RSS ಅನ್ನು ಭಸ್ಮಾಸುರನಿಗೆ ಹೋಲಿಸಿದ ಪ್ರಿಯಾಂಕ್ ಖರ್ಗೆ; ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧವೂ ವಾಗ್ದಾಳಿ
ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ ಸಚಿವ ಪ್ರಿಯಾಂಕ್ ಖರ್ಗೆ; RSS ಸಮಾಜದಲ್ಲಿ ದ್ವೇಷ ಹರಡುತ್ತಿದೆ ಎಂದು ಆರೋಪ
ಕಲಬುರಗಿ: Priyank Kharge ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ವಿರುದ್ಧ ಮತ್ತೊಮ್ಮೆ ತೀವ್ರ ವಾಗ್ದಾಳಿ ನಡೆಸಿದ್ದು, RSS ಅನ್ನು ಪುರಾಣದ ಭಸ್ಮಾಸುರನಿಗೆ ಹೋಲಿಕೆ ಮಾಡಿದ್ದಾರೆ. ತಮ್ಮ ಎಕ್ಸ್ (X) ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, RSS ಸಮಾಜದಲ್ಲಿ ದ್ವೇಷದ ವಾತಾವರಣ ಸೃಷ್ಟಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ:-
Costal Karnataka 61 ದಿನ ಮೀನುಗಾರಿಕೆ ಬಂದ್ -ಅವಧಿ ವಿಸ್ತರಣೆಗೆ ಆಗ್ರಹ
ಪ್ರಿಯಾಂಕ್ ಖರ್ಗೆ ತಮ್ಮ ಪೋಸ್ಟ್‌ನಲ್ಲಿ, “ಪುರಾಣದ ಭಸ್ಮಾಸುರ ತಲೆ ಮೇಲೆ ಕೈ ಇಟ್ಟವರನ್ನು ಸುಡುತ್ತಿದ್ದನು. ಆದರೆ ಇಂದಿನ ಆಧುನಿಕ ಭಸ್ಮಾಸುರವಾದ RSS ಮುಗ್ಧ ಯುವ ಸಮುದಾಯದ ಮೆದುಳಿನ ಮೇಲೆ ಕೈ ಇಟ್ಟು ಇಡೀ ದೇಶವನ್ನೇ ಸುಡುತ್ತಿದೆ” ಎಂದು ಟೀಕಿಸಿದ್ದಾರೆ.
ಇದಲ್ಲದೆ, RSS ಸಮಾಜಕ್ಕೆ ವಿಷ ಉಣಿಸುತ್ತಿದ್ದು, ದ್ವೇಷದ ರಾಜಕಾರಣವೇ ಅದರ ಅಸ್ತಿತ್ವದ ಆಧಾರವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ:-Costal Karnataka 61 ದಿನ ಮೀನುಗಾರಿಕೆ ಬಂದ್ -ಅವಧಿ ವಿಸ್ತರಣೆಗೆ ಆಗ್ರಹ
ಇದೇ ವೇಳೆ Kalladka Prabhakar Bhat ಅವರನ್ನೂ ಉಲ್ಲೇಖಿಸಿರುವ ಪ್ರಿಯಾಂಕ್ ಖರ್ಗೆ, “ಇನ್ನು ಮುಂದೆ ದ್ವೇಷ ಭಾಷಣ ಮಾಡುವುದಿಲ್ಲ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ನ್ಯಾಯಾಲಯಕ್ಕೆ ಹೇಳಿದ್ದಾರೆ. ಇದರ ಮೂಲಕ ಇಷ್ಟು ದಿನ ದ್ವೇಷವನ್ನೇ ಉಸಿರಾಡುತ್ತಿದ್ದುದನ್ನು ಅವರು ಒಪ್ಪಿಕೊಂಡಂತಾಗಿದೆ” ಎಂದು ವಾಗ್ದಾಳಿ ನಡೆಸಿದ್ದಾರೆ.
ಸಚಿವರ ಈ ಹೇಳಿಕೆ ರಾಜ್ಯ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಬಿಜೆಪಿ ಹಾಗೂ RSS ವಲಯಗಳಿಂದ ಪ್ರತಿಕ್ರಿಯೆ ವ್ಯಕ್ತವಾಗುವ ಸಾಧ್ಯತೆ ಇದೆ.
