ಭಟ್ಕಳ ,ಶಿರಸಿಯಲ್ಲಿ ಮುಂದುವರೆದ PFI ಮೇಲಿನ ಕಾರ್ಯಾಚರಣೆ:ವಿವರ ನೋಡಿ

1068

ಕಾರವಾರ: ಒಂದೆಡೆ ದೇಶದ ಪಿಎಫ್‌ಐ ಸಂಘಟನೆಗಳನ್ನು ನಿಷೇಧಿಸಿ ಕನ್ನಡ ಜಿಲ್ಲೆಯ ಶಿರಸಿ ಹಾಗೂ ಭಟ್ಕಳದಲ್ಲಿ ಪಿಎಫ್‌ಐ ಸಂಘಟನೆ ಸದಸ್ಯರು ಹಾಗೂ ಕಚೇರಿ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲನೆ.

ಶಿರಸಿಯ ನೆಹರೂ ನಗರದ ನಿವಾಸಿ
ಪಿಎಫ್‌ಐ ಮಾಜಿ ಜಿಲ್ಲಾಧ್ಯಕ್ಷ ಹಾಗೂ ತಾಲೂಕು ಘಟಕದ ಅಧ್ಯಕ್ಷ ಅಬ್ದುಲ್ ಗಫೂರ್ ಮನೆಯಲ್ಲಿ ಶೋಧ ನಡೆಸಿದ್ದು ಮೊನ್ನೆಯಷ್ಟೇ ಈತನನ್ನು ವಶಕ್ಕೆ ಪಡೆದು ಕಲಂ 107 ದಾಖಲಿಸಿ ಬಿಡುಗಡೆ ಮಾಡಲಾಗಿದೆ.

ಶಿರಸಿಯ ತಹಶೀಲ್ದಾರ್ ಶ್ರೀಧರ್, ಡಿವೈಎಸ್‌ಪಿ ರವಿ ನಾಯ್ಕ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಇದಲ್ಲದೇ ಭಟ್ಕಳದಲ್ಲಿ ಸಹ ಉಪವಿಭಾಗಾಧಿಕಾರಿ ಮಮತಾದೇವಿ, ಡಿವೈಎಸ್ಪಿ ಬೆಳ್ಳಿಯಪ್ಪ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು ,ನಗರದ ಮದೀನಾ ಕಾಲೋನಿಯ ನಿವಾಸಿಗಳಾದ ಪಿಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಲ್ಮಾನ್, ಜಿಲ್ಲಾಧ್ಯಕ್ಷ ಅಬ್ದುಲ್ ಕರೀಂ ಮನೆ ಮೇಲೂ ದಾಳಿ ನಡೆಸಿದ್ದು ದಾಖಲೆಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತಿದ್ದಾರೆ.

ಜಿಲ್ಲೆಯ ಶಿರಸಿ ನಗರ, ಭಟ್ಕಳ ನಗರ ಮತ್ತು ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಮುಂದುವರೆದಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

error: Content is protected !!