Karwar |300 ಕೋಟಿ ವಂಚನೆ ಪ್ರಕರಣ- ಕಾರವಾರದಲ್ಲಿ ಇಡಿ ದಾಳಿ
ಕಾರವಾರ :- ಗೋವಾದಲ್ಲಿ(goa) ನಡೆದ ಬಹುಕೋಟಿ ಭೂ ಅಕ್ರಮ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದ ಸಂಬಂಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಾರವಾರ (karwar)ನಗರದ ಕೋಡಿಬಾಗ್ ನಲ್ಲಿರುವ ಸುಲೆಮಾನ್ ಖಾನ್ ಸಿದ್ದೀಕ್ ಎಂಬುವವರ ಮನೆ ಮೇಲೆ ದಾಳಿ ನಡೆಸಿದೆ. ಈತನ ವಿರುದ್ಧ ಗೋವಾದಲ್ಲಿ ಮನಿಲಾಂಡರಿಂಗ್ ತಡೆ ಕಾಯಿದೆ (PLMA) ಅಡಿ ಪ್ರಕರಣ ದಾಖಲಿಸಲಾಗಿತ್ತು.
ಕೋಡಿಬಾಗದ ಅಬಕಾರಿ ಕಚೇರಿ ಎದುರಿನ ಅಪಾರ್ಟ್ಮೆಂಟ್ನಲ್ಲಿರುವ ನಾಲ್ಕು ಫ್ಲಾಟ್ಗಳನ್ನು ಇಡಿ ತಂಡ ಪರಿಶೀಲಿಸಿದೆ. ಗೋವಾದಿಂದ ಆಗಮಿಸಿದ್ದ ಅಧಿಕಾರಿಗಳು ಹಲವು ಗಂಟೆಗಳ ಕಾಲ ದಾಖಲೆಗಳು ಮತ್ತು ಇತರ ಮಾಹಿತಿಯನ್ನು ಪರಿಶೀಲಿಸುತಿದ್ದಾರೆ.
ಇದನ್ನೂ ಓದಿ:-ED ride | KPSC ನೇಮಕಾತಿ ಅಕ್ರಮ ಬೇಲಿಕೇರಿ ಹೆಡ್ ಮಾಸ್ಟ್ರ್ ಇಡಿ ವಶಕ್ಕೆ |ಈತನ ಮೇಲಿರುವ ಆರೋಪ ಏನು?
2024 ರಲ್ಲಿ ಗೋವಾ ಎಸ್.ಐ.ಟಿ ಸಿದ್ದೀಕ್ ನನ್ನು ಬಂಧಿಸಿತ್ತು .ಈ ಸಂದರ್ಭದಲ್ಲಿ ಜೈಲಿನಿಂದಲೇ ಪರಾರಿಯಾಗಿದ್ದ ಈತನನ್ನ ಬಳಿಕ ಕೇರಳದಲ್ಲಿ ಪುನಃ ಬಂಧಿಸಲಾಗಿತ್ತು. ನಂತರ ನಕಲಿ ದಾಖಲೆ ಸೃಷ್ಟಿ ,ಹಣವರ್ಗಾವಣೆ ಸಂಬಂಧ ಕಳೆದ ಜುಲೈ 16 ರಂದು ಈತನನ್ನು ಕಾರವಾರದಲ್ಲಿ ಬಂಧಿಸಿತ್ತು. ಈ ಸಂದರ್ಭದಲ್ಲಿ ಸಿದ್ಧಿಕ್ ಹೆಸರಿನಲ್ಲಿರುವ ಅಂದಾಜು 300 ಕೋಟಿ ಮೌಲ್ಯದ 62.5 ಎಕರೆ ಜಮೀನು ಜಪ್ತಿ ಮಾಡಲಾಗಿತ್ತು.
ಇದನ್ನೂ ಓದಿ:-Karwar|ಮಾಲ್ವಾಣ್ ಯುದ್ಧ ನೌಕೆ ಕದಂಬ ನೌಕಾನೆಯಿಂದ ಜು.22ರಿಂದ ಕಾರ್ಯಾರಂಭ-ಅದರ ವಿಶೇಷ ಇಲ್ಲಿದೆ.
ಶಿವಮೊಗ್ಗ ಮೂಲದವರೆಂದು ಹೇಳಲಾಗಿರುವ ಸುಲೇಮಾನ್ ಖಾನ್ ಅಲಿಯಾಸ್ ಸಿದ್ದಿಕ್ ಖಾನ್ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಹಿಂದೆ ಕಾರವಾರದಲ್ಲಿ ಸುಮಾರು ಐದು ವರ್ಷ ವಾಸವಾಗಿದ್ದನು . ನಂತರ ಗೋವಾಕ್ಕೆ ತೆರಳಿದ್ದ ಆತನ ವಿರುದ್ಧ ಅಲ್ಲಿನ ಮೃತರ ಆಸ್ತಿಗಳನ್ನು ನಕಲಿ ದಾಖಲೆಗಳ ಮೂಲಕ ಕಬಳಿಸಿದ ಆರೋಪ ಕೇಳಿಬಂದಿತ್ತು.
ಈ ಹಿನ್ನೆಲೆಯಲ್ಲಿ ಈತನ ಕಾರವಾರದ ನಾಲ್ಕು ಫ್ಲಾಟ್ಗಳ ಮೇಲೆ ಇಡಿ ದಾಳಿ ನಡೆಸಿ ಶೋಧ ನಡೆಸಿದ್ದು ತನಿಖೆ ಮುಂದುವರೆದಿದೆ.






