Costal Karnataka 61 ದಿನ ಮೀನುಗಾರಿಕೆ ಬಂದ್ -ಅವಧಿ ವಿಸ್ತರಣೆಗೆ ಆಗ್ರಹ.
ಜೂನ್ 1ರಿಂದ ಮೀನುಗಾರಿಕೆ ನಿಷೇಧ ಜಾರಿ.
ಕಾರವಾರ :- ಕರ್ನಾಟಕ ರಾಜ್ಯ ಕರಾವಳಿ( costal Karnataka) ಭಾಗದಲ್ಲಿ ಇಂದಿನಿಂದ ಜುಲೈ 31 ರ ವರೆಗೆ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಗೆ( fishing) ನಿರ್ಬಂಧ ವಿಧಿಸಿ ಮೀನುಗಾರಿಕಾ ಇಲಾಖೆ ಆದೇಶ ಮಾಡಿದೆ.
ಇದನ್ನೂ ಓದಿ:-Rain news|ಕರಾವಳಿಯಲ್ಲಿ ಮೂರು ದಿನ ಯಲ್ಲೋ ಅಲರ್ಟ|ಇಂದಿನಿಂದಲೇ ಶುರುವಾಯ್ತು ಮಳೆ ಅಬ್ಬರ!
ಜೂನ್ ನಿಂದ ಜುಲೈ ಅಂತ್ಯದ ವರೆಗೂ ಅರಬ್ಬಿ ಸಮುದ್ರದಲ್ಲಿ ಮೀನುಗಳು ಸಂತಾನವೃದ್ಧಿಮಾಡುವ ಹಿನ್ನಲೆಯಲ್ಲಿ ಸಂಪ್ರದಾಯದಂತೆ ಮೀನುಗಾರಿಕೆ ನಿಷೇಧ ಹೇರಲಾಗಿದೆ.
ಬಂದರುಗಳಲ್ಲಿ ಲಂಗರು ಹಾಕಿದ ಸಾವಿರಾರು ಬೋಟ್‌ಗಳು

ಉತ್ತರ ಕನ್ನಡ(uttara kannada) ಜಿಲ್ಲೆಯಲ್ಲಿ 10 ಸಾವಿರಕ್ಕೂ ಹೆಚ್ಚು ಮೀನುಗಾರಿಕಾ ಯಾಂತ್ರಿಕೃತ ಬೋಟುಗಳಿದ್ದು ಇದೀಗ ಇಂದಿನಿಂದ 61 ದಿನಗಳ ಕಾಲ ಮೀನುಗಾರಿಕೆ ಬಂದ್ ಇರಲಿದೆ. ಈ ಹಿನ್ನಲೆಯಲ್ಲಿ ಇಂದು ಮೀನುಗಾರರು ತಮ್ಮ ಬೋಟುಗಳನ್ನ ಬಂದರಿನಲ್ಲಿ ಲಂಗುರುಹಾಕಿದ್ದು ,ಬಲೆ ಸೇರಿದಂತೆ ಅಗತ್ಯ ವಸ್ತುಗಳ ದುರಸ್ತಿ ಕಾರ್ಯ ನಡೆಸಿದರು.
ಇದನ್ನೂ ಓದಿ:-Karwar|ಕಾಳಿ ನದಿಯ ಕಾಳಿ ದೇವಿ ಜಾತ್ರೆ| ನಿಂಬೆಹಣ್ಣಿನ ಹರಕೆ ಏನಿದು ವಿಶೇಷ
ಕೇರಳ ಮಾದರಿಯಲ್ಲಿ ವಿನಾಯಿತಿ ನೀಡಲು ಮನವಿ

ಕೇರಳದಲ್ಲಿ ಮೀನುಗಾರಿಕೆ ನಿರ್ಬಂಧಕ್ಕೆ ಅಲ್ಲಿನ ಸರ್ಕಾರ ಒಂಬತ್ತು ದಿನಗಳ ಕಾಲ ವಿನಾಯ್ತಿ ನೀಡಿದೆ. ಅದೇ ಮಾದರಿಯಲ್ಲಿ ನಮ್ಮ ರಾಜ್ಯದ ಕರಾವಳಿಯಲ್ಲಿ ಸಹ ಮೀನುಗಾರಿಕೆ ನಿರ್ಬಂಧಕ್ಕೆ ವಿನಾಯ್ತಿನೀಡಬೇಕು ಎಂಬುದು ಮೀನುಗಾರರ ಆಗ್ರಹ.
ಇದನ್ನೂ ಓದಿ:-Karwar|ಕೊನೆಗೂ ಕಾರವಾರಿಗರ ಸಮಸ್ಯೆಗೆ ಬೀದಿಗಿಳಿದ ಬಿಜೆಪಿ !
ಹವಾಮಾನ ವೈಪರೀತ್ಯದಿಂದ ಸಂಕಷ್ಟ.
ಕಳೆದ ನಾಲ್ಕೈದು ತಿಂಗಳಿಂದ ಹವಾಮಾನ ವೈಪರಿತ್ಯ ಸಶರಿದಂತೆ ಹಲವು ಕಾರಣದಿಂದ ಉತ್ತರ ಕನ್ನಡ (uttara Kannada) ಜಿಲ್ಲೆಯ ಕರಾವಳಿ ಮೀನುಗಾರರು ಮೀನುಗಾರಿಕೆಗೆ ತೆರಳಲು ಅನೇಕ ಅಡಚಣೆಗಳಾಗಿದ್ದವು. ಹೀಗಾಗಿ ಉತ್ತಮ ಮತ್ಸ್ಯ ಭೇಟೆಗೆ ತೊಡಕಾಗಿತ್ತು. ಹೀಗಾಗಿ ಅವಧಿ ವಿಸ್ತರಣೆ ಮಾಡಿದಲ್ಲಿ ಮೀನುಗಾರರಿಗೆ ಆರ್ಥಿಕ ಚೈತನ್ಯ ದೊರೆಯುವ ವಿಶ್ವಾಸ ಅವರದ್ದಾಗಿದೆ.ಹೀಗಾಗಿ ರಾಜ್ಯ ಸರ್ಕಾರಕ್ಕೆ ಅವಧಿ ವಿಸ್ತರಣೆ ಪ್ರಸ್ತಾಪ ಮಾಡಲಾಗಿದೆ.
