ಮಹಿಳೆ ಇಲ್ಲದೇ ಸದನ ನಡೆಸಬಾರದು ಹೆಣ್ಣು ಕುಲಕ್ಕೆ ಅಗೌರವ -ರಾಜ್ಯಸರ್ಕಾರದ ವಿರುದ್ಧ ಅಸಮದಾನ ಹೊರಹಾಕಿದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ

Dr Nagalakshmi Chowdhary speaking to media in Karwar about the absence of women ministers in Karnataka cabinet. Dr Nagalakshmi Chowdhary speaking to media in Karwar about the absence of women ministers in Karnataka cabinet.
Dr Nagalakshmi Chowdhary speaking to media in Karwar about the absence of women ministers in Karnataka cabinet.

 

ಮಹಿಳೆ ಇಲ್ಲದೇ ಸದನ ನಡೆಸಬಾರದು ಹೆಣ್ಣು ಕುಲಕ್ಕೆ ಅಗೌರವ -ರಾಜ್ಯಸರ್ಕಾರದ ವಿರುದ್ಧ ಅಸಮದಾನ ಹೊರಹಾಕಿದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ

ಕಾರವಾರ :- ಮಹಿಳಾ ಸಚಿವರಿಲ್ಲದೆ ರಾಜ್ಯದ ಸದನ ನಡೆಸುತ್ತಿರುವ ಕುರಿತು ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾರವಾರದಲ್ಲಿ (karwar) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಹಿಳೆಯರು ಇಲ್ಲದೆ ಸದನ ನಡೆಸುವುದು ಹೆಣ್ಣು ಕುಲಕ್ಕೆ ಮಾಡುವ ಅಗೌರವ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಈ ಕುರಿತು ಈಗಾಗಲೇ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ತಿಳಿಸಿದ ಅವರು, ಆದಷ್ಟು ಬೇಗ ಮಹಿಳೆಯರಿಗೆ ಸಚಿವ ಸ್ಥಾನ ನೀಡಿ ಗೌರವಿಸಬೇಕು ಎಂದು ಒತ್ತಾಯಿಸಿದರು.Karwar | ಸಿದ್ದರಾಮಯ್ಯನವರಿಗೆ ಅವಮಾನದಿಂದ ಹಿಡಿದು ಎಥನಾಲ್ ಮಿಶ್ರಣ ವಿವಾದ ಕುರಿತು ಸಚಿವ ಲಕ್ಷ್ಮಣ ಸವದಿ ಹೇಳಿದ್ದೇನು ? 

ಐದು ತಿಂಗಳಿನಿಂದ ರಾಜ್ಯದಲ್ಲಿ ಮಹಿಳಾ ಸಚಿವರಿಲ್ಲ. ಮೀಸಲಾತಿ ಇಲ್ಲದಿದ್ದರೆ ರಾಜಕೀಯ ಪಕ್ಷಗಳು ಮಹಿಳೆಯರಿಗೆ ಸ್ವಯಂಪ್ರೇರಿತವಾಗಿ ಸ್ಥಾನಮಾನ ನೀಡುವುದಿಲ್ಲ. ಕಾನೂನು ಬಂದರೆ ಮಾತ್ರ ಎಲ್ಲರೂ ಮಹಿಳೆಯರಿಗೆ ಅವಕಾಶ ನೀಡುತ್ತಾರೆ ಎಂಬ ಪರಿಸ್ಥಿತಿ ಇದೆ ಎಂದು ಅವರು ಹೇಳಿದರು.

ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ಮಹಿಳೆಯರಿಗೆ ಸಚಿವ ಸ್ಥಾನ ನೀಡದಿರುವುದನ್ನು ನಾನು ಖಂಡಿಸುತ್ತೇನೆ. ಸರ್ಕಾರ ಆದಷ್ಟು ಬೇಗ ಮಹಿಳೆಯರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ಸ್ಟಿಂಗ್ ಆಪರೇಷನ್ ವಿಚಾರವಾಗಿ ಪ್ರತಿಕ್ರಿಯಿಸಿದ ಡಾ. ನಾಗಲಕ್ಷ್ಮೀ ಚೌಧರಿ, ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು, ತನಿಖೆ ನಡೆಯುತ್ತಿದೆ. ಹೀಗಾಗಿ ಈ ಹಂತದಲ್ಲಿ ನಾನು ಸರ್ಕಾರಕ್ಕೆ ಪತ್ರ ಬರೆಯುವ ಅವಕಾಶ ಇಲ್ಲ,ಅದರ್ ವೈಸ್ ಈ ವಿಷಯವನ್ನು ಹಾಗೆಯೇ ಬಿಡುತ್ತಿರಲಿಲ್ಲ.ಯಾವುದೇ ಮಹಿಳೆ ದೂರು ನೀಡಿದ್ದರೆ ತನಿಖೆಗೆ ಸೂಚಿಸಬಹುದಿತ್ತು ಎಂದರು.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement