Poster Karnataka landslide heavy rain weather forecast

ಕರಾವಳಿಯಲ್ಲಿ ಭಾರಿ ಮಳೆ ಭೂ ಕುಸಿತದ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

128

UTTARA KANNADA NEWS :-ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿ (karavali) ಭಾಗದಲ್ಲಿ ಒಂದು ವಾರಗಳ ಕಾಲ ಭಾರಿ ಮಳೆ ಹಾಗೂ ಭೂ ಕುಸಿತದ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

ಉತ್ತರ ಕನ್ನಡ ಜಿಲ್ಲೆಯ ಕರಾವಳಿ ,ಪಶ್ಚಿಮ ಘಟ್ಟ (Western Ghat )ಭಾಗದಲ್ಲಿ ಜೂನ್ 21,22 ರಂದು ಆರೆಂಜ್ ಅಲರ್ಟ ( Orange alert) ನೀಡಲಾಗಿದ್ದು ,ಈ ಸಮಯದಲ್ಲಿ 115.6 mm ನಿಂದ 204.4mm ವರೆಗೆ ಮಳೆಯಾಗಲಿದೆ.

ಇನ್ನು 23 ರಂದು ಜಿಲ್ಲೆಯಾಧ್ಯಾಂತ ರೆಡ್ ಅಲರ್ಟ (Red Alert )ನೀಡಲಾಗಿದ್ದು ಈ ಸಂದರ್ಭದಲ್ಲಿ 204.4mm ಗೂ ಹೆಚ್ವು ಮಳೆಯಾಗಲಿದ್ದು (Rain) ಸಮುದ್ರ ಭಾಗದಲ್ಲಿ 45 ರಿಂದ 55 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಲಿದ್ದು ಈ ಸಂದರ್ಭದಲ್ಲಿ ಸಂಪ್ರದಾಯಿಕ ಮೀನುಗಾರರು ಸಮುದ್ರಕ್ಕಿಳಿಯಲು ನಿಷೇಧ ಹೇರಿದೆ.

ಮತ್ತೆ ಭೂ ಕುಸಿತದ ಆತಂಕ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷದಿಂದ ನಿರಂತರ ಭೂ ಕುಸಿತವಾಗಿದೆ . ಈ ಹಿಂದೆ 2019 ರಲ್ಲಿ ಕಾರವಾರದ ಕಡವಾಡದ ಝರಿವಾಡಾ ದಲ್ಲಿ ಭೂ ಕುಸಿತದಿಂದ 19 ಜನರು ಸಾವಿಗೀಡಾಗಿದ್ದರು. ಇನ್ನು 2022 ರಲ್ಲಿ ಭಟ್ಕಳದ ಮುಟ್ಟಳ್ಳಿಯಲ್ಲಿ ಭೂ ಕುಸಿತವಾಗಿ ನಾಲ್ಕು ಜನ ಮೃತಪಟ್ಟಿದ್ದರು.

ಇನ್ನು ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ವರದಿಯಂತೆ ಜಿಲ್ಲೆಯ 439 ಪ್ರದೇಶದಲ್ಲಿ ಭೂ ಕುಸಿತ ನಿರಂತರವಾಗಿ ಆಗುವ ಸಾಧ್ಯತೆಯ ವರದಿಯನ್ನು ಸಹ ನೀಡಿದೆ.

ಇದರಂತೆ ಯಲ್ಲಾಪುರ ,ಜೋಯಿಡಾ, ಕಾರವಾರ, ಶಿರಸಿ,ಹೊನ್ನಾವರ, ಭಟ್ಕಳ ತಾಲೂಕು ಭಾಗದಲ್ಲಿ ಹೆಚ್ಚು ಭೂ ಕುಸಿತವಾಗುವ ಸಾಧ್ಯತೆಯನ್ನು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ:-ಗೋಕರ್ಣ ಮಹಾಬಲೇಶ್ವರನನ್ನು ಮುಳುಗಿಸಿದ ಕೊಚ್ಚೆ ನೀರು!

ಇನ್ನು ಇದೀಗ ಹವಾಮಾನ ಇಲಾಖೆ ಸಹ ಹೆಚ್ಚಿನ ಮಳೆಯಿಂದ ಭೂ ಕುಸಿತವಾಗುವ ಸಾಧ್ಯತೆಯನ್ನು ತಿಳಿಸಿದ್ದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!