A land bomb exploded under the journalist's car

JOIDA |ಪತ್ರಕರ್ತರ ಕಾರಿಗೆ ಸಿಲುಕಿ ಸ್ಪೋಟಗೊಂಡ ನಾಡಬಾಂಬ್| ಏನಿದು ವಿವರ ನೋಡಿ.

70

JOIDA NEWS:- ಕಾರ್ಯಕ್ರಮಕ್ಕೆ ತೆರಳುತಿದ್ದ ಪತ್ರಕರ್ತರ ಕಾರಿನ ಕೆಳಗೆ ನಾಡಬಾಂಬ್ ಸ್ಪೋಟ ಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ (Joida) ತಾಲೂಕಿನ ಗುಂದ ಗ್ರಾಮದ ಬಳಿ ನಡೆದಿದೆ.

ಸ್ಥಳೀಯ ಪತ್ರಿಕೆಯ ಪತ್ರಕರ್ತ ಸಂದೇಶ್ ದೇಸಾಯಿ ಎನ್ನುವವವರಿಗೆ ಸೇರಿದ ಕಾರು ಇದಾಗಿದ್ದು ಹಳಿಯಾಳ(Haliyala) ಶಾಸಕರ ಕಾರ್ಯಕ್ರಮಕ್ಕೆ ತೆರಳುತಿದ್ಧ ವೇಳೆ ಕಾರಿನ ಚಕ್ರದ ಬಳಿ ಸಿಡಿದಿದ್ದು ಕಾರಿಗಾಗಲೀ ,ಕಾರಿನಲ್ಲಿ ಕುಳಿತವರಿಗಾಗಲೀ ಯಾವುದೇ ಹಾನಿ ಸಂಭವಿಸಿಲ್ಲ.

ಸ್ಥಳಕ್ಕೆ ಜೋಯಿಡಾ ಠಾಣೆ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ಇದೊಂದು ಪಟಾಕಿಗಳಲ್ಲಿ ಸಿಗುವ ಗರ್ನಲ್ ಆಗಿದ್ದು ಇದು ಪಟಾಕಿಯಂತೆ ಶಬ್ದವಾಗುತ್ತೆ ಹೊರತು ಹಾನಿಯಾಗುವುದಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬಹುತೇಕ ಅರಣ್ಯವಾಸಿಗಳು (forest) ಮಳೆಗಾಲದ ಸಂದರ್ಭದಲ್ಲಿ ತಮ್ಮ ಜಮೀನಿಗೆ ಉಪಟಳ ನೀಡುವ ಕಾಡುಪ್ರಾಣಿಗಳಿಂದ ರಕ್ಷಣೆಗಾಗಿ ಪಟಾಕಿಯ ಮದ್ದನ್ನು ಬಳಸಿ ಅಥವಾ ಗರ್ನಲ್ ನನ್ನು ಬಳಸಿ ಕಾಡು ಪ್ರಾಣಿಗಳು ಉಪಟಳ ನೀಡದಂತೆ ಹೆದರಿಸಲು ಇವುಗಳನ್ನ ಬಳಸುತ್ತಾರೆ.

ಇವು ಪ್ರಾಣಿಗಳು ಅಥವಾ ಯಾವುದೇ ವಸ್ತುಗಳು ಇದರ ಮೇಲೆ ಬಾರ ಬಿದ್ದರೆ ಸ್ಪೋಟಗೊಂಡು ಸದ್ದು ಬರುತ್ತದೆ.ಈ ಸದ್ದಿನಿಂದ ಪ್ರಾಣಿಗಳು ಹೆದರಿ ಹೋಗುವುದರಿಂದ ರೈತರು ಇವುಗಳನ್ನು ಬಳಸುತ್ತಾರೆ.

ಇನ್ನು ನಾಡಬಾಂಬ್ ಗಳಲ್ಲಿ ಪ್ರಾಣಿ ಬೇಟೆಗೂ ಸಹ ಇದೇ ಮಾದರಿ ಬಳಸುತ್ತಾರೆ.ಆದರೇ ಪಟಾಕಿಯ ಮದ್ದುಗಳು ಕಲ್ಲುಗಳ ಚೂರು ,ಗನ್ ಪೌಡರ್ ,ಬೆಂಕಿ ಪಟ್ಟಣದ ಮದ್ದುಗಳನ್ನು ಬಳಸುತ್ತಾರೆ. ಇವುಗಳ ಗಾತ್ರ ದೊಡ್ಡದಿದ್ದು ಸಿಡಿದರೇ ಇದರ ಸಂಪರ್ಕಕ್ಕೆ ಬಂದ ಪ್ರಾಣಿಗಳ ಸಾವು ನಿಶ್ಚಿತ. ಮನುಷ್ಯರಾದರೇ ದೊಡ್ಡ ಪ್ರಮಾಣದ ಗಾಯಗಳಾಗುತ್ತವೆ. ಅಪಾಯದ ಜಾಗಕ್ಕೆ ತಗುಲಿದರೆ ಸಾವು ಸಹ ಸಂಭವಿಸುತ್ತದೆ.

ಆದರೇ ಇಲ್ಲಿ ಸ್ಪೋಟಗೊಂಡಿದ್ದು ಚಿಕ್ಕ ಆಕಾರದ್ದಾಗಿದ್ದು ಪಟಾಕಿ ಸಿಡಿದಂತೆ ಅಷ್ಟೇ ತೀವ್ರತೆ ಇರುತ್ತದೆ.ಶಬ್ದ ಬರುವುದು ಬಿಟ್ಟರೇ ಹಾನಿ ಯಗುವುದಿಲ್ಲ.

ಇದನ್ನೂ ಓದಿ:-SIRSI NEWS| ರಸ್ತೆಯಲ್ಲಿ ಹೆಡ್ ಲೈಟ್ ಬಿಟ್ಟವನಿಗೆ 5000 ದಂಡ!




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!