A.T.S team came to Bhatkal to search for the terrorist and put a notice on the house and search 21 June 2024

ಉಗ್ರನ ಹುಡುಕಾಟಕ್ಕೆ ಭಟ್ಕಳಕ್ಕೆ ಬಂದ A.T.S ತಂಡ ! ಮನೆಗೆ ನೋಟಿಸ್ ಅಂಟಿಸಿ ಹೋಗಿದ್ದೇಕೆ?

84

Terrorist news :-ಶಂಕಿತ ಉಗ್ರನ (suspected terrorist )ಪತ್ತೆಗಾಗಿ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಆತನ ಮನೆಗೆ ನೋಟಿಸ್ ಅಂಟಿಸಿ ಶೋಧ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದಿದೆ.

ಭಟ್ಕಳ ತಾಲೂಕಿನ ನವಾಯತ್ ಕಾಲೋನಿಯ ಹಾಜಿ ಮಂಜಿಲ್ ನಿವಾಸಿಯಾಗಿದ್ದ ಅಬ್ದುಲ್ ಕಬೀರ್ ಸುಲ್ತಾನ್ ಅಲಿಯಾಸ್ ಮೌಲಾನ ಸುಲ್ತಾನ್ ಎಂಬಾತನಿಗೆ ಶೋಧ ನಡೆಸಿದ್ದಾರೆ‌.

ಪುಣೆಯಲ್ಲಿ ನಡೆದ ಉಗ್ರ ಕೃತ್ಯ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದಾನೆ.ಕಳೆದ ಒಂದು ವರ್ಷದಿಂದ ನಾಪತ್ತೆಯಾಗಿರುವ ಈತ ಸಿರಿಯಾ ಅಥವಾ ಅಫ್ಘಾನಿಸ್ತಾನದಲ್ಲಿ ಅಮೇರಿಕಾ ಬಾಂಬ್ ಬ್ಲಾಸ್ಟ್‌ಗೆ ಮೃತನಾಗಿರುವ ಬಗ್ಗೆ ಅಮೇರಿಕದ ಮಾಧ್ಯಮದಲ್ಲಿ ಸುದ್ದಿ ಪ್ರಕಟವಾಗಿತ್ತು. ಆದರೇ ಈತನ ಸಾವಿಗೆ ಯಾವುದೇ ಪುರಾವೆಗಳು ಭಾರತಕ್ಕೆ ದೊರೆತಿರಲಿಲ್ಲ.

ಇದನ್ನೂ ಓದಿ:-NIA ದಾಳಿ| ಶಿರಸಿಯ ಅಬ್ದುಲ್ ಶುಕ್ಕೂರ್ ಮೇಲಿರುವ ಆರೋಪ ಏನು ಗೊತ್ತಾ?

ಹೀಗಾಗಿ ಮಹಾರಾಷ್ಟ್ರ ಕೋರ್ಟ್( Maharashtra court )ನಿಂದ ಬಂಧಿಸಲು ಸೂಚನೆ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಪೊಲೀಸರ ಸಹಾಯ ಕೇಳಿದ್ದು ಈತ ಬದುಕಿದ್ದಾನ ಎಂಬ ಹಿನ್ನೆಲೆಯಲ್ಲಿ ಶೋಧ ನಡೆಸಿದ್ದು ಒಂದುವೇಳೆ ಮೃತನಾಗಿದ್ದರೇ ಕುಟುಂಬದವರು ಮಾಹಿತಿ ನೀಡುವ ಸಲವಾಗಿ ನೋಟಿಸ್ ಅಂಟಿಸಿದ್ದಾರೆ.

ಇದನ್ನೂ ಓದಿ:-Rameshwaram Cafe| ಬೆಂಗಳೂರಿನ ನಿಂದ ಭಟ್ಕಳಕ್ಕೆ ಆಗಮಿಸಿದ ಉಗ್ರ!

ಆದರೇ ಈತನ ಬಗ್ಗೆ ಕುಟುಂಬದವರು ಸಹ ಯಾವುದೇ ಮಾಹಿತಿ ನೀಡಿಲ್ಲ ಎಂಬ ಮಾಹಿತಿ ಪೊಲೀಸರಿಂದ ತಿಳಿದುಬಂದಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!