Uttara kannada|ಮಳೆ ಬಂದ್ರೆ NWKSRTC ಬಸ್ ನಲ್ಲಿ ಜಲಪಾತ ಸೃಷ್ಟಿ!ರೈನಿಂಗ್ ಡ್ಯಾನ್ಸ್ ಮಾಡೋದೊಂದೇ ಬಾಕಿ! ವಿಡಿಯೋ ನೋಡಿ.
ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಯುವ್ಯ ಸಾರಿಗೆ ಬಸ್ ಹೊರತುಪಡಿಸಿದರೇ ಖಾಸಗಿ ಬಸ್ ಗಳು ಈಭಾಗದಲ್ಲಿ ಸಂಚಾರವಿಲ್ಲ . ಜಿಲ್ಲೆಯ ಮೂಲೆ ಮೂಲೆಗೂ ಸರ್ಕಾರಿ ಬಸ್ ಗಳದ್ದೇ ಕಾರುಬಾರು. ಹೀಗಾಗಿ ಜಿಲ್ಲೆಯಿಂದ ವಾಯುವ್ಯ ಸಾರಿಗೆಗೆಗೆ ಉತ್ತಮ ವರಮಾನವಿದೆ.
ಇದನ್ನೂ ಓದಿ:-Karwar|ಕೊನೆಗೂ ಕಾರವಾರಿಗರ ಸಮಸ್ಯೆಗೆ ಬೀದಿಗಿಳಿದ ಬಿಜೆಪಿ !
ಒಳ್ಳೇ ವರಮಾನ ಇರೋ ವಾಯುವ್ಯಸಾರಿಗೆ ಬಸ್ ನಲ್ಲಿ ಮಳೆಗಾಲ ಬಂತು ಅಂದ್ರೆ ಉಚಿತವಾಗಿ ಪ್ರಯಾಣಿಕರಿಗೆ ಬಸ್ ನಲ್ಲೇ ಜಲಪಾತ ದರ್ಶನ ಮಾಡಿಸುತ್ತಾರೆ.ಅಷ್ಟು ಸಾಲದೇ ರೆಸಾರ್ಟಗಳಲ್ಲಿ ಕೃತಕ ರೈನ್ ಫಾಲ್ ಅನ್ನು ಸೃಷ್ಟಿ ಮಾಡುವಂತೆ ಬಸ್ ನಲ್ಲೂ ಮಳೆನೀರು ಸುರುಸಿ ಪ್ರಯಾಣಿಕರನ್ನ ಒದ್ದೆ ಮಾಡಿ ಚಳಿಯ ಅನುಭವವನ್ನ ಪುಕ್ಕಾಟೆ ನೀಡುತ್ತಾರೆ ಇಲ್ಲಿ.
ಇದನ್ನೂ ಓದಿ:-Karwar| ಸ್ವಾರ್ಥಕ್ಕಾಗಿ ಶಾಲಾ ಮಕ್ಕಳ ಪ್ರಾಣ ತೆಗೆಯಲು ಸಿದ್ದವಾದ ಹಬ್ಬುವಾಡ ರಸ್ತೆ ಬಸ್ ನಿಲ್ದಾಣ
ಇತ್ತೀಚಿಗಷ್ಟೇ ಕಾರವಾರದಿಂದ ಕದ್ರಾ ಭಾಗಕ್ಕೆ ಹೋಗುವ ಬಸ್ ನಲ್ಲಿ ಜಲಪಾತವನ್ನೇ ಸೃಷ್ಟಿಮಾಡಿದ್ದ ವಾಯುವ್ಯ ಸಾರಿಗೆ ಅಧಿಕಾರಿಗಳು ಇದೀಗ ಕಾರವಾರದಿಂದ ಬಳ್ಳಾರಿಗೆ ತೆರಳುವ ಬಸ್ ನಲ್ಲಿ ಸಹ ಪ್ರಯಾಣಿಕರಿಗೆ ರೈನಿಂಗ್ ಡ್ಯಾನ್ಸ್ ಮಾಡಿಸಿದ್ದಾರೆ. ಆಗಾಗ ಜಿಲ್ಲೆಯಲ್ಲಿ ಬಹುತೇಕ ವಾಯುವ್ಯ ಸಾರಿಗೆ ಬಸ್ ಗಳು ಕೆಟ್ಟು ನಿಂತರೂ ಜಿಲ್ಲೆಯ ವಾಯುವ್ಯ ಸಾರಿಗೆ ಅಧಿಕಾರಿಗಳ ಕುಂಡೆಗೆ ನಾಟುವುದೇ ಇಲ್ಲ. ಇನ್ನು ದುಡ್ಡುಕೊಟ್ಟು ರೈನಿಂಗ್ ಡ್ಯಾನ್ಸ್ ಮಾಡುವ ಪ್ರಯಾಣಿಕರು ಇದನ್ನ ಪ್ರಶ್ನೆ ಮಾಡುವುದೂ ಇಲ್ಲ ! ಕೊನೆ ಪಕ್ಷ ಗ್ರಾಹಕರ ಕೋರ್ಟ ನಲ್ಲಿ ದಾವೆ ಹೂಡಿ ಪರಿಹಾರ ಪಡೆದು ಬಿಸಿ ಮುಟ್ಟಿಸೋರು ಇಲ್ಲ .ಹೀಗಾಗಿ ಜಿಲ್ಲೆಯಲ್ಲಿ ಡಕೋಟ ಎಕ್ಸ್ ಪ್ರಸ್ ಬಸ್ ಗತಿ ಎನ್ನುವಂತಾಗಿದೆ.
ಅಷ್ಟಕ್ಕೂ ಆಗಿದ್ದೇನು ಗೊತ್ತಾ?
ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಮುಖ ಸಾರಿಗೆ ಸಂಪರ್ಕವಾಗಿರು ವಾಯುವ್ಯ ಸಾರಿಗೆ ಬಸ್ ನಲ್ಲಿ ಮಳೆ ಬಂತು ಎಂದರೇ ಬಸ್ ನೊಳಗೆ ಜಲಪಾತವನ್ನೇ ಸೃಷ್ಟಿಸಿಬಿಡುತ್ತದೆ. ಹೌದು ಜಿಲ್ಲೆಯ ವಾಯುವ್ಯಸಾರಿಗೆ ಬಸ್ ಗಳು ಬಹುತೇಕ ಸೋರುವ ಬಸ್ ಗಳೇ ಹೆಚ್ಚಾಗಿದ್ದು ಕಾರವಾರದಿಂದ ಬಳ್ಳಾರಿಗೆ ತೆರಳುವ ವಾಯುವ್ಯ ಸಾರಿಗೆ ಬಸ್ ನಲ್ಲಿ ಮಳೆಯ ನೀರು ನಿರಂತರ ಸೋರುವ ಕಾರಣ ಟಿಕೇಟ್ ಪಡದ ಪ್ರಯಾಣಿಕರು ಕೊಡೆ ಹಿಡಿದೆ ಬಸ್ ನಲ್ಲಿ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ:-Shivamogga|25 ಲಕ್ಷ ರೂ. ಲೋನ್ ಗಾಗಿ 3 ಲಕ್ಷ ರೂ. ಕಳೆದುಕೊಂಡ ಪೊಲೀಸ್ ಅಧಿಕಾರಿ!
KA31 F 1253 ನೊಂದಣಿಯ ಬಳ್ಳಾರಿ -ಕಾರವಾರ ಬಸ್ ಕಾರವಾರದಿಂದ ಹುಬ್ಬಳ್ಳಿ ಮಾರ್ಗವಾಗಿ ಪ್ರತಿದಿನ ಸಂಚರಿಸುತ್ತದೆ.380 ಕಿಲೋಮೀಟರ್ ದೂರವಿರುವ ಬಳ್ಳಾರಿಗೆ ಎಂಟು ತಾಸು ಬಸ್ ನಲ್ಲಿ ಪ್ರಯಾಣಿಕರು ಕುಳಿತು ಸಂಚರಿಸಬೇಕು. ಆದರೇ ಮಳೆ ಬಂದರೇ ಬಸ್ ನಲ್ಲಿ ಎಲ್ಲೆಂದರಲ್ಲಿ ಸೋರುವ ಜೊತೆ ಬಸ್ ಒಳಗೇ ನೀರು ಸಂಗ್ರಹವಾಗಿ ನಿಲ್ಲುತ್ತದೆ.ಹೀಗಿರುವಾಗ ಈ ಮಳೆಗಾಲದಲ್ಲಿ ಪ್ರತಿ ದಿನ ಸೋರುವ ಬಸ್ ನಲ್ಲೇ ಹಣ ಕೊಟ್ಟು ಪ್ರಯಾಣಿಸುವ ಪರಿಸ್ಥಿತಿ ಇದ್ದು ವಾಯುವ್ಯ ಸಾರಿಗೆ ಅಧಿಕಾರಿಗಳ ನಿರ್ಲಕ್ಷಕ್ಕೆ ಪ್ರಯಾಣಿಕರು ಹಿಡಿ ಶಾಪ ಹಾಕುತಿದ್ದಾರೆ.






