NIA arrests man on charges of terrorist activities in

ಭಯೋತ್ಪಾದಕ ಚಟುವಟಿಕೆ ಲಿಂಕ್- ಶಿರಸಿಯಲ್ಲಿ ಓರ್ವನ ವಶಕ್ಕೆ ಪಡೆದ NIA ತಂಡ

187

ಕಾರವಾರ:- ಆನ್ ಲೈನ್ ಮೂಲಕ ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕ ಹಾಗೂ ಪಾಸ್ ಪೋರ್ಟ ನಲ್ಲಿ ನಕಲಿ ದಾಖಲೆ ನೀಡಿರುವ ಆರೋಪದಡಿ ದುಬೈ ನಿಂದ ಶಿರಸಿ ತಾಲೂಕಿನ ಬನವಾಸಿ ವ್ಯಾಪ್ತಿಯ ದಾಸನ ಕೊಪ್ಪಕ್ಕೆ ಬಕ್ರಿದ್ ಹಬ್ಬದ ನಿಮಿತ್ತ ಆಗಮಿಸಿದ್ದ ಅಬ್ದುಲ್ ಸುಕ್ಕೂರ್ ಎಂಬಾತನನ್ನು ಇಂದು ಬೆಳಗ್ಗೆ ಬೆಂಗಳೂರಿನಿಂದ ಆಗಮಿಸಿದ NIA ತಂಡ ವಶಕ್ಕೆ ಪಡೆದು ತನಿಖೆ ಕೈಗೊಂಡಿದೆ.

ವಶಕ್ಕೆ ಪಡೆದ ಅಬ್ದುಲ್ ಸುಕ್ಕೂರ್

ಇದನ್ನೂ ಓದಿ:-ಭಟ್ಕಳ ,ಶಿರಸಿಯಲ್ಲಿ ಮುಂದುವರೆದ PFI ಮೇಲಿನ ಕಾರ್ಯಾಚರಣೆ:ವಿವರ ನೋಡಿ

ಬೆಳಗ್ಗೆ ಐದು ಜನರಿದ್ದ NIA ತಂಡ ಶಿರಸಿಗೆ ಆಗಮಿಸಿ ನಂತರ ಬನವಾಸಿ ಠಾಣಾ ವ್ಯಾಪ್ತಿಯ ದಾಸನಕೊಪ್ಪಕ್ಕೆ ತೆರಳಿದ್ದು ಅಬ್ದುಲ್ ಸುಕ್ಕೂರ್ ನನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದೆ.

ಇದನ್ನೂ ಓದಿ:-SIRSI| ತಪ್ಪು ಮಾಡಿದ್ದು ಮಗ-ಅಪ್ಪನಿಗೆ ಕೊಡ್ತು COURT ಶಿಕ್ಷೆ?

ಇನ್ನು ಈ ಹಿಂದೆ ಶಿರಸಿಯಲ್ಲಿ PFI ಮುಖಂಡರನ್ನು ಸಹ ತನಿಖೆ ಕೈಗೊಂಡಿದ್ದಲ್ಲದೇ ಶಿರಸಿಯ ಟಿಪ್ಪು ನಗರದಲ್ಲಿ ಭಯತ್ಪಾದಕ ಸಂಘಟನೆಯ ವ್ಯಕ್ತಿಗಳಿಗೆ ಮೊಬೈಲ್ ಸಿಮ್ ನೀಡಿದ ಆರೋಪದಡಿ ಓರ್ವನನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿತ್ತು.

ಸದ್ಯ ಹೆಚ್ಚನ ಮಾಹಿತಿ ಹೊರಬರಬೇಕಿದ್ದು ವಿಚಾರಣೆಗಾಗಿ NIA ತಂಡ ಅಬ್ದುಲ್ ಸುಕ್ಕೂರ್ ನನ್ನು ಬೆಂಗಳೂರಿಗೆ ಕರೆದೊಯ್ದಿದೆ.

ಇದನ್ನೂ ಓದಿ:-ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ|ಭಟ್ಕಳದಲ್ಲಿ NIA ದಾಳಿ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!