Yallapur |ಮೊಬೈಲ್ ,ಹಣ ಕಳೆದುಕೊಂಡು ಕಾಡಿನಲ್ಲಿ ಅಲೆದ ವಿದೇಶಿಗನಿಗೆ ಯಲ್ಲಾಪುರ ಪೊಲೀಸರ ನೆರವು.
ಕಾರವಾರ :- ಹಣ ಕಾಲಿಯಾಗಿ ಕಾಡಿನಲ್ಲಿ ಅನ್ನಾಹಾರ ಇಲ್ಲದೇ ಯಲ್ಲಾಪುರ ಮಾಗೋಡು ಕಾಡಿನಲ್ಲಿ ಅಲೆದಾಡಿದ ವಿದೇಶಿಗನಿಗೆ ಪೊಲೀಸರು ಮಾನವೀಯತೆಯ ನೆರವು ನೀಡಿ ಕಳುಹಿಸಿಕೊಟ್ಟ ಘಟನೆ ನಡೆದಿದೆ.ಉತ್ತರ ಯುರೋಪಿನ ಡೆನ್ ಮಾರ್ಕ ದೇಶದ ಅರಿಕ್ (52) ಯಲ್ಲಾಪುರದ(yallapur) ಮಾಗೋಡು ಕಾಡಿನಲ್ಲಿ ಅಲೆದಾಡಿದ ವಿದೇಶಿಗನಾಗಿದ್ದು ,ಆರು ತಿಂಗಳು ವಿಸಾ ಅವಧಿಯೊಂದಿಗೆ ಭಾರತ ದೇಶದ ಪ್ರವಾಸಕ್ಕೆ ಆಗಮಿಸಿದ್ದನು.
ಇದನ್ನೂ ಓದಿ:-Yallapur| ಗಟಾರದಲ್ಲಿ ಪತ್ತೆಯಾಯ್ತು ಹತ್ಯೆಯಾದವನ ಶವ!
ಯುರೋಪ್ ನಿಂದ ನೇರ ಗೋವಾಕ್ಕೆ ಆಗಮಿಸಿ ಅಲ್ಲಿಯೇ ಉಳಿದುಕೊಂಡಿದ್ದ ಈತ ಗೋವಾದಲ್ಲಿ ತಾನು ತಂದಿದ್ದ ಬಹುಪಾಲು ಹಣ ಖರ್ಚು ಮಾಡಿಕೊಂಡಿದ್ದನು. ಕೈಯಲ್ಲಿದ್ದ ಹಣ ಕಡಿಮೆಯಾದಾಗ ಗೋವಾದಿಂದ ಯಲ್ಲಾಪುರದ ಮಾಗೋಡು ಪಾಲ್ಸ್ ನೋಡಲು ಬಂದಿದ್ದ ಈತ ತನ್ನ ಬಳಿ ಇದ್ದ ಮೊಬೈಲ್ ,ಪರ್ಸ ನನ್ನು ಸಹ ಕಳೆದುಕೊಂಡಿದ್ದನು. ಇನ್ನು ದಾರಿ ತೋರದೇ ಮಾಗೋಡಿನ ಕಾಡಿನಲ್ಲಿ ಸಂಚರಿಸಿ ಹಳ್ಳಿಗೆ ಸೇರಿದ್ದ ಈತ ಇಂಗ್ಲೀಷ್ ಭಾಷೆಯಲ್ಲಿ ಗ್ರಾಮದವರ ಬಳಿ ಸಮಸ್ಯೆ ಹೇಳಿಕೊಂಡಿದ್ದನು. ಆದರೇ ಈತನ ಭಾಷೆ ಅರ್ಥವಾಗದೇ ಯಲ್ಲಾಪುರದ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದು ತಕ್ಷಣ ಅಲ್ಲಿಗೆ ಆಗಮಿಸಿದ ಯಲ್ಲಾಪುರ ಪೊಲೀಸರು ಈತನ ಸಮಸ್ಯೆ ಅರಿತು ,ಊಟ ನೀಡಿ ಖರ್ಚಿಗೆ ಹಣ ನೀಡಿ ಆತ ಊಳಿದುಕೊಂಡಿದ್ದ ಗೋವಾಕ್ಕೆ ಕಳುಹಿಸಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.








