಬ್ಬರ ಬಂಧನ.
Uttara kannada :-ಉತ್ತರ ಕನ್ನಡ ಜಿಲ್ಲೆಯಲ್ಲಿ (uttarakannada) ಅಕ್ರಮ ಮೀಟರ್ ಬಡ್ಡಿದಂಧೆ ಹಾಗೂ ರೌಡಿಗಳ ಮಟ್ಟ ಹಾಕಲು ಪೊಲೀಸ್ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ.
ಇದರ ಮೊದಲ ಹಂತವಾಗಿ 12 ಆರೋಪಿಗಳ ಗಡಿಪಾರಿನ ಜೊತೆ ಇಬ್ಬರು ರೌಡಿಗಳನ್ನ ಬಂಧಿಸಿ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ.
ಇದನ್ನೂ ಓದಿ:-Mundgod|ಜೇನು ದಾಳಿ 21 ವಿದ್ಯಾರ್ಥಿಗಳು ಅಸ್ವಸ್ಥ
ರೌಡಿಸಂ, ಮೀಟರ್ ಬಡ್ಡಿ ದಂಧೆ ಸೇರಿದಂತೆ ಬೇರೆ ಬೇರೆ ಪ್ರಕರಣದಲ್ಲಿ ಭಾಗಿಯಾದ ಹಲವು ರೌಡಿಗಳ ಲಿಸ್ಟ್ ಮಾಡಿದ್ದು ಆದಷ್ಟು ಬೇಗ ಗಡಿಪಾರಿಗೆ ಆದೇಶಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ.
ಇಬ್ಬರು ರೌಡಿಗಳ ಬಂಧನ
ಅಕ್ರಮ ಮೀಟರ್ ಬಡ್ಡಿದಂಧೆ ( meter interest rocket)ಹಾಗೂ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾದ ಇಬ್ಬರು ರೌಡಿಗಳನ್ನ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿ ಬಳ್ಳಾರಿ ಜೈಲಿಗಟ್ಟಿದ್ದಾರೆ. ಮುಂಡಗೋಡಿನ ಗಾಂಧಿನಗರ ನಿವಾಸಿ ಸಂಜು (24) ,ಗುಂಜಾವತಿ ಗ್ರಾಮದ ಶಬ್ಬಿರ ಮಸ್ತಮದ್ದಾನಿ (34) ಗೂಂಡಾ ಕಾಯ್ದೆಯಡಿ ಬಂಧಿತರಾದವರಾಗಿದ್ದಾರೆ.
ಇದನ್ನೂ ಓದಿ:-
Mundgod| ಮೀಟರ್ ಬಡ್ಡಿದಂಧೆ ಕಿಂಗ್ ಪಿನ್ ಜಮೀರ್ ಹತ್ಯೆ ಪ್ರಕರಣ – ಮೂರು ಪಿಸ್ತೊಲ್ ವಶಕ್ಕೆ!
ಇಬ್ಬರೂ ಕೊಲೆ,ದರೋಡೆ, ಅಕ್ರಮ ಹಣ ವಸೂಲಿ ಸೇರಿದಂತೆ ಐದಕ್ಕೂ ಹೆಚ್ಚು ಪ್ರಕರಣದಲ್ಲಿ ಭಾಗಿಯಾಗಿದ್ದರು.
2021 ರಲ್ಲಿ ಮುಂಡಗೋಡು ಪೊಲೀಸರು ರೌಡಿ ಶೀಟರ್ ತೆರೆದಿದ್ದರು.
ಆದರೂ ಅಪರಾಧ ಕೃತ್ಯದಲ್ಲಿ ನಿರಂತರ ಭಾಗಿಯಾಗಿದ್ದರು.ಹೀಗಾಗಿ ಇಬ್ಬರ ವಿರುದ್ಧ ಗೂಂಡಾ ಕಾಯ್ದೆಯಡಿ ಬಂಧಿಸಲು ಮುಂಡಗೋಡು ಪೊಲೀಸರು ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಿದ್ದರು.
ಪ್ರಾಸ್ತಾವನೆಯನ್ನು ಮಾನ್ಯ ಮಾಡಿದ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ಬಂಧಿಸಲು ಆದೇಶ ನೀಡಿದ್ದರು.ಇದರಂತೆ ಇಂದು ಬಂಧಿಸಿ ಮುಂಡಗೋಡಿನಿಂದ ಬಳ್ಳಾರಿ ಜೈಲಿಗೆ ರವಾನೆ ಮಾಡಿದ್ದಾರೆ.
