Actor Darshan Case | 3991 ಪುಟದ ಚಾರ್ಜ್‌ಶೀಟ್‌- ಏನಿದೆ ವಿವರ ನೋಡಿ

ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ (Actor Darshan tugudeep)ದರ್ಶನ್ ಗ್ಯಾಂಗ್ ವಿರುದ್ಧ ಪೊಲೀಸರು
Actor darshan case Actor darshan case

Uttrakannda karwar Gilani festival offers

Karwar milal big sale

ವರದಿ|ಶುಭಾಸಾಗರ್.
ಬೆಂಗಳೂರು| 04 September 2024: ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ (Actor Darshan tugudeep)ದರ್ಶನ್ ಗ್ಯಾಂಗ್ ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ 3,991 ಪುಟಗಳ ಚಾರ್ಜ್‌ಶೀಟ್‌ ನನ್ನು ಇಂದು ಸಲ್ಲಿಸಿದ್ದಾರೆ.

Advertisement

24ನೇ ಎಸಿಎಂಎಂ ನ್ಯಾಯಾಲಯದ (court) ನ್ಯಾಯಾಧೀಶ ಮಾರುತೇಶ್ ಪರಸುರಾಮ್ ಮೋಹಿತ್ ಅವರಿಗೆ ಒಂದು ಬಾಕ್ಸ್‌ನಲ್ಲಿ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಲಾಗಿದೆ.

ಚಾರ್ಜ್‌ಶೀಟ್‌ನಲ್ಲಿ ಏನಿದೆ?

Actor Darshan charge sheet kannadavani

231 ಸಾಕ್ಷಿ ಉಲ್ಲೇಖ, 27 ಜನ ಸಾಕ್ಷಿ,164, ಪ್ರತ್ಯೇಕ್ಷ ಸಾಕ್ಷಿದಾರರು-3 , ಪ್ರತ್ಯಕ್ಷ ದರ್ಶಿ- 03, ಸಿಎಫ್‌ಎಸ್‌ಎಲ್ -8, 59 -ಪಂಚರ ಸಾಕ್ಷಿ, ಪೊಲೀಸರು – 56, ಸರ್ಕಾರಿ ಅಧಿಕಾರಿಗಳು – 8, ಎಫ್‌ಎಸ್‌ಎಲ್, ಸಿಎಫ್‌ಎಸ್‌ಎಲ್ 08, ಪ್ರತ್ಯಕ್ಷ ಸಾಕ್ಷಿಗಳು -03, ಪೊಲೀಸ್ರ ಎದುರು ಸಿಆರ್‌ಪಿಸಿ 161 ಅಡಿ ಹೇಳಿಕೆ ದಾಖಲಿಸಿದ ವ್ಯಕ್ತಿಗಳು 97, ನ್ಯಾಯಾಧೀಶರ ಮುಂದೆ 164 ಹೇಳಿಕೆಯನ್ನು 27 ಮಂದಿ ದಾಖಲಿಸಿದ್ದಾರೆ.

ಇದನ್ನೂ ಓದಿ:- Uttra kannda Today |ಫಟಾ ಫಟ್ ಸುದ್ದಿ ಎಲ್ಲಿ ಏನು?

 

ಆರೋಪಿಗಳು ಯಥಾ ಸ್ಥಿತಿ.:-

ಚಾರ್ಜ್‌ಶೀಟ್‌ನಲ್ಲಿ ಆರೋಪಿಗಳನ್ನು ಯಥಾಸ್ಥಿತಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಪವಿತ್ರಗೌಡ -ಎ1, ದರ್ಶನ್ (Darshan) ಎ-2, 14 ಜನರ ಮೇಲೆ ಕೊಲೆ ಆರೋಪ, 14 ಜನರ ಮೇಲೆ ಅಪಹರಣ ಮತ್ತು ಕೊಲೆ ಆರೋಪ, ಮೂರು ಆರೋಪಿಗಳ ಮೇಲೆ ಮಾತ್ರ ಸಾಕ್ಷ್ಯ ನಾಶ ಕೇಸ್ ದಾಖಲಿಸಿರುವ ಬಗ್ಗೆ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಮೂವರ ಮೇಲೆ ಸಾಕ್ಷಿ ನಾಶ ಪ್ರಕರಣ.

ಕಾರ್ತಿಕ್ ಅಲಿಯಾಸ್ ಕಪ್ಪೆ, ಕೇಶವಮೂರ್ತಿ, ನಿಖಿಲ್ ನಾಯಕ್ ಈ ಮೂವರ ಮೇಲೆ ಸಾಕ್ಷಿ ನಾಶ ಪ್ರಕರಣ ದಾಖಲಾಗಿದೆ.

ದರ್ಶನ್ & ಪವಿತ್ರಗೌಡ ಗ್ಯಾಂಗ್ ವಿರುದ್ಧ ಏನೇನು ಕೇಸ್?

Kannadavani Actor Darshan pavithra gawda

ನಟ ದರ್ಶನ್, ಪವಿತ್ರ ಗೌಡ ಹಾಗೂ ಇವರ ಗ್ಯಾಂಗ್ ವಿರುದ್ಧ ಕಿಡ್ನ್ಯಾಪ್, ಕೊಲೆ, ಸಾಕ್ಷಿ ನಾಶ, ಒಳಸಂಚು, ದರೋಡೆ, ಕಾನೂನುಬಾಹಿರ ಗುಂಪುಗಾರಿಕೆ ಪ್ರಕರಣ ದಾಖಲಾಗಿದೆ.

ಐದು ವ್ಯಾಲ್ಯುಂ ಅಲ್ಲಿ ಎಲ್ಲವನ್ನೂ ಪ್ರತ್ಯೇಕವಾಗಿ ಸಲ್ಲಿಕೆ:

ಮೊದಲ ವ್ಯಾಲ್ಯುಂ – ಪ್ರಕರಣದ ಸಂಕ್ಷಿಪ್ತ ವರದಿ
ಎರಡನೇ ವ್ಯಾಲ್ಯುಂ – 17 ಜನ ಆರೋಪಿಗಳ ಸ್ವ ಇಚ್ಛಾ ಹೇಳಿಕೆ
ಮೂರುನೇ ವ್ಯಾಲ್ಯೂಂ – ಸಾಕ್ಷಿಗಳು (ಪ್ರತ್ಯಕ್ಷ ಮತ್ತು ಪರೋಕ್ಷ ಸಾಕ್ಷಿಗಳು)

ನಾಲ್ಕನೇ ವ್ಯಾಲ್ಯೂಂ – ಮರಣೋತ್ತರ ಪರೀಕ್ಷೆ ಎಫ್‌ಎಸ್‌ಎಲ್ ರಿಪೋರ್ಟ್

ಐದು ನೇ ವ್ಯಾಲ್ಯೂಂ – ಎಫ್‌ಎಸ್‌ಎಲ್ & ಸಿಎಸ್‌ಎಫ್‌ಎಲ್ ಅನಾಲಿಸ್

ಶಿರಸ್ತೆದಾರ್ ಪರಿಶೀಲನೆ ನಡೆಸಿದ ಬಳಿಕ ಪೊಲೀಸರು ಸಿಸಿ ಮಾಡಲಿದ್ದಾರೆ. ಎಲ್ಲ ಪ್ರತಿಗಳು ಸಿಸಿಯಾದ ಬಳಿಕ ಆರೋಪಿಗಳಿಗೆ Charge sheet
ಪ್ರತಿ ನೀಡಲಾಗುವುದು.

Charg sheet ಪ್ರತಿ ಆರೋಪಿಗಳಿಗೆ ಸಿಕ್ಕ ಬಳಿಕ ನ್ಯಾಯಾಲಯ ಕಮಿಟಲ್ ಮಾಡಲಿದೆ. ಕಮಿಟಲ್ ಮಾಡಿ ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿ ವಿಚಾರಣೆ ನಡೆಸಲಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement