Sirsi news traffic rules violation fine

SIRSI NEWS| ರಸ್ತೆಯಲ್ಲಿ ಹೆಡ್ ಲೈಟ್ ಬಿಟ್ಟವನಿಗೆ 5000 ದಂಡ!

139

SIRSI NEWS:- ರಸ್ತೆಗಳಲ್ಲಿ ರಾತ್ರಿ ವಾಹನ ಸವಾರಿ ಮಾಡೋದು ಅಂದ್ರೆ ಬಹಳಾ ಕಷ್ಟ. ಕಾರಣ ಹಲವು ವಾಹನಗಳಲ್ಲಿ ನಿಗದಿಗಿಂತ ಹೆಚ್ಚು ಬಲ್ಪ್ ಅಳವಡಿಸಿದ್ರೆ ,ಇನ್ನು ಕೆಲವು ವಾಹನಗಳಲ್ಲಿ ನಿಗದಿ ಗಿಂತ ಬೆಳಕಿನ ಪ್ರಮಾಣ ಇರುವ ಬಲ್ಪ ಬಳಸುತ್ತಿರುವುದು. ಇನ್ನು ಸಂಚಾರ ಮಾಡುವಾಗ ಡಿಮ್ ಎಂಡ್ ಡಿಪ್ ಮಾಡದೇ ಎದುರಿಗಿನ ಸವಾರನನ್ನ ಅಪಘಾತ ಪಡಿಸಿ ಯಮಲೋಕಕ್ಕೆ ಕಳುಹಿಸಿದ್ದು ಉಂಟು.

ಹೌದು ಈ ಎಲ್ಲಾ ಕಾರಣಕ್ಕೆ ಸಂಚಾರಿ ನಿಯಮ ಪಾಲಿಸದ ವಾಹನ ಸವಾರರಿಗೆ ಶಿರಸಿ ನಗರ ಠಾಣೆ ಪೊಲೀಸರು ದಂಡದ ಬಿಸಿ ಮುಟ್ಟಿಸುವ ಜೊತೆ ಸಂಚಾರಿ ನಿಯಮದ ಪಾಠ ಮಾಡುತಿದ್ದಾರೆ.

ಶಿರಸಿ ನಗರದ ಬಿಡ್ಕಿ ಬೈಲ್ ನಲ್ಲಿ ಶಿರಸಿ ನಗರ ಠಾಣೆಯ ಪಿಎಸ್ಐ ನಾಗಪ್ಪ .ಬಿ ಮತ್ತು ಸಿಬ್ಬಂದಿಗಳಾದ ಎಎಸ್ಐ ಹೊನ್ನಪ್ಪ,ನೆಲ್ಸನ್ ಮಂಥಾರೊ,ಹನಮಂತ ಕಬಾಡಿಯವರನ್ನೊಳಗೊಂಡ ತಂಡ ವಾಹನಗಳ ತಪಾಸಣೆ ನಡೆಸಿ ದೋಷಪೂರಿತ ಎಲ್ಇಡಿ ಲೈಟ್ ಗಳನ್ನು ಅಳವಡಿಸಿದ್ದ ವಾಹನ ಸವಾರರ ಮೇಲೆ ಐಎಂವಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ 5000 ರೂ ದಂಡ ವಿಧಿಸಿದ್ದಾರೆ.

ಜಿಲ್ಲೆಯಲ್ಲೇ ಇದೇ ಮೊದಲ ಬಾರಿ ಐಎಂವಿ ಕಾಯ್ದೆಯಡಿ ಪ್ರಕರಣಗಳು ದಾಖಲಾಗುತಿದ್ದು , ಇನ್ನಾದರೂ ಸವಾರರು ಎಚ್ಚೆತ್ತುಕೊಂಡು ವಾಹನಗಳಿಗೆ ನಿಗದಿ ಬಲ್ಪ್ ಬಳಸಿ ಸಂಚಾರ ನಿಯಮ ಪಾಲಿಸಬೇಕಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!