DK ಗೆ ಪಟ್ಟ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ನಲ್ಲಿ ಬದಲಾದ ರಾಜಕೀಯ| ಏನದು?

Dk’:ಡಿ.ಕೆ ಶಿವಕುಮಾರ್ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಕಾಂಗ್ರೆಸ್‌ನಲ್ಲಿ ಹಲವು ರಾಜಕೀಯ ಬದಲಾವಣೆಗಳು ನಡೆದಿವೆ. ಹೊಸ ಸಚಿವರು, KPCC ಅಧ್ಯಕ್ಷ ಸ್ಥಾನ ಹಾಗೂ ಪ್ರಮುಖ ಘೋಷಣೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
Karnataka new CM DK Shivakumar image Karnataka new CM DK Shivakumar image
Karnataka new CM political news

DK ಗೆ ಪಟ್ಟ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ನಲ್ಲಿ ಬದಲಾದ ರಾಜಕೀಯ| ಏನದು?

 

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ (DK Shivakumar) ಅವರಿಂದು ಪ್ರಮಾಣ ವಚನ ಸ್ವೀಕರಿಸಿದರು. ಇದರೊಂದಿಗೆ 13 ಶಾಸಕರು (ಓರ್ವ ಎಂ.ಎಲ್‌ಸಿ ಸೇರಿ) ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು.

ಇದೇ ಸಮಯದಲ್ಲಿ ರಾಜ್ಯ ಕಾಂಗ್ರೆಸ್ ರಾಜಕಾರಣದಲ್ಲೂ ಹಲವು ಬದಲಾವಣೆ ಆಗುದ್ದು ಏನದು? ಇಂದು ಯಾರೆಲ್ಲಾ ಪ್ರಮಾಣವಚನ ಸ್ವೀಕರಿಸಿದರು? ಇಲ್ಲಿದೆ ಅದರ ಮಾಹಿತಿ.

Advertisement

ಡಿ.ಕೆ ಶಿವಕುಮಾರ್ ರಾಜ್ಯದ 34ನೇ ಮುಖ್ಯಮಂತ್ರಿ.

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಡಿ.ಕೆ ಶಿವಕುಮಾರ್ ಹಾಗೂ ನೂತನ ಸಚಿವ ಸಂಪುಟ ಸದಸ್ಯರು.
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಡಿ.ಕೆ ಶಿವಕುಮಾರ್

ಲೋಕಭವನದ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ 13 ಶಾಸಕರು ಸಚಿವರಾಗಿ ಪ್ರಮಾಣ ಸ್ವೀಕಾರ ಮಾಡಿದರು. ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಪ್ರಮಾಣವಚನ ಬೋಧಿಸಿದರು.

Karnataka ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಘೋಷಣೆ|ಡಿಕೆಗೆ ಪಟ್ಟ-ಯುವ ಸಚಿವ ಸಂಪುಟಕ್ಕೆ ಸಿದ್ದತೆ

ಜಿ. ಪರಮೇಶ್ವರ್‌ ರಾಜ್ಯದ ಡಿಸಿಎಂ ಆಗಿ ಡಾ. ಬಿ.ಆರ್‌ ಅಂಬೇಡ್ಕರ್‌ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರು. ಸಂಪುಟ ದರ್ಜೆ ಸಚಿವರಾಗಿ ಕೆ.ಹೆಚ್‌ ಮುನಿಯಪ್ಪ, ಕೆ.ಜೆ ಜಾರ್ಜ್‌, ಬೈರತಿ ಸುರೇಶ್‌, ಶರಣಪ್ರಕಾಶ್‌ ಪಾಟೀಲ್‌ ದೇವರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದ್ರೆ, ಎಂ.ಬಿ ಪಾಟೀಲ್‌ ಅವರು ವಿಶ್ವಗುರು ಬಸವಣ್ಣ, ಬಸವಾದಿ ಶರಣರು, ಲಿಂಗೈಕ್ಯ ಸಿದ್ದೇಶ್ವರ ಮಹಾಸ್ವಾಮಿಗಳ ಹೆಸರಿನಲ್ಲಿ ‌ಪ್ರಮಾಣ ವಚನ ಸ್ವೀಕಾರ ಮಾಡಿದ್ರು.

ಇನ್ನುಳಿದಂತೆ ರಾಮಲಿಂಗಾ ರೆಡ್ಡಿ, ಸತೀಶ್‌ ಜಾರಕಿಹೊಳಿ, ಕೃಷ್ಣಭೈರೇಗೌಡ, ಪ್ರಿಯಾಂಕ್‌ ಖರ್ಗೆ, ಯು.ಟಿ ಖಾದರ್‌, ಈಶ್ವರ್‌ ಖಂಡ್ರೆ, ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಶ್ರದ್ಧಾ ಪೂರ್ವಕವಾಗಿ ಪ್ರತಿಜ್ಞೆ ಸ್ವೀಕರಿಸಿದರು. ಶೀಘ್ರದಲ್ಲೇ ಎಲ್ಲಾ ಸಂಪುಟ ಸಚಿವರಿಗೆ ಖಾತೆ ನಿಗದಿ ಮಾಡಲಾಗುತ್ತದೆ.

ಪ್ರಮಾಣ ವಚನ ಸ್ವೀಕರಿಸಿದ ನೂತನ ಸಚಿವರು

ಪರಮೇಶ್ವರ್‌ (ಡಿಸಿಎಂ)

ಕೆ.ಹೆಚ್‌ ಮುನಿಯಪ್ಪ

ಕೆ.ಜೆ ಜಾರ್ಜ್‌

ಎಂ.ಬಿ ಪಾಟೀಲ್‌

ರಾಮಲಿಂಗಾ ರೆಡ್ಡಿ

ಸತೀಶ್‌ ಜಾರಕಿಹೊಳಿ

ಕೃಷ್ಣಭೈರೇಗೌಡ

ಪ್ರಿಯಾಂಕ್‌ ಖರ್ಗೆ

ಯು.ಟಿ ಖಾದರ್‌

ಈಶ್ವರ್‌ ಖಂಡ್ರೆ

ಯತೀಂದ್ರ ಸಿದ್ದರಾಮಯ್ಯ

ಬೈರತಿ ಸುರೇಶ್‌

ಶರಣ ಪ್ರಕಾಶ್‌ ಪಾಟೀಲ್‌.

ಮೊದಲ ಹಂತದಿಂದ ಹೊರಗುಳಿದ ಪ್ರಮುಖ ನಾಯಕರು:

ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಈ ಕೆಳಗಿನ ಪ್ರಮುಖ ನಾಯಕರಿಗೆ ಮೊದಲ ಪಟ್ಟಿಯಲ್ಲಿ ಸಚಿವ ಸ್ಥಾನ ಲಭಿಸಿಲ್ಲ

ದಿನೇಶ್ ಗುಂಡೂರಾವ್

ಎಚ್‌.ಸಿ. ಮಹದೇವಪ್ಪ

ಎಚ್.ಕೆ. ಪಾಟೀಲ್

ಶಿವಾನಂದ ಪಾಟೀಲ್

ಬಿ.ಜೆಡ್. ಜಮೀರ್ ಅಹಮದ್ ಖಾನ್

ಶರಣಬಸಪ್ಪ ದರ್ಶನಾಪುರ

ಚಲುವರಾಯಸ್ವಾಮಿ

ಎಸ್.ಎಸ್. ಮಲ್ಲಿಕಾರ್ಜುನ್

ರಹೀಮ್ ಖಾನ್

ಸಂತೋಷ್ ಲಾಡ್

ತಿಮ್ಮಾಪುರ ರಾಮಪ್ಪ ಬಾಲಪ್ಪ

ಕೆ. ವೆಂಕಟೇಶ್

ಶಿವರಾಜ್ ತಂಗಡಗಿ

ಲಕ್ಷ್ಮಿ ಹೆಬ್ಬಾಳ್ಳ‌ರ್

ಮಂಕಾಳ ವೈದ್ಯ

ಮಧು ಬಂಗಾರಪ್ಪ

ಡಾ. ಎಂ.ಸಿ. ಸುಧಾಕರ್

ಎನ್.ಎಸ್. ಭೋಸರಾಜು

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್.

Dk shivkumar press meet
Dk shivkumar press meet

ರಾಜ್ಯದ ಎಲ್ಲಾ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ನೂತನ ಸಿಎಂ ಡಿಕೆ ಶಿವಕುಮಾರ್‌ (DK Shivakumar) ಸಿಹಿ ಸುದ್ದಿ ಕೊಟ್ಟಿದ್ದಾರೆ.

ಅಧಿಕಾರ ಸ್ವೀಕರಿಸಿದ ಬಳಿಕ ವಿಧಾನಸೌಧದಲ್ಲಿಂದು ಮೊದಲ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್‌ ಪಾಸ್‌ ಘೋಷಣೆ ಮಾಡಿದ್ದಾರೆ.

Costal Karnataka 61 ದಿನ ಮೀನುಗಾರಿಕೆ ಬಂದ್ -ಅವಧಿ ವಿಸ್ತರಣೆಗೆ ಆಗ್ರಹ

ಇಷ್ಟು ದಿನ ವಿದ್ಯಾರ್ಥಿನಿಯರಿಗೆ ಮಾತ್ರ ನೀಡುತ್ತಿದ್ದ ಬಸ್‌ ಪಾಸ್‌ಗಳನ್ನ ಶಾಲಾ ಬಾಲಕರು, ಕಾಲೇಜು ಯುವಕರಿಗೂ ವಿಸ್ತರಣೆ ಮಾಡಲು ನಿರ್ಧರಿಸಿದ್ದೇವೆ. ಆದ್ರೆ ಅವರು ವಿದ್ಯಾರ್ಥಿಗಳು ಅಂತ ತಿಳಿಯೋಕೆ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.

ರಾಜ್ಯಾದ್ಯಂತ 10,000 ಯುವ ಸಂಘಗಳನ್ನು ಆರಂಭಿಸಲಾಗುವುದು. ಪ್ರತಿ ಸಂಘಕ್ಕೂ ಸರ್ಕಾರದಿಂದ 10 ಲಕ್ಷ ರೂ. ಹಣ ನೀಡಲಾಗುವುದು ಎಂದು ನೂತನ ಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರದ ಬಳಿಕ ನಡೆಸಿದ ಮೊದಲ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆಶಿ, ಹಲವು ಕಾರ್ಯಕ್ರಮಗಳನ್ನು ಘೋಷಿಸಿದ್ದಾರೆ. ನನ್ನ‌ ಕನಸಿನ ಚಿಂತನೆ. 10 ಸಾವಿರ ಭಾರತ್ ಜೋಡೊ ಯುವಕರ ಸಂಘ ರಚನೆಗೆ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಹೇಳಿದರು.

ಪ್ರತಿ ಪಂಚಾಯತಿಗೆ ಒಂದು ಸಂಘ ಇರಲಿದೆ. ಸ್ಪೋರ್ಟ್ಸ್‌, ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಾಯಕತ್ವ ಬೆಳೆಸಲು ಇದನ್ನ ಸ್ಥಾಪನೆ ಮಾಡಲಾಗುವುದು. ಆ ಸಂಘಕ್ಕೆ 10 ಲಕ್ಷ ಹಣವನ್ನು ಸರ್ಕಾರ ಕೊಡಲಿದೆ ಎಂದು ತಿಳಿಸಿದರು.

ಸಂಘ ಹೇಗೆ ನಡೆಯುತ್ತದೆ? ಜಾಗ ಎಲ್ಲಿ ಅಂತ ನಿರ್ಧಾರ ‌ಮಾಡಿದ್ದೇವೆ. ಇದಕ್ಕೆ ಸರ್ಕಾರವೇ ಹಣ ಕೊಡಲಿದೆ. ಯುವಕರು ಬೇರೆ ಕೆಲಸಕ್ಕೆ ಹೋಗದೆ ನಾಯಕತ್ವ ಬೆಳೆಸಲು, ಸಾಂಸ್ಕೃತಿಕತೆ ಬೆಳೆಯಲು, ಪ್ರತಿಭೆ ಗುರುತಿಸಲು ಸಂಘ ರಚನೆ ಮಾಡಲಾಗುವುದು. ಒಂದು ಪಂಚಾಯತಿಗೆ 10 ಲಕ್ಷ ಹಣವನ್ನು ಸರ್ಕಾರವೇ ಕೊಡಲಿದೆ ಎಂದರು.

Bk ಹರಿಪ್ರಸಾದ್ ಗೆ KPCC ಅಧ್ಯಕ್ಷ ಪಟ್ಟ .

 ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (KPCC) ಅಧ್ಯಕ್ಷರಾಗಿ ಬಿ.ಕೆ ಹರಿಪ್ರಸಾದ್‌ ಅವರನ್ನ ನೇಮಕ ಮಾಡಿ ಎಐಸಿಸಿ ಅಧಿಕೃತ ಆದೇಶ ಹೊರಡಿಸಿದೆ.

ಮೇಲ್ಮನೆ ಚುನಾವಣೆ; ಬಿ.ಕೆ.ಹರಿಪ್ರಸಾದ್‌ ಸೇರಿ ನಾಲ್ವರಿಗೆ ಕಾಂಗ್ರೆಸ್‌ ಟಿಕೆಟ್‌ ಘೋಷಣೆ.

Congress press note

ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ (Karnataka MLC Polls) ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಘೋಷಿಸಿದೆ. ಬಿ.ಕೆ.ಹರಿಪ್ರಸಾದ್‌ ಸೇರಿ ನಾಲ್ವರಿಗೆ ಟಿಕೆಟ್‌ ನೀಡಿದೆ.

ಬಿ.ಕೆ.ಹರಿಪ್ರಸಾದ್ (B.K.Hariprasad), ಪಿ.ವಿ.ಮೋಹನ, ತಿಪ್ಪಣ್ಣ ಕಮಕನೂರು, ಮಳವಳ್ಳಿ ಶಿವಣ್ಣಗೆ ‘ಕೈ’ ಟಿಕೆಟ್‌ ಘೋಷಿಸಿದೆ.

ಹರಿಪ್ರಸಾದ್, ಕಮಕನೂರು ಮರು ಆಯ್ಕೆ ಆಗಲಿದ್ದಾರೆ. ಮಳವಳ್ಳಿ ಶಿವಣ್ಣ, ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತರು. ಹೈಕಮಾಂಡ್‌ನಿಂದ ಪಿ.ವಿ.ಮೋಹನ್ ಹೆಸರು ಶಿಫಾರಸಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement