Karnataka SIR| ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ಯಾ? – ಜಸ್ಟ್ 10 ಸೆಕೆಂಡ್ನಲ್ಲಿ ಚೆಕ್ ಮಾಡಿ.
ಬೆಂಗಳೂರು: ರಾಜ್ಯದಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆ ನಡೆಯುತ್ತಿದ್ದು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ವೋ ಎನ್ನುವ ಪ್ರಶ್ನೆ, ಆತಂಕ ನಿಮ್ಮನ್ನು ಕಾಡುತ್ತಿರಬಹುದು. ಆದರೆ ನೀವು ಚಿಂತೆ ಮಾಡಬೇಕಾದ ಅಗತ್ಯವಿಲ್ಲ.
ಚುನಾವಣಾ ಆಯೋಗ ಎಸ್ಐಆರ್ ಪ್ರಕ್ರಿಯೆಯ ಬಳಿಕ ವೆಬ್ಸೈಟ್ ರೂಪಿಸಿದೆ. ಈ ವೆಬ್ಸೈಟ್ನಲ್ಲಿ ನೀವು ನಿಮ್ಮ ಎಪಿಕ್ ನಂಬರ್ ನಮೂದಿಸುವ ಮೂಲಕ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಬಹುದು. ಒಂದು ವೇಳೆ ಈ ಸೈಟ್ನಲ್ಲಿ ಹೆಸರು ASDDO ಪಟ್ಟಿಗೆ ಸೇರ್ಪಡೆಯಾಗಿದ್ದರೆ ಮತದಾರರು ಫಾರ್ಮ್-6 ಸಲ್ಲಿಸಿ ಹೆಸರನ್ನು ಸೇರಿಸಬಹುದು. ನೀವು ಕರ್ನಾಟಕದ ಯಾವುದೇ ಭಾಗದಲ್ಲಿದ್ದರೂ ಫಾರ್ಮ್ – 6 (Form 6) ಭರ್ತಿ ಮಾಡುವ ಮೂಲಕ ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಬಹುದು.
ಏನಿದು ASDDO ಪಟ್ಟಿ?
ರಾಜ್ಯದಲ್ಲಿ ಒಟ್ಟು 1.11 ಕೋಟಿ ಮತದಾರರು ASDDO ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ASDDO(ಗೈರು, ಸ್ಥಳಾಂತರಗೊಂಡವರು, ಮೃತರು, ನಕಲಿ ಮತ್ತು ಇತರರು – Absentee, Shifted, Dead, Duplicate, and Others) ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನೀವು ಭಯ ಪಡುವ ಅಗತ್ಯವಿಲ್ಲ.
ಇದನ್ನೂ ಓದಿ:-Karwar|ಸಚಿವ ಸ್ಥಾನಕ್ಕೆ ಕೊಕ್ಕೆ- ಆರ್.ವಿ ದೇಶಪಾಂಡೆ ವಿರುದ್ಧ ಸತೀಶ್ ಸೈಲ್ ಗರಂ|ಏನಂದ್ರು ವಿವರ ಇಲ್ಲಿದೆ
ಬೂತ್ ಮಟ್ಟದ ಅಧಿಕಾರಿಗಳನ್ನು (BLOs) ಸಂಪರ್ಕಿಸಿ ತಮ್ಮ ವಿವರಗಳನ್ನು ಸಲ್ಲಿಸಬಹುದು. ಒಂದು ವೇಳೆ ನಿಮಗೆ ಕಂಪ್ಯೂಟರ್ ಜ್ಞಾನವಿದ್ದರೆ ನೀವು ಆನ್ಲೈನ್ನಲ್ಲೇ https://voters.eci.gov.in/ ಈ ವೆಬ್ಸೈಟ್ಗೆ ಹೋಗಿ ಭರ್ತಿ ಮಾಡಬಹುದು.
ASDDO ಪಟ್ಟಿಯಲ್ಲಿ ಹುಡುಕೋದು ಹೇಗೆ?
– ಮೊದಲು ನೀವು https://karnataka-asddo-lookup.vercel.app/ ವೆಬ್ಸೈಟಿಗೆ ಹೋಗಬೇಕು
– ಇಲ್ಲಿ ನಿಮ್ಮ ಎಪಿಕ್ ನಂಬರ್(ವೋಟರ್ ಐಡಿ) ನಂಬರ್ ಎಂಟ್ರಿ ಮಾಡಬೇಕು.
– ಎಂಟ್ರಿ ಮಾಡಿದಾಗ ಒಳ್ಳೆಯ ಸುದ್ದಿ – ಈ ಗುರುತಿನ ಚೀಟಿ ತೆಗೆದುಹಾಕಿದ ಪಟ್ಟಿಯಲ್ಲಿ ಇಲ್ಲ ಎಂಬ ಸಂದೇಶ ಬಂದರೆ ನಿಮ್ಮ ಹೆಸರು ಡಿಲೀಟ್ ಆಗಿಲ್ಲ ಎನ್ನುವುದು ದೃಢಪಡುತ್ತದೆ.
– ಈ ಪಟ್ಟಿ ತೆಗೆದುಹಾಕುವಿಕೆಗಳನ್ನು ಮಾತ್ರ ಒಳಗೊಂಡಿದೆ. ನಿಮ್ಮ ಹೆಸರು ಪ್ರಸ್ತುತ ಮತದಾರರ ಪಟ್ಟಿಯಲ್ಲಿ ಇದೆಯೇ ಎಂದು ಖಚಿತಪಡಿಸಿಕೊಳ್ಳಲು voters.eci.gov.i ನೋಡಿ ಅಥವಾ ನಿಮ್ಮ BLO ಅವರನ್ನು ವಿಚಾರಿಸಬಹುದು.






