Karwar |300 ಕೋಟಿ ವಂಚನೆ ಪ್ರಕರಣ- ಕಾರವಾರದಲ್ಲಿ ಇಡಿ ದಾಳಿ 

ಕಾರವಾರದಲ್ಲಿ 300 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ED ಅಧಿಕಾರಿಗಳ ದಾಳಿ ಕಾರವಾರದಲ್ಲಿ 300 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ED ಅಧಿಕಾರಿಗಳ ದಾಳಿ
ಕಾರವಾರದಲ್ಲಿ 300 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ED ಅಧಿಕಾರಿಗಳ ದಾಳಿ

Karwar |300 ಕೋಟಿ ವಂಚನೆ ಪ್ರಕರಣ- ಕಾರವಾರದಲ್ಲಿ ಇಡಿ ದಾಳಿ

ಕಾರವಾರ :- ಗೋವಾದಲ್ಲಿ(goa) ನಡೆದ ಬಹುಕೋಟಿ ಭೂ ಅಕ್ರಮ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದ ಸಂಬಂಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಾರವಾರ (karwar)ನಗರದ  ಕೋಡಿಬಾಗ್ ನಲ್ಲಿರುವ ಸುಲೆಮಾನ್ ಖಾನ್ ಸಿದ್ದೀಕ್ ಎಂಬುವವರ  ಮನೆ ಮೇಲೆ ದಾಳಿ ನಡೆಸಿದೆ. ಈತನ ವಿರುದ್ಧ ಗೋವಾದಲ್ಲಿ ಮನಿಲಾಂಡರಿಂಗ್ ತಡೆ ಕಾಯಿದೆ (PLMA) ಅಡಿ ಪ್ರಕರಣ ದಾಖಲಿಸಲಾಗಿತ್ತು.

ಕೋಡಿಬಾಗದ ಅಬಕಾರಿ ಕಚೇರಿ ಎದುರಿನ ಅಪಾರ್ಟ್‌ಮೆಂಟ್‌ನಲ್ಲಿರುವ  ನಾಲ್ಕು ಫ್ಲಾಟ್‌ಗಳನ್ನು ಇಡಿ ತಂಡ ಪರಿಶೀಲಿಸಿದೆ. ಗೋವಾದಿಂದ ಆಗಮಿಸಿದ್ದ ಅಧಿಕಾರಿಗಳು ಹಲವು ಗಂಟೆಗಳ ಕಾಲ ದಾಖಲೆಗಳು ಮತ್ತು ಇತರ ಮಾಹಿತಿಯನ್ನು ಪರಿಶೀಲಿಸುತಿದ್ದಾರೆ.

Advertisement

ಇದನ್ನೂ ಓದಿ:-ED ride | KPSC ನೇಮಕಾತಿ ಅಕ್ರಮ ಬೇಲಿಕೇರಿ ಹೆಡ್ ಮಾಸ್ಟ್ರ್ ಇಡಿ ವಶಕ್ಕೆ |ಈತನ ಮೇಲಿರುವ ಆರೋಪ ಏನು?

2024 ರಲ್ಲಿ ಗೋವಾ ಎಸ್.ಐ.ಟಿ ಸಿದ್ದೀಕ್ ನನ್ನು ಬಂಧಿಸಿತ್ತು .ಈ ಸಂದರ್ಭದಲ್ಲಿ ಜೈಲಿನಿಂದಲೇ ಪರಾರಿಯಾಗಿದ್ದ ಈತನನ್ನ ಬಳಿಕ ಕೇರಳದಲ್ಲಿ ಪುನಃ  ಬಂಧಿಸಲಾಗಿತ್ತು. ನಂತರ ನಕಲಿ ದಾಖಲೆ ಸೃಷ್ಟಿ ,ಹಣವರ್ಗಾವಣೆ ಸಂಬಂಧ ಕಳೆದ ಜುಲೈ 16 ರಂದು ಈತನನ್ನು ಕಾರವಾರದಲ್ಲಿ ಬಂಧಿಸಿತ್ತು. ಈ ಸಂದರ್ಭದಲ್ಲಿ ಸಿದ್ಧಿಕ್ ಹೆಸರಿನಲ್ಲಿರುವ ಅಂದಾಜು 300 ಕೋಟಿ ಮೌಲ್ಯದ  62.5 ಎಕರೆ ಜಮೀನು ಜಪ್ತಿ ಮಾಡಲಾಗಿತ್ತು.

ಇದನ್ನೂ ಓದಿ:-Karwar|ಮಾಲ್ವಾಣ್ ಯುದ್ಧ ನೌಕೆ ಕದಂಬ ನೌಕಾನೆಯಿಂದ ಜು.22ರಿಂದ ಕಾರ್ಯಾರಂಭ-ಅದರ ವಿಶೇಷ ಇಲ್ಲಿದೆ.

ಶಿವಮೊಗ್ಗ ಮೂಲದವರೆಂದು ಹೇಳಲಾಗಿರುವ ಸುಲೇಮಾನ್ ಖಾನ್ ಅಲಿಯಾಸ್ ಸಿದ್ದಿಕ್ ಖಾನ್ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಹಿಂದೆ ಕಾರವಾರದಲ್ಲಿ ಸುಮಾರು ಐದು ವರ್ಷ  ವಾಸವಾಗಿದ್ದನು . ನಂತರ ಗೋವಾಕ್ಕೆ ತೆರಳಿದ್ದ ಆತನ ವಿರುದ್ಧ ಅಲ್ಲಿನ ಮೃತರ ಆಸ್ತಿಗಳನ್ನು ನಕಲಿ ದಾಖಲೆಗಳ ಮೂಲಕ ಕಬಳಿಸಿದ ಆರೋಪ ಕೇಳಿಬಂದಿತ್ತು.

ಈ ಹಿನ್ನೆಲೆಯಲ್ಲಿ ಈತನ ಕಾರವಾರದ ನಾಲ್ಕು ಫ್ಲಾಟ್‌ಗಳ ಮೇಲೆ ಇಡಿ ದಾಳಿ ನಡೆಸಿ ಶೋಧ ನಡೆಸಿದ್ದು ತನಿಖೆ ಮುಂದುವರೆದಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement