ಉತ್ತರ ಕನ್ನಡ ಜಿಲ್ಲೆಯಲ್ಲಿ POP ಗಣೇಶ ಮೂರ್ತಿ ತಡೆಗೆ ಗಡಿಯಲ್ಲಿ ನಿಗಾ


Karwar News :– ಪರಿಸರ ಮಾಲಿನ್ಯ ನಿಯಂತ್ರಣ ಮಾಡಲು ಮಣ್ಣಿನ ಗಣಪತಿಗೆ ಪ್ರಾಶಸ್ತ್ಯ ನೀಡಲಾಗಿದೆ. ಇತ್ತ ಗಣೇಶ ಮೂರ್ತಿಗಳು ರಾಜ್ಯ ಹೊರ ರಾಜ್ಯದಿಂದ ಜಿಲ್ಲೆಗೆ ಆಗಮಿಸುತಿದ್ದು ಗಣೇಶ ಮೂರ್ತಿಗಳ ಮಾರಾಟ ಜೋರಾಗಿದೆ. ಹೀಗಾಗಿ pop ಯಿಂದ ತಯಾರಿಸಿದ ಗಣಪತಿಯನ್ನು ಮಾರಾಟ ಮಾಡದಂತೆ ತಡೆಯಲಾಗುತಿದ್ದು ಜಿಲ್ಲೆಯ ಕಾರವಾರ ,(karwar)ಜೋಯಿಡಾ ಭಾಗದ ಗಡಿಯಲ್ಲಿ ನಿಗಾ ಇಡಲಾಗಿದೆ.
ಜಿಲ್ಲೆಯಲ್ಲಿ 1434 ಸಾರ್ವಜನಿಕ ಗಣಪತಿಗಳನ್ನು ಪ್ರತಿಷ್ಟಾಪನೆ ಮಾಡಲಾಗುತಿದ್ದು ಸಿದ್ದತೆ ಭರದಿಂದ ಸಾಗಿದೆ.
ಇದನ್ನೂ ಓದಿ:- Ankola| ಪ್ರಸಿದ್ಧ ವಿಭೂತಿ ಫಾಲ್ಸ್ ಗೆ ಪ್ರವಾಸಿಗರಿಗೆ ನಿಷೇಧ
ದರ ದುಬಾರಿ.
ಗಣೇಶ ಮೂರ್ತಿಗಳಿಗೆ (Ganesha Murthi) ಇದೀಗ ಬೇಡಿಕೆ ಹೆಚ್ಚಿದೆ.ಮಣ್ಣಿನ ಪೂರೈಕೆ ಸಮಸ್ಯೆಯನ್ನು ಕಲಾವಿದರು ಅನುಭವಿಸುತಿದ್ದಾರೆ. ಇದಲ್ಲದೇ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯಿಂದ ಸಹ ಮೂರ್ತಿಗಳು ಜಿಲ್ಲೆಯ ಅಂಗಡಿಗಳಲ್ಲಿ ಮಾರಾಟ (Sale) ಆಗುತಿದ್ದು ಹಿಂದಿಗಿಂತ ಈಭಾರಿ 25ರಿಂದ 30% ಹೆಚ್ಚಾಗಿದೆ.
ಈ ಬಾರಿ ಗಣೇಶ ಮೂರ್ತಿಗೆ 3500 ರಿಂದ 4 ಸಾವಿರ ದರ ಗಡಿ ದಾಟುವ ಸಾಧ್ಯತೆ ಇದೆ.
Joida | ಸೇತುವೆ ಮುಳುಗಡೆ-ಗ್ರಾಮಸ್ತರು ಅತಂತ್ರ!

Joida News:- ಜೋಯಿಡಾ (Joida) ತಾಲೂಕಿನ ಸೂಫಾ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆ (Rain) ಆಗುತಿದ್ದು ,ಜಲಾಶಯ ಭರ್ತಿಯಾಗುವ ಹಂತ ತಲುಪಿದೆ.ಇದರಿಂದಾಗಿ ಹಿನ್ನೀರಿನ ಪ್ರದೇಶದಲ್ಲಿ ಎಲ್ಲೆಡೆ ನೀರು ಆವರಿಸಿದೆ.
ಕಾಳಪೆ ಗ್ರಾಮದ ಉಳವಿ-ಗೋವಾ ಗಡಿಯ ರಾಜ್ಯ ಹೆದ್ದಾರಿಯಲ್ಲಿ ಸೇತುವೆ ಎರಡು ಬದಿ ನೀರು ತುಂಬಿಕೊಂಡಿದ್ದು ರಸ್ತೆ ಸಂಪರ್ಕ ಸಂಪೂರ್ಣ ಕಡಿತವಾಗಿದೆ.
ಮುರುಡೇಶ್ವರ- PSI ಅಮಾನತು
Police suspend News:- ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ಅಕ್ರಮ ಚಟುವಟಿಕೆಯನ್ನು ನಿಯಂತ್ರಣಕ್ಕೆ ತರಲು ವಿಫಲವಾದ ಹಿನ್ನಲೆಯಲ್ಲಿ ಮುರುಡೇಶ್ವರದ PSI ಮಂಜುನಾಥ್ ರವರನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ.ನಾರಾಯಣ್ ರವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಇತ್ತೀಚೆಗಷ್ಟೇ ಮುರುಡೇಶ್ವರದ ಹೋಟಲ್ ,ಲಾಡ್ಜ್ ಗಳಿಗೆ ದಾಳಿ ನಡೆಸಿದ್ದ ಎಸ್.ಪಿ ರವರ ವಿಶೇಷ ತಂಡ ಹಲವರನ್ನು ಬಂಧಿಸಿ ,ಐಲ್ಯಾಂಡ್ ಹೋಟಲ್ ನನ್ನು ಸೀಜ್ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
Honnavara ನಾಳೆ ವಿದ್ಯುತ್ ಕಡಿತ
ಹೊನ್ನಾವರದ 110ಕೆವಿ ಬಸ್‌ಬಾರ್ ನಿರ್ವಹಣೆಯ ಕೆಲಸದ ನಿಮಿತ್ತ ಸೆ.4 ರಂದು ವಿದ್ಯುತ್ ವ್ಯತ್ಯಯವಾಗಲಿದೆ.
ಅಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯ ವರೆಗೆ ಹೊನ್ನಾವರ ಪಟ್ಟಣ ಶಾಖೆ, ಗ್ರಾಮೀಣ ಶಾಖೆ, ಕಾಸರಕೋಡ ಶಾಖೆ, ಮಂಕಿ ಹಾಗೂ ಗೇರುಸೊಪ್ಪ ಶಾಖಾ ವ್ಯಾಪ್ತಿಯ ಎಲ್ಲಾ ಫೀಡರುಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಜೊತೆಗೆ ಲೈನ್ ನಿರ್ವಹಣೆ ನಿಮಿತ್ತ ಹೊನ್ನಾವರ ಪಟ್ಟಣದ 11ಕೆವಿ ಬಂದರು ಫೀಡರ್ ವ್ಯಾಪ್ತಿಯಲ್ಲಿ ಅಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಈ ವೇಳೆ ಸಹಕರಿಸುವಂತೆ ಹೊನ್ನಾವರ ಉಪ ವಿಭಾಗದ ಸಹಾಯಕ ಎಂಜಿನೀಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Uttra kannda today News






