ಅಂಕೋಲ ,ಮಾರ್ಚ 13:- ಅಪರಿಚಿತ ವ್ಯಕ್ತಿ ಬಳಿ ಬೈಕ್ ನಲ್ಲಿ ಡ್ರಾಪ್ ಕೇಳಿ ಆವ್ಯಕ್ತಿಯೇ ಕೊಲೆಗೆ ಯತ್ನಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಅಷ್ಟಕ್ಕೂ ಎಲ್ಲಿ ಏನಾಗಿದ್ದು? ವಿವರ ಇಲ್ಲಿದೆ ನೋಡಿ.
ಅಂಕೋಕ ತಾಲೂಕಿನ ಮಂಜಗುಣಿಯ ತಾರಿಯ ಬಳಿ ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು
ಬೆಳಂಬಾರದ ಮುಡ್ರಾಣಿಯ ಗಂಗಾಧರ ಸುಕ್ರು ಗೌಡ ಚಾಕು ಇರಿತಕ್ಕೆ ಒಳಗಾದ ವ್ಯಕ್ತಿಯಾಗಿದ್ದಾನೆ.
ಇದನ್ನೂ ಓದಿ:- ಅಂಕೋಲ ,ಮಂಗಳೂರಿನಲ್ಲಿ NIA ತನಿಖೆ-ಹಣ ಎಲೆಕ್ಟ್ರಾನಿಕ್ ವಸ್ತುಗಳು ವಶಕ್ಕೆ
ಬೆಳಂಬಾರ ತಾಳೇಬೈಲನ ಗಂಗಾಧರ ಗೌಡ ಭಾನುವಾರ ರಾತ್ರಿ ತನ್ನ ಮನೆಗೆ ತೆರಳಲು ಕುಂಬಾರಕೇರಿಯ ಬಳಿ ನಿಂತಿದ್ದರು. ಈ ವೇಳೆ ಬೈಕ್ನಲ್ಲಿ ಬಂದ ವ್ಯಕ್ತಿಯೊಬ್ಬ, ಗಂಗಾಧರ ಗೌಡನನ್ನು ಬೆಳಂಬಾರಕ್ಕೆ ಬಿಡುತ್ತೇನೆ ಎಂದು ತನ್ನ ಬೈಕನಲ್ಲಿ ಕುಳಿಸಿಕೊಂಡು ಸಾಗಿದ್ದಾನೆ.
ಬೈಕ್ನಲ್ಲಿ ಸಾಗುತ್ತಿರುವಾಗ ಬೈಕ್ ಸವಾರನು ತನಗೆ ಮಂಜಗುಣಿಯಲ್ಲಿ ಬಳಿ ಸ್ವಲ್ಪ ಕೆಲಸ ಇದೆ ಎಂದು ಹೇಳಿ ಮಂಜುಗುಣಿಯ ತಾರಿಯ ಬಳಿಯ ನಿರ್ಜನ ಪ್ರದೇಶಕ್ಕೆ ಗಂಗಾಧರ ಗೌಡನನ್ನು ಕರೆದುಕೊಂಡು ಹೋಗಿ ಹಿಂಭಾಗದಿಂದ ಕುತ್ತಿಗೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಲು ಯತ್ನಿಸಿದ್ದಾನೆ ಈ ವೇಳೆ ಆತನಿಂದ ತಪ್ಪಿಸಿಕೊಂಡ ಗಂಗಾಧರ ಗೌಡ, ರಸ್ತೆಯ ಬದಿಯ ಚರಂಡಿಯೊಳಗೆ ಅವಿತುಕುಳಿತು ರಾತ್ರಿ ಕಳೆದು ಬೆಳಿಗ್ಗೆ ಅಂಕೋಲಾ ಸರಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.
ಘಟನೆ ಸಂಬಂಧ ಅಂಕೋಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈತ ಸೈಕೋ ಕಿಲ್ಲರ್ ಇರಬಹುದೇ ಎಂಬ ಅನುಮಾನ ಮಾಡಿದ್ದು ಇದೀಗ ಪೊಲೀಸರು ಈತನ ಹುಡುಕಾಟದಲ್ಲಿದ್ದಾರೆ.
ಇದನ್ನೂಓದಿ:-ಫಟಾಫಟ್ ಸುದ್ದಿ @Uttra Kannada






