fisherman died after being hit by a poisonous gravel fish while going fishing

KARWAR| ವಿಷ ಮೀನಿನ ವಿಷ ತಗುಲಿ ಮೀನುಗಾರ ಸಾವು

143

KARWAR :- ಪಾತಿ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ ಮೀನುಗಾರನಿಗೆ ಮೀನಿನ ವಿಷ ತಗುಲಿದ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ ಘಟನೆ ಕಾರವಾರದಲ್ಲಿ ನಡೆದಿದೆ.

ನಗರದ ದೇವಭಾಗದ (Devbag) ನರಸಿಂಹವಾಡದಲ್ಲಿ ವಾಸವಾಗಿದ್ದ ಕೃಷ್ಣಾ ಸೈರು ಕಿರ್ಲೋಸ್ಕರ್ ಎಂಬಾತ ಮೀನು ಹಿಡಿಯುವುದಕ್ಕಾಗಿ ಚಿಕ್ಕದಾದ ಪಾತಿ ದೋಣಿಯಲ್ಲಿ ಅರಬ್ಬಿ ಸಮುದ್ರಕ್ಕೆ ತೆರಳಿದ್ದನು . ಮೀನುಗಾರಿಕೆ ಮುಗಿಸಿ ದಡಕ್ಕೆ ಹಿಂತಿರುಗಿದ ಈತನಿಗೆ ಬಲೆಯಲ್ಲಿ `ಜಲ್ಲಿ ಫಿಶ್‘ ಕಾಣಿಸಿದ್ದು, ಅದನ್ನು ಬಲೆಯಿಂದ ತೆಗೆದು ಹೊರಗೆ ಬಿಟ್ಟಿದ್ದನು.

ಇದನ್ನೂ ಓದಿ:-CONGRESS ಸರ್ಕಾರದ ಗ್ಯಾರಂಟಿ EFFECT KARNATAK ದಲ್ಲಿ ಡೀಸೆಲ್ 3.5₹ ,ಪೆಟ್ರೋಲ್ ದರ 3₹ ಏರಿಕೆ!

ಆದರೇ ಆ ಮೀನನ್ನು(fish) ಬಲೆಯಿಂದ ಹೊರ ತೆಗೆಯುವಾಗ ಮೀನಿನ ಕೆಲ ಅಂಗಾoಗಗಳು ಆತನ ಮೈ ಹಾಗೂ ಕಣ್ಣಿಗೆ ತಾಗಿದ್ದವು. ಇದರಿಂದ ಆರೋಗ್ಯದಲ್ಲಿ ಏರುಪೇರಾಗಿದ್ದು, ತಕ್ಷಣ ಆತನನ್ನು ಕಾರವಾರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡಿದ್ದಾನೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!