Yallapur |ದೇವಸ್ಥಾನದ ಕಾಣಿಕೆ ಡಬ್ಬಿ ಕದ್ದ ಮುಸ್ಲೀಂ ಯುವಕರ ಬಂಧನ

Yallapur:-ಯಲ್ಲಾಪುರ ತಾಲೂಕಿನ ಸೋಮಾಪುರದ ಶ್ರೀ ದ್ಯಾಮವ್ವಾ ದೇವಸ್ಥಾನದ ಕಾಣಿಕೆ ಡಬ್ಬಿ ಕಳ್ಳತನ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ₹29,763 ನಗದು ಹಾಗೂ ಹುಂಡಿ ವಶಕ್ಕೆ.
ಯಲ್ಲಾಪುರದಲ್ಲಿ ದ್ಯಾಮವ್ವಾ ದೇವಸ್ಥಾನದ ಕಾಣಿಕೆ ಡಬ್ಬಿ ಕಳ್ಳತನ ಪ್ರಕರಣದಲ್ಲಿ ಬಂಧಿತ ಆರೋಪಿಗಳು ಹಾಗೂ ವಶಪಡಿಸಿಕೊಂಡ ನಗದು ಹಣ ಯಲ್ಲಾಪುರದಲ್ಲಿ ದ್ಯಾಮವ್ವಾ ದೇವಸ್ಥಾನದ ಕಾಣಿಕೆ ಡಬ್ಬಿ ಕಳ್ಳತನ ಪ್ರಕರಣದಲ್ಲಿ ಬಂಧಿತ ಆರೋಪಿಗಳು ಹಾಗೂ ವಶಪಡಿಸಿಕೊಂಡ ನಗದು ಹಣ
ಯಲ್ಲಾಪುರದಲ್ಲಿ ದ್ಯಾಮವ್ವಾ ದೇವಸ್ಥಾನದ ಕಾಣಿಕೆ ಡಬ್ಬಿ ಕಳ್ಳತನ ಪ್ರಕರಣದಲ್ಲಿ ಬಂಧಿತ ಆರೋಪಿಗಳು ಹಾಗೂ ವಶಪಡಿಸಿಕೊಂಡ ನಗದು ಹಣ

Yallapur |ದೇವಸ್ಥಾನದ ಕಾಣಿಕೆ ಡಬ್ಬಿ ಕದ್ದ ಮುಸ್ಲೀಂ ಯುವಕರ ಬಂಧನ

 

Yallapur:-ಯಲ್ಲಾಪುರ ತಾಲೂಕಿನ ಸೋಮಾಪುರ ಗ್ರಾಮದ ಶ್ರೀ ದ್ಯಾಮವ್ವಾ ದೇವಸ್ಥಾನದ ಕಾಣಿಕೆ ಡಬ್ಬಿಯನ್ನು ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಯಲ್ಲಾಪುರ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಬಂಧಿತರಿಂದ ದೇವಸ್ಥಾನದ ಹುಂಡಿ ಹಾಗೂ ಕಳುವಾಗಿದ್ದ ನಗದು ಹಣದಲ್ಲಿ ಉಳಿಕೆಯಾದ ಮೊತ್ತವನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ’-Yallapur |ಕಂಟೇನರ್ ಲಾರಿ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಸ್ಥಳದಲ್ಲೇ ಸಾವು

Advertisement

ಮೇ 29 ರಂದು ಸಂಜೆ 6:30 ರಿಂದ ಜೂನ್ 2 ರ ಬೆಳಿಗ್ಗೆ 9:00 ಗಂಟೆಯ ನಡುವಿನ ಅವಧಿಯಲ್ಲಿ, ಕಿರವತ್ತಿ ಅಂಚೆ ವ್ಯಾಪ್ತಿಯ ಸೋಮಾಪುರ ಗ್ರಾಮದ ದ್ಯಾಮವ್ವಾ ದೇವಸ್ಥಾನದಲ್ಲಿದ್ದ ಕಾಣಿಕೆ ಡಬ್ಬಿ ಹಾಗೂ ಅದರಲ್ಲಿದ್ದ ಅಂದಾಜು 50,000 ರೂಪಾಯಿ ನಗದನ್ನು ದುಷ್ಕರ್ಮಿಗಳು ದೋಚಿದ್ದರು. ಈ ಕುರಿತು ದೇವಸ್ಥಾನದ ಪೂಜಾರಿ ಶ್ರೀಕಾಂತ ಅಪ್ಪಾರಾವ ಮಿರಾಶಿ ಅವರು ನೀಡಿದ ದೂರಿನ ಮೇರೆಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ’:-Yallapur |ರಿಯಾಲಿಟಿ ಶೋ ನಟ ಬಾವತೀಸ್ ಸಿದ್ದಿ ಅಪಘಾತದಲ್ಲಿ ಸಾವು 

ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಖಚಿತ ಮಾಹಿತಿಯ ಆಧಾರದ ಮೇಲೆ  ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.

ಬಂಧಿತರನ್ನು ಕಿರವತ್ತಿಯ ಜಯಂತಿನಗರ ನಿವಾಸಿ, ವೃತ್ತಿಯಲ್ಲಿ ಚಾಲಕನಾಗಿರುವ ಗೌಸ್‌ಅಲಿ ಬಾಬುಸಾಬ ಮಿಶ್ರಕೋಟಿ (25) ಹಾಗೂ ಕಿರವತ್ತಿಯ ಇಸ್ಲಾಂಪುರ ಗಲ್ಲಿಯ ನಿವಾಸಿ, ಲಾರಿ ಕ್ಲೀನರ್ ಆಗಿರುವ ಅಬ್ದುಲ್ ಹಮೀದ ಸಲೀಮಸಾಬ ಸೋಮನಕೊಪ್ಪ (38 ) ಎಂದು ಗುರುತಿಸಲಾಗಿದೆ.

ಆರೋಪಿಗಳು ಕದ್ದ ಹಣದಲ್ಲಿ ಒಂದಷ್ಟು ಮೊತ್ತವನ್ನು ಈಗಾಗಲೇ ಖರ್ಚು ಮಾಡಿದ್ದು, ಉಳಿದ 29,763 ರೂಪಾಯಿ ನಗದು ಹಾಗೂ ಕಾಣಿಕೆ ಡಬ್ಬಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು  ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಇದನ್ನೂ ಓದಿ’-Yallapur |ನಿದ್ದೆಗೆ ಜಾರಿದ ಬಸ್ ಚಾಲಕ ಧರೆಗೆ ಡಿಕ್ಕಿ

ಯಲ್ಲಾಪುರ (yallapur) ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ (ಪಿ.ಐ)  ರಮೇಶ ಹಾನಾಪುರ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್‌ಐಗಳಾದ ರಾಜಶೇಖರ ವಂದಲಿ, ಸಿದ್ದಪ್ಪ ಗುಡಿ, ಮಹಾವೀರ ಕಾಂಬಳೆ, ಶೇಡಜ ಚವ್ಹಾಣ, ಪ್ರೊಬೇಷನರಿ ಪಿಎಸ್‌ಐ ಶರಣಬಸವ ಎಸ್.ಎ., ಎಎಸ್‌ಐ ದೀಪಕ ಸೋಮವಂಶಿ, ಹಾಗೂ ಸಿಬ್ಬಂದಿಗಳಾದ ಉಮೇಶ ತುಂಬರಗಿ, ರಾಘವೇಂದ್ರ ಮುಳೆ, ಸಂತೋಷ ಬಾಳೇರ, ಬಸವರಾಜ ಡಿ.ಕೆ., ಮತ್ತು ಪರಮೇಶ್ವರ ಎಸ್.ಕೆ. ಪಾಲ್ಗೊಂಡು ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement