Sagar| ಕಾಂತಾರ ಕ್ಕಿಂತ ಕಮ್ಮಿ ಇಲ್ಲ ಮಿತ್ತಬೈಲ್ ಯಮುನಕ್ಕ ನಾಟಕ ಪ್ರದರ್ಶನ ಭಾನುವಾರ ಪ್ರದರ್ಶನ.
ಶಿವಮೊಗ್ಗ ಜಿಲ್ಲೆಯ ಸಾಗರದ ಅಭಿನಯ ಸಾಗರ (ರಿ) ಆಯೋಜನೆಯಲ್ಲಿ ರಂಗಪಯಣ (ರಿ) ಇವರು ಪ್ರದರ್ಶಿಸುತ್ತಿರುವ ಡಿ.ಕೆ ಚೌಟರ ಕಾದಂಬರಿ ಆಧಾರಿತ ಮಿತ್ತಬೈಲ್ ಯಮುನಕ್ಕ ನಾಟಕವು ಸಾಗರದ ಕುಡುಪಲಿಸದಾನಂದ ಸ್ವರಾಲಯ ದಲ್ಲಿ ದಿನಾಂಕ 5 ಜುಲೈ 2026 ರ ಭಾನುವಾರ ಪ್ರದರ್ಶನ ಗೊಳ್ಳಲಿದೆ.
ಈ ನಾಟಕಕ್ಕೆ ಸಂಗೀತ,ನಿರ್ದೇಶನವನ್ನು ರಾಜಗುರು ರವರು ಮಾಡಿದ್ದು ,ಬಸವರಾಜ್ ಸುಳೇರಿಪಾಳ್ಯ ರಂಗರೂಪಕವನ್ನು ಪ್ರಸ್ತುತ ಪಡಿಸುತಿದ್ದು ಇದೇ ಭಾನವಾರ ಪ್ರದರ್ಶನ ಗೊಳ್ಳಲಿದೆ. ಆಸಕ್ತರಿಗೆ ಗೌರವ ಪೂರ್ವಕ ಪ್ರವೇಶ ಶುಲ್ಕ ₹50 ರೂಗಳನ್ನ ಪ್ರೋತ್ಸಾಹ ರೂಪಕದಲ್ಲಿ ಟಿಕೆಟ್ ದರ ನಿಗದಿ ಮಾಡಲಾಗಿದೆ.
ಇದನ್ನೂ ಓದಿ:-Sagar|ಸಾಗರದಲ್ಲಿ ಹೃದಯಾಘಾತದಿಂದ 6 ವರ್ಷದ ಬಾಲಕನ ಬದುಕು ಅಂತ್ಯ
ಕಥೆಯು ದಕ್ಷಿಣ ಕನ್ನಡ ಅಂದರೆ ನೆನಪಾಗುವುದು ಭೂತಾರಾಧನೆ, ಇಲ್ಲಿನ ದೈವಗಳು ಮತ್ತು ಆಡು ಭಾಷೆ ತುಳು. ಈ ತುಳು ಭಾಷೆಯಲ್ಲಿ ರಚಿತವಾದ ಕಾದಂಬರಿಯನ್ನು ಮಹಮ್ಮದ್ ಕುಳಾಯಿ ಸಮರ್ಥವಾಗಿ ಕನ್ನಡಕ್ಕೆ ತಂದಿದ್ದಾರೆ.
ಶೆಟ್ಟರು ಅಂದರೆ ಗತ್ತು. ಏನೇ ಕಷ್ಟ ಬಂದರೂ ಗತ್ತು ಬಿಡಲಾರರು ಎಂಬುದು ಅಭಿಮತ. ಇಂತಹ ಶೆಟ್ಟರ ಗುತ್ತಿನ ಮನೆತನ ಪರಂಪರೆಯ ಕಥೆ ಇದು. ಆ ಕಾಲ ಮತ್ತು ಈ ಕಾಲ ಎಂದು ಅಧ್ಯಾಯ ಅಧ್ಯಾಯಗಳಲ್ಲಿ ಕಥೆ ಇತಿಹಾಸವನ್ನು ದಟ್ಟವಾಗಿ ತೆರೆದಿಡುತ್ತದೆ.ಮಾವನೊಂದಿಗೆ ಜಗಳವಾಡಿ ಬಂದ ಅಣ್ಣ ತಮ್ಮಂದಿರು ಸ್ವಪ್ರಯತ್ನದಿಂದ ಜಾಗ,ಮನೆ,ಬೆಳೆ ತೆಗೆದು ತಮ್ಮ ಗುತ್ತು ಸ್ಥಾಪಿಸಿ ,ಯುದ್ಧದಲ್ಲಿ ಹೋರಾಡಿದ ಕಥೆ ಒಂದು ಕಡೆಯಾದರೆ, ಅದೇ ಗುತ್ತಿನ ಯಜಮಾನನಾಗಿ ಹೆಸರು ಹಾಳುಮಾಡಿಕೊಂಡು ಸತ್ತ ಒಬ್ಬ ಯಜಮಾನನ ಕಥೆ ಇನ್ನೊಂದು ಕಡೆ , ಗುತ್ತಿನ ಯಜಮಾನಿಕೆ ಹಿಡಿಯಲು ಗಾಂಧಿ ಆಶ್ರಮಕ್ಕೆ ಹೋದ ತಮ್ಮನ ಬರವನ್ನು ಕಾಯುತ್ತಾ ಪಾರುಪತ್ಯ ನಡೆಸುವ ಯಮುನಕ್ಕನ ಕಥೆ ಮುಖ್ಯವಾದದ್ದು.
ಇದರ ನಡುವೆ ಆಚರಣೆಗಳು, ಒಳಜಗಳ,ಊರ ತಂಟೆಗಳು,ಮಹಾಯುದ್ಧ, ಕಲ್ಯಾಣಸ್ವಾಮಿಯ ಕ್ರಾಂತಿ,ಬ್ರಿಟಿಷ್ ಆಡಳಿತ,ಇತಿಹಾಸ, ದೌರ್ಜನ್ಯ, ದೈವಾರಾಧನೆ ಹೀಗೆ ಏನುಂಟು ಏನಿಲ್ಲ ಎಂಬಂತೆ ಎಲ್ಲವೂ ಅಡಕವಾಗಿರುವ ಕಥೆ ,ಪುರಾಣವಾಗಿ ಕಣ್ಣೆದುರು ಮೂಡಿಬರುವ ಮಿತ್ತಬೈಲ್ ಯಮುನಕ್ಕನ ನಾಟಕ ತುಳು ಸಂಸ್ಕೃತಿಯ ಅಭಿವ್ಯಕ್ತಿಸುವ ಜೊತೆ ಹೊಸ ಆಯಾಮವನ್ನ ತೆರೆದಿಡಲಿದೆ.
ಆಸಕ್ತರು ಸಂಪರ್ಕಿಸಿ:-







