Ramnagar news

Joida ಪಿ.ಎಸ್.ಐ ಗೆ ಹೆದರಿಸಲು ಹೋಗಿ ಪೆಟ್ರೋಲ್ ಸುರಿದುಕೊಂಡ ಕುಡುಕ ವಿಡಿಯೋ ಮಾಡಿ ಹೇಳಿದ್ದೇನು ಗೊತ್ತಾ?

137

ಕಾರವಾರ:- ಪಿ.ಎಸ್.ಐ ನಿಂದ ಮಾನಸಿಕ ಕಿರುಕುಳ ಆರೋಪ ಮಾಡಿದ ಯುವಕನೋರ್ವ ಠಾಣೆ ಎದುರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ(joida) ತಾಲೂಕಿನ ರಾಮನಗರದಲ್ಲಿ ಗುರುವಾರ (Ramnagar)ನಡೆದಿದೆ. ರಾಮನಗರದ ಹನುಮಾನ್ ಗಲ್ಲಿಯ ನಿವಾಸಿ ಭಾಸ್ಕರ್ ಬೋಂಡೆಲ್ಕರ್ ಆತ್ಮಹತ್ಯೆ ಗೆ ಯತ್ನಿಸಿದ ವ್ಯಕ್ತಿಯಾಗಿದ್ದಾನೆ.

ಜೂಜಾಟ ಆರೋಪದಡಿ ಈ ಹಿಂದೆ ಈತನ ಮೇಲೆ ಪ್ರಕರಣ ದಾಖಲಿಸಿದ್ದ ರಾಮನಗರ ಪಿ.ಎಸ್.ಐ ಬಸವರಾಜ್ ಮಗನೂರು ವಿರುದ್ಧ ವಶ ಪಡಿಸಿಕೊಂಡ ಹಣಕ್ಕಿಂತ ಕಡಿಮೆ ಮೊತ್ತವನ್ನು ತೋರಿಸಿದ್ದಾರೆ ಎಂದು ಆರೋಪ ಮಾಡಿದ್ದ.

ಇದನ್ನೂ ಓದಿ:-ಜೋಯಿಡಾ|ಪೊಲೀಸ್ ಠಾಣೆಯಲ್ಲೇ ಬಡಿದಾಡಿಕೊಂಡ ಪೊಲೀಸರು!

ಇದಲ್ಲದೇ ನಿನ್ನೆ ಕುಡಿದ ನಶೆಯಲ್ಲಿ ಜಮೀನು ವ್ಯಾಜ್ಯದ ಪ್ರಕರಣ ಕುರಿತು ಠಾಣೆಗೆ ಹೋಗಿದ್ದ ಭಾಸ್ಕರ್ ಪೊಲೀಸರ (police) ಜೊತೆ ಮಾತಿನ ಚಕಮಕಿ ನಡೆಸಿದ್ದ. ಈ ವೇಳೆ ಮದ್ಯ ಸೇವಿಸಿದ್ದರಿಂದ ವಾಹನ ಚಲಾಯಿಸದಂತೆ ತಿಳಿಹೇಳಿದ್ದಾರೆ.

ಇದರಿಂದ ಮತ್ತಷ್ಟು ಕೋಪಗೊಂಡ ಈತ ಮದ್ಯದ ಅಮಲಿನಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದು, ಈ ವೇಳೆ ಮೈಗೆ ಬೆಂಕಿ ತಗುಲಿದೆ.ನಂತರ ಗಂಭೀರ ಗಾಯಗೊಂಡ ಈತನನ್ನು ಬೆಳಗಾವಿ ಆಸ್ಪತ್ರೆಗೆ ರವಾನಿಸಿದ್ದು ,ವಿಡಿಯೋ ಮಾಡಿ ಪಿ‌ಎಸ್.ಐ ಮಾನಸಿಕ ಹಿಂಸೆ ನೀಡಿರುವ ಆರೋಪ ಮಾಡಿದ್ದಾನೆ ಎಂದು ಮೂಲಗಳು ಹೇಳುತ್ತವೆ.

ಇದನ್ನೂ ಓದಿ:-ಹಳಿಯಾಳದಲ್ಲಿ ಸರಣಿ ಕಳ್ಳತನ| ವಾರದಲ್ಲೇ 5 ಅಂಗಡಿ 2ಮನೆಗೆ ನುಗ್ಗಿದ ಕಳ್ಳರು.

ಇನ್ನು ರಾಮನಗರದ ಠಾಣೆ ಎದುರಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಭಾಸ್ಕರ ಬೋಂಡೆಲ್ಕರ ವಿಡಿಯೋ ಮಾಡಿ ಪೊಲೀಸರ ಬ್ರಷ್ಟಾಚಾರದ ಬಗ್ಗೆ ವಿವರಿಸಿದ್ದಾನೆ.

ನಾವು ಐದು ತಿಂಗಳ ಹಿಂದೆ ಜೂಜಾಟ ಮಾಡುವಾಗ ಪಿಎಸ್ ಐ ದಾಳಿ ಮಾಡಿದ್ರು, ಆ ಸಂದರ್ಭದಲ್ಲಿ 3,60,000 ರೂಪಾಯಿ ನಮ್ಮ ಕಡೆ ಇದ್ದವು.
ನಮ್ಮ ಕಡೆ ಇದ್ದ ಹಣವನ್ನು ಪಿಎಸ್ಐ ಬಸವರಾಜ್ ವಶಪಡಿಸಿಕೊಂಡ್ರು.ಆದ್ರೆ ಎಫ್ ಐ ಆರ್ ನಲ್ಲಿ ಕೇವಲ 36,000 ರೂಪಾಯಿ ವಶಪಡಿಸಿಕೊಂಡಿರುವುದಾಗಿ ಹೇಳಿದ್ದಾರೆ.

ಉಳಿದ ನಮ್ಮ ಹಣ ಎಲ್ಲಿ ಹೊಯ್ತು ಅಂತಾ ನಾನು ಹೋಗಿ ಕೇಳಿದ್ರೆ ಸರಿಯಾಗಿ ಪ್ರತಿಕ್ರಿಯೆಕೊಟ್ಟಿರಲಿಲ್ಲ
ಬಳಿಕ ಎಸ್. ಪಿ ಮತ್ತು ಎಎಸ್ ಪಿ ಯವರಿಗೂ ಈ ಬಗ್ಗೆ ಮನವಿ ಕೊಟ್ಟಿದ್ದೇನೆ.

ಡಿಎವೈ ಎಸ್ ಪಿ ನನ್ನ ಕಡೆಯಿಂದ ಮನವಿಯನ್ನು ಪಡೆದುಕೊಂಡ್ರು,ಆದ್ರೆ ಸ್ವಿಕೃತ ಕಾಫಿಯನ್ನ ಕೊಡಿ ಅಂತಾ ಕೇಳಿದ್ರೆ ಕೊಟ್ಟಿರಲಿಲ್ಲ.ಎಷ್ಟೆ ಪ್ರಯತ್ನ ಮಾಡಿದ್ರು ಆ ಹಣದ ಬಗ್ಗೆ ಮಾಹಿತಿನೆ ಸಿಗಲಿಲ್ಲ.

ಬಳಿಕ ನಾನು ಹೋಗುವ ಕೆಲಸದ ಸ್ಥಳದಲ್ಲೂ ಪಿಎಸ್ ಐ ದಿಂದ ಕಿರುಕಳ ಮಾಡತೊಡಗಿದ್ರು,
ಪಿಎಸ್ ಐ ಬಸವರಾಜ ಕಿರುಕಳ ಕ್ಕೆ ಬೇಸತ್ತು ನಾನು ರಾಮನಗರದಲ್ಲಿನ ಕೆಲಸ ಬಿಟ್ಟು ದಾಂಡೇಲಿಯಲ್ಲಿ ಕೆಲಸಕ್ಕೆ ಸೆರ್ಕೊಂಡೆ. ನಿನ್ನೆ ನಮ್ಮ ಸಂಬಂಧಿಯ ಜಾಗದ ಸಮಸ್ಯೆಯ ಕುರಿತ ಮಾತನಾಡಲು ಠಾಣೆಗೆ ಹೊಗಿದ್ದೆ,ಆ ಸಂದರ್ಭದಲ್ಲಿ ಪೊಲೀಸರು ಸರಿಯಾಗಿ ಸ್ಪಂದಿಸಲಿಲ್ಲ.

ನನ್ನ ಕಡೆಯಿದ್ದ ಮೊಬೈಲ್ ಕಿತ್ಕೊಂಡ ಎಲ್ಲ ದಾಖಲೆಗಳನ್ನ ಡಿಲಿಟ್ ಮಾಡಿದ್ರು.ಈ ಬಗ್ಗೆ ನಾನು ಎಸ್ ಪಿ ಯವರಿಗೆ ಕರೆ ಮಾಡಿದ್ದೆ. ನನಗ್ಯಾಕೆ ಕರೆ ಮಾಡ್ತಿಯಾ ಪಿಎಸ್ ಐ ಹತ್ರಾನೆ ಬಗೆಹರಿಸ್ಕೊ ಅಂತಾ ಹೇಳಿದ್ರು.ಯಾರ ಕಡೆಯಿಂದಲೂ ನನಗೆ ನ್ಯಾಯ ಸಿಗುತ್ತಿಲ್ಲ ಪೊಲೀಸರ ನಿರಂತರ ದೌರ್ಜನ್ಯಕ್ಕೆ ಬೆಸತ್ತು ನಾನು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದೆ ಎಂದು ಆತ ಹೇಳಿಕೆ ನೀಡಿದ್ದಾನೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!