ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಅರಬ್ಬಿ ಸಮುದ್ರದಲ್ಲಿ ಅಪರೂಪಕ್ಕೆ ವಿಶೇಷ ಮೀನುಗಳು ಸಿಗುವ ಮೂಲಕ ಅಚ್ಚರಿಯನ್ನು ಮೂಡಿಸುತ್ತವೆ. ಈ ಬಾರಿ ಕಾರವಾರದ ಅರಬ್ಬಿ ಸಮುದ್ರದಲ್ಲಿ ದೇಶದಲ್ಲೇ ಮೊದಲ ಬಾರಿ ಎಂದು ಹೇಳಲಾಗುತ್ತಿರುವ ಅತೀ ಉದ್ದದ ಹಾಗೂ ಹೆಚ್ಚು ತೂಕದ ಬಂಗಡೆ ಮೀನು ಮೀನುಗಾರರ ಬಲೆಗೆ ದೊರೆತಿದೆ.
ಕಾರವಾರದ ಬೈತಖೋಲ್ ಬಂದರಿನಲ್ಲಿ ನವೀನ್ ಹರಿಕಾಂತ್ರ ಎಂಬುವವರಿಗೆ ಆಳ ಸಮುದ್ರ ಬಿಡ್ಡಬಲೆ ದೋಣಿಗೆ ಈ ಮೀನು ದೊರೆತಿದ್ದು ಈ ಮೀನನ್ನು ವಿನಾಯಕ್ ಹರಿಕಾಂತ್ರರವರು ಕರೀದಿಸಿ ಕಡಲ ವಿಜ್ಞಾನ ವಿಭಾಗದ ಕೇಂದ್ರಕ್ಕೆ ನೀಡಿದ್ದಾರೆ.
ಈ ಮೀನು 19 ಇಂಚು ಉದ್ದ ಮತ್ತು 4.5 ಇಂಚು ಅಗಲ ಇದ್ದು ಒಂದು ಕೆಜಿ ತೂಕವಿದೆ.
ಇದನ್ನೂ ಓದಿ:-ನಗರಸಭೆ ನಿರ್ಲಕ್ಷ/ಆಟವಾಡುತಿದ್ದ ಮಗು ಬಾವಿಗೆ ಬಿದ್ದು ಸಾವು.

ಬಂಗುಡೆ ಮೀನು ಎನ್ನುವುದು ಮೀನುಗಳ 30 ಜಾತಿಗಳನ್ನು ಒಳಗೊಂಡಿರುವಂತಹ ಸಾಮಾನ್ಯ ಪದವಾಗಿದೆ. ಇದರಲ್ಲಿ ಹೆಚ್ಚಿನವುಗಳು ಸ್ಕಾಂಬ್ರಿಡೇಗೆ ಸೇರಿರುವವು. ವಿಶ್ವದ ಹೆಚ್ಚಿನ ಭಾಗಗಳಲ್ಲಿ ಮಾರ್ಕೆಲ್ ಮೀನನ್ನು ಬಂಗುಡೆ ಎಂದು ಕರೆಯಲಾಗುತ್ತದೆ.
ಬಂಗುಡೆ ಮೀನು ಹೆಚ್ಚಾಗಿ ಕರಾವಳಿ ಭಾಗದಲ್ಲಿ ಕಂಡುಬರುವುದು. ಇದು ಅಲ್ಲಿಯೇ ಮೊಟ್ಟೆಯನ್ನಿಡುವುದು ಮತ್ತು ಬೆಳೆಯುವುದು. ಇವುಗಳು ಹೆಚ್ಚಾಗಿ ಉಷ್ಣವಲಯ ಹಾಗೂ ಸಮಶೀತೋಷ್ಣವಲಯಗಳಲ್ಲಿ ಇರುವುದು. ಬಂಗುಡೆ ಮೀನುಗಳು ದೊಡ್ಡ ಪ್ರಮಾಣದಲ್ಲಿ ಸಿಗುವ ಕಾರಣದಿಂದಾಗಿ ಇದು ಮೀನುಗಾರರಿಗೆ ದೊಡ್ಡ ಮಟ್ಟದಲ್ಲಿ ಹಣವನ್ನು ಸಂಪಾದಿಸಿ ಕೊಡುವುದು. ಈ ಕಾರಣದಿಂದಾಗಿ ಬಂಗುಡೆ ಮೀನು ತುಂಬಾ ಜನಪ್ರಿಯವಾಗಿದೆ. ಇದು ಉತ್ತರ ಅಮೆರಿಕಾದ ಆಹಾರದ ಪ್ರಮುಖ ಭಾಗವಾಗಿದೆ. 20 ಸೆ.ಮೀ. ನಿಂದ 200 ಸೆ.ಮೀ. ತನಕ ಇರುವಂತಹ ಈ ಮೀನುಗಳು ದೈಹಿಕವಾಗಿ ಬೇರೆ ಬೇರೆ ವಿನ್ಯಾಸ ಹೊಂದಿರುವುದು. ಆದರ ಇದು ಒಂದೇ ರೀತಿಯ ರುಚಿ ಹಾಗೂ ಉತ್ತಮ ಪೋಷಕಾಂಶಗಳನ್ನು ಹೊಂದಿದವು ಆಗಿವೆ.
ಈ ಮೀನು ಹೆಚ್ಚು ಎಂದರೆ 300 ಗ್ರಾಮ್ ವರೆಗೆ ತೂಕವಿರುತ್ತದೆ.ಗಂಡು ಬಂಗುಡೆ 36 cm , ಹೆಣ್ಣು ಬಂಗುಡೆ 42 cm ಅತೀ ದೊಡ್ಡದು ಭಾರತದಲ್ಲಿ ವರದಿಯಾಗಿತ್ತು.ಆದ್ರೆ ಕಾರವಾರದಲ್ಲಿ ಸಿಕ್ಕ ಈ ಬಂಗುಡೆ 48 cm ಇದೆ ಹಾಗಾಗಿ ಇದು ಅತೀ ದೊಡ್ಡ ಮೀನು ಎಂದು ಕಾರವಾರದ ಕಡಲ ಜೀವಶಾಸ್ತ್ರ ವಿಭಾಗದ ಶಿವಕುಮಾರ್ ಹರಿಗಿಯವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.






