Gruha Jyothi Scheme| ಈ ವಿವರ ಸಲ್ಲಿಸದಿದ್ರೆ ಸಿಗೋದಿಲ್ಲ ಉಚಿತ ವಿದ್ಯುತ್ !?

Gruha Jyothi Scheme | ಈ ವಿವರ ಸಲ್ಲಿಸದಿದ್ರೆ ಸಿಗೋದಿಲ್ಲ ಉಚಿತ ವಿದ್ಯುತ್!? ಹೊಸ ಪರಿಶೀಲನೆ ಆರಂಭ- ಸುದ್ದಿ ಓದಿ
Gruha Jyothi Scheme ಫಲಾನುಭವಿಗಳ ದಾಖಲೆ ಪರಿಶೀಲನೆ ಹಾಗೂ ಹೊಸ ಅರ್ಜಿ ಸಲ್ಲಿಕೆ ಕುರಿತು BESCOM ಪ್ರಕಟಣೆ Gruha Jyothi Scheme ಫಲಾನುಭವಿಗಳ ದಾಖಲೆ ಪರಿಶೀಲನೆ ಹಾಗೂ ಹೊಸ ಅರ್ಜಿ ಸಲ್ಲಿಕೆ ಕುರಿತು BESCOM ಪ್ರಕಟಣೆ
Ai image

Gruha Jyothi Scheme| ಈ ವಿವರ ಸಲ್ಲಿಸದಿದ್ರೆ ಸಿಗೋದಿಲ್ಲ ಉಚಿತ ವಿದ್ಯುತ್ !?

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಹೆಚ್ಚು ಪ್ರಖ್ಯಾತಿ ಪಡೆದಿದ್ದ ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಲ್ಲಿ (Gruhalakshmi, Gruha Jyothi Scheme) ಮೇಜರ್ ಸರ್ಜರಿಗೆ ರಾಜ್ಯ ಸರ್ಕಾರ ಮುಂದಾಗಿದೆ.‌ ಎರಡು ಯೋಜನೆಗಳಲ್ಲಿ ನಕಲಿ ಫಲಾನುಭವಿಗಳನ್ನ ಪತ್ತೆ ಹಚ್ಚುವುದಕ್ಕಾಗಿ ಮತ್ತೆ ಹೊಸದಾಗಿ ಅರ್ಜಿ ಸಲ್ಲಿಕೆ ಮಾಡೋದಕ್ಕೆ ಕಡ್ಡಾಯ ಮಾಡಿದೆ. ಗೃಹಜ್ಯೋತಿ ಮತ್ತು ಗೃಹಲಕ್ಷ್ಮಿ ಫಲಾನುಭವಿಗಳು ಸೌಲಭ್ಯ ಪಡೆಯಬೇಕಾದ್ರೆ ಅರ್ಜಿ ಸಲ್ಲಿಕೆ ಮಾಡುವುದು ಕಡ್ಡಾಯವಾಗಿದ್ದು ಈಗಾಗಲೇ ಪರಿಶೀಲನೆ ಪ್ರಾರಂಭವಾಗಿದೆ.

 

ಏನೆಲ್ಲ ಪ್ರಶ್ನೆಗಳು ಇರಲಿವೆ? ಯಾವೆಲ್ಲಾ ದಾಖಲೆ ಕೊಡಬೇಕು

Advertisement

 

ಪರಿಶೀಲನೆಯ ಸಮಯದಲ್ಲಿ ನಾಗರಿಕರು ಈ ಕೆಳಗಿನ ದಾಖಲೆಗಳನ್ನು ಒದಗಿಸಬೇಕಾಗುತ್ತದೆ: ಆಧಾರ್ (ಪರಿಶೀಲನೆಗಾಗಿ ಮಾತ್ರ), ಫಲಾನುಭವಿಯ ಪಾಸ್‌ಪೋರ್ಟ್ ಗಾತ್ರದ ಫೋಟೋ, ಮತದಾರರ ಗುರುತಿನ ಚೀಟಿ, ಪ್ಯಾನ್, ಬಾಡಿಗೆ ಅಥವಾ ಬಾಡಿಗೆ ಒಪ್ಪಂದಗಳು (ಅನ್ವಯವಾಗುವಲ್ಲೆಲ್ಲಾ), ಪಡಿತರ ಚೀಟಿ ಮತ್ತು ಜಾತಿ ಪ್ರಮಾಣಪತ್ರ.

BESCOM: ಜುಲೈನಲ್ಲಿ ಮೀಟರ್ ರೀಡಿಂಗ್ ಇಲ್ಲ!.

‘ಗೃಹ ಜ್ಯೋತಿ’ಸಂಬಂಧ ಸ್ಥಳದಲ್ಲೇ ದಾಖಲೆ ಪರಿಶೀಲನೆ ಹಾಗೂ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಶುರು ಮಾಡಲಾಗಿದೆ. ಸದ್ಯ ಬೆಸ್ಕಾಂ ಮಹತ್ವದ ಪ್ರಕಟಣೆ ಹೊರಡಿಸಿದ್ದು, ಈ ಬಗ್ಗೆ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದೆ. ‘ಗೃಹ ಜ್ಯೋತಿ ಪರಿಶೀಲನಾ ಕಾರ್ಯ ನಡೆಯುತ್ತಿದ್ದು, ಈ ಜುಲೈ ತಿಂಗಳು ಮೀಟರ್ ರೀಡಿಂಗ್ ಇರುವುದಿಲ್ಲ. ಆ ಬದಲಾಗಿ, ಕಳೆದ 3 ತಿಂಗಳ ನಿಮ್ಮ ಸರಾಸರಿ ವಿದ್ಯುತ್‌ ಬಳಕೆಯ ಆಧಾರದ ಮೇಲೆ ಬಿಲ್ ಸಿದ್ಧಪಡಿಸಲಾಗುವುದು’ ಎಂದು ಪ್ರಕಟಣೆ ಹೊರಡಿಸಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement