BREAKING NEWS
Search

ನರೇಂದ್ರ ಮೋದಿ ಅಂಕೋಲಕ್ಕೆ|ಹೇಗಿದೆ ವ್ಯವಸ್ಥೆ?

241

ಕಾರವಾರ :- ಪ್ರಧಾನಿ ನರೇಂದ್ರ ಮೋದಿಯವರು ಕಾರವಾರ ಅಂಕೋಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಂಕೋಲದ ಹಟ್ಟಿಕೇರಿಯಲ್ಲಿ ಬಹಿರಂಗ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತ ಪ್ರಚಾರ ಮಾಡಲಿದ್ದಾರೆ. ನೌಕಾದಳದ 100 ಎಕರೆ ಜಾಗವನ್ನು ಪಡೆದುಕೊಳ್ಳಲಾಗಿದ್ದು ಇದರಲ್ಲಿ 35 ಎಕರೆಯಷ್ಟು ಭಾಗ ವೇದಿಕೆ ಹಾಗೂ ಜನರಿಗೆ ಕೂರಲು ಅವಕಾಶ ಮಾಡಿಕೊಡಲಾಗಿದೆ.

ಮೂರುವರೆ ಲಕ್ಷ ಜನರು ಹಟ್ಟಿಕೇರಿಯಲ್ಲಿ ಮೋದಿ ಭಾಷಣ ಕೇಳಲು ಆಗಮಿಸುವ ನಿರೀಕ್ಷೆಇದೆ.
ಇನ್ನು ಜನರು ಕುಳಿತು ಭಾಷಣ ಕೇಳಲು ಆಸನ ವ್ಯವಸ್ಥೆ,ಕುಡಿಯುವ ನೀರಿನ ವ್ಯವಸ್ಥೆ,ಶೌಚಾಲಯ ವ್ಯವಸ್ಥೆಯನ್ನು ಉತ್ತಮವಾಗಿ ಕಲ್ಪಿಸಲಾಗಿದೆ.
ಇನ್ನು ಭದ್ರತಾ ದೃಷ್ಟಿಯಿಂದ ನೂರಕ್ಕೂ ಹೆಚ್ಚು ಸಿಸಿ ಕ್ಯಾಮರಾ, ಒಂದು ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದ್ದು ಅಂಕೋಲ ಹಾಗೂ ಕಾರವಾರ ಭಾಗದಲ್ಲಿ ನಾಕಾಬಂಧಿ ಹಾಕಿದ್ದು ತಪಾಸಣೆ ಸಹ ಬಿಗಿ ಗೊಳಿಸಲಾಗಿದೆ. ವೇದಿಕೆ ಹಿಂಭಾಗದಲ್ಲಿ ಹೆಲಿಪಾಡ್ ಅನ್ನು ನಿರ್ಮಿಸಲಾಗಿದ್ದು ಮೋದಿಯವರು ಮಂಗಳೂರಿನಿಂದ ವೇದಿಕೆ ಹಿಂಭಾಗದಲ್ಲೇ ಲ್ಯಾಂಡಿಂಗ್ ಆಗಲಿದ್ದು ನೇರ ವೇದಿಕೆಗೆ ಬರಲು ವ್ಯವಸ್ಥೆ ಕಲ್ಪಿಸಲಾಗಿದೆ.

ಜನರ ಬರುವಿಕೆಗಾಗಿ ಕಾರ್ಯಕರ್ತರಿಂದ ಬಸ್ ವ್ಯವಸ್ಥೆ.

ಜಿಲ್ಲೆಯ ಮಲೆನಾಡು ಭಾಗದಿಂದ 175 KSRTC ಬಸ್ ಗಳು ,ಕರಾವಳಿ ಭಾಗದಿಂದ 80 ಕ್ಕೂ ಹೆಚ್ಚು ಬಸ್ ಹಾಗೂ ಟ್ಯಾಂಪೋಗಳ ವ್ಯವಸ್ಥೆ ಮಾಡಲಾಗಿದೆ. ಇನ್ನು ಬಂದ ವಾಹನಗಳಿಗಾಗಿ ಪಾರ್ಕಿಂಕ್ ವ್ಯವಸ್ಥೆ ಕಲ್ಪಿಸಲಾಗಿದ್ದು 10 ಸಾವಿರ ವಾಹನಗಳು ಏಕಕಾಲದಲ್ಲಿ ನಿಲ್ಲಲು ಪಾರ್ಕಿಂಕ್ ವ್ಯವಸ್ಥೆ ಕಲ್ಪಿಸಲಾಗಿದೆ.

ವೇದಿಕೆಯಲ್ಲಿ 18 ನಾಯಕರಿಗೆ ಅವಕಾಶ.

ವೇದಿಕೆ ಮೇಲೆ ಹೆಚ್ಚಿನ ಜನರಿಗೆ ಅವಕಾಶಗಳಿಲ್ಲ. ಮೋದಿ ಆಗಮಿಸಿದ ನಂತರ ವೇದಿಕೆ ಮೇಲೆ ಪ್ರಧಾನಿ ಸೇರಿ ಒಟ್ಟು 18 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು ,ಎಮ್.ಎಲ್.ಸಿಗಳಿಗೆ ಅವಕಾಶ ಕಲ್ಪಿಸಲಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!