Yallapur |ಕಳಚೆ ಬಳಿ ಭೂಕುಸಿತ -ಕೆಲವು ಸಮಯ ಸಂಚಾರ ಬಂದ್ 

Yallapur:ಕಳಚೆ ಬಳಿ ಭಾರೀ ಮಳೆಯಿಂದ ಭೂಕುಸಿತ ಉಂಟಾಗಿ ರಸ್ತೆ ಕೆಲಕಾಲ ಬಂದ್ ಆಗಿತ್ತು. ಮಣ್ಣು ಹಾಗೂ ಬಂಡೆ ತೆರವು ಬಳಿಕ ತಾತ್ಕಾಲಿಕವಾಗಿ ವಾಹನ ಸಂಚಾರ ಪುನರಾರಂಭವಾಗಿದೆ.
ಯಲ್ಲಾಪುರ ತಾಲೂಕಿನ ಕಳಚೆ ಬಳಿ ಭಾರೀ ಮಳೆಯಿಂದ ಸಂಭವಿಸಿದ ಭೂಕುಸಿತದಿಂದ ರಸ್ತೆಯ ಮೇಲೆ ಬಿದ್ದ ಬಂಡೆಗಳು ಮತ್ತು ಮಣ್ಣು ತೆರವು ಕಾರ್ಯ ನಡೆಸುತ್ತಿರುವ ದೃಶ್ಯ. ಯಲ್ಲಾಪುರ ತಾಲೂಕಿನ ಕಳಚೆ ಬಳಿ ಭಾರೀ ಮಳೆಯಿಂದ ಸಂಭವಿಸಿದ ಭೂಕುಸಿತದಿಂದ ರಸ್ತೆಯ ಮೇಲೆ ಬಿದ್ದ ಬಂಡೆಗಳು ಮತ್ತು ಮಣ್ಣು ತೆರವು ಕಾರ್ಯ ನಡೆಸುತ್ತಿರುವ ದೃಶ್ಯ.

Yallapur |ಕಳಚೆ ಬಳಿ ಭೂಕುಸಿತ -ಕೆಲವು ಸಮಯ ಸಂಚಾರ ಬಂದ್ .

ಕಾರವಾರ :-ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆಗೆ ಗುಡ್ಡ ಕುಸಿತವಾಗಿ ,ರಸ್ತೆಗೆ ಬಂದು ಬಿದ್ದ ಬೃಹತ್ ಬಂಡೆಗಳಿಂದ ಕೆಲವು ಸಮಯ ಜಿಲ್ಲಾ ರಸ್ತೆ ಸಂಪೂರ್ಣ ಬಂದ್ ಆಗಿತ್ತು.

ಇದನ್ನೂ ಓದಿ:-Yallapur |ದೇವಸ್ಥಾನದ ಕಾಣಿಕೆ ಡಬ್ಬಿ ಕದ್ದ ಮುಸ್ಲೀಂ ಯುವಕರ ಬಂಧನ

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ (yallapur) ತಾಲೂಕಿನ ವಜ್ರಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಕಳಚೆ ರಸ್ತೆ ಮಾರ್ಗದಲ್ಲಿ ಈ ಘಟನೆ ನಡೆದಿದ್ದು ತಳಕೇಬೈಲ್ ನಿಂದ ಕಳಚೆ ವರೆಗೆ ತೆರಳುವ ರಸ್ತೆ ಕೆಲವು ಸಮಯ ಭೂ ಕುಸಿತದಿಂದ ಬಂದ್ ಆಗಿತ್ತು.ಸ್ಥಳೀಯ ಆಡಳಿತದಿಂದ ಕಲ್ಲು ಬಂಡೆ ಹಾಗೂ ಮಣ್ಣು ತೆರವು  ಕಾರ್ಯ ಮಾಡಲಾಗಿದ್ದು ,ಕಂದಾಯ ನಿರೀಕ್ಷಕ ಹಾಗೂ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

ಇದನ್ನೂ ಓದಿ:-Kumta| ದೇವಿಮನೆ ಘಟ್ಟದಲ್ಲಿ ಭೂ ಕುಸಿತ -ಸ್ವಲ್ಪದರಲ್ಲೇ ಪಾರಾದ ಬೈಕ್ ಸವಾರ

ಸಧ್ಯ ತಾತ್ಕಾಲಿಕವಾಗಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದ್ದು ,ಮಣ್ಣು ತೆರವು ಕಾರ್ಯಾಚರಣೆ ಮುಂದುವರೆದಿದೆ.

ಇದಲ್ಲದೇ ಯಲ್ಲಾಪುರ -ಹುಬ್ಬಳ್ಳಿ ಹೆದ್ದಾರಿಯಲ್ಲಿ ಮರದ ಕೊಂಬೆ ಬಿದ್ದು ಸಂಚಾರಕ್ಕೆ ಅಡ್ಡಿಯಾಗಿತ್ತು. ಸಧ್ಯ ಈ ಭಾಗದಲ್ಲಿ ಸಂಚಾರಕ್ಕೆ ಯಾವುದೇ ಸಮಸ್ಯೆಗಳಿಲ್ಲ .

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement