ತುಮಕೂರು ನಾಡಬಾಂಬ್ ಸ್ಪೋಟ- ಮೂರು ಜೀವಂತ ಬಾಂಬ್ ಹೊನ್ನಳ್ಳಿಯಲ್ಲಿ ಪತ್ತೆ- ಎಸ್.ಪಿ ದೀಪನ್ ಹೇಳಿದ್ದೇನು
ತುಮಕೂರಿನಲ್ಲಿ ನಾಡಬಾಂಬ್ ಸ್ಪೋಟಿಸಿ ಕೊಂಡು ನಾಗೇಂದ್ರಗೌಡ ಮೃತಪಟ್ಟ ಪ್ರಕರಣ ಸಂಬಂಧ ಮೃತ ನಾಗೇಂದ್ರ ಗೌಡ ಸಂಬಂಧಿ ಹಾಗೂ ಸ್ನೇಹಿತರನ್ನ ಬಂಧಿಸುವ ಜೊತೆ ಹೊನ್ನಳ್ಳಿ ಯ ಸಿರಗುಂಜಿಯ ಅರಣ್ಯದಲ್ಲಿಬಚ್ಚಿಟ್ಟಿದ್ದ ಮೂರು ನಾಡಬಾಂಬ್ ಪತ್ತೆ ಮಾಡುವಲ್ಲಿ ಸಹ ಯಶಸ್ವಿಕಂಡಿದ್ದಾರೆ
ಇದನ್ನೂ ಓದಿ:-Ankola| ಅಂಕೋಲದಲ್ಲಿ ನಾಡಬಾಂಬ್ ತೆಗೆದುಕೊಂಡು ಹೋದ ಮೃತ ನಾಗೇಂದ್ರ|ರಮ್ಯಾಳಿಂದ ಲವ್ ಸ್ಟೋರಿ ರಿವೀಲ್
ಬಂಧನ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಉತ್ತರ ಕನ್ನಡ ಜಿಲ್ಲೆಯ ಎಸ್.ಪಿ ದೀಪನ್ ರವರು ಪ್ರಕರಣ ಸಂಬಂಧ ಹೊನ್ನಳ್ಳಿಯ ನಾಗರಾಜ್ ಗೌಡ(29) ,ನಾರಾಯಣ ಗೌಡ (31)ಹಾಗೂ ಶಿರಗುಂಜಿಯ ಸಂದೀಪ್ ಗೌಡ(24) ಎಂಬಾತನ್ನು ಬಂಧನ ಮಾಡಿರುವ ಕುರಿತು ಮಾಹಿತಿ ನೀಡಿದ್ದಾರೆ.
ನಾಗರಾಜ್ ಗೌಡ ,ನಾರಾಯಣಗೌಡ ಸಹೋದರರಾಗಿದ್ದು ಹೊನ್ನಳ್ಳಿ ಯವರಾಗಿದ್ದರೇ,ಸಂದೀಪ್ ಗೌಡ ಹೊನ್ನಳ್ಳಿ ಯ ಶಿರಗುಂಜಿ ಯವನಾಗಿದ್ದಾನೆ.
ನಾಗರಾಜ್ ಗೌಡ ,ನಾರಾಯಣಗೌಡ ಸಹೋದರರು ಮನೆಯ ಸಮೀಪದ ಒಂದು ಕಿಲೋಮೀಟರ್ ದೂರದಲ್ಲಿನ ಕಾಡಿನಲ್ಲಿ ಮೂರು ನಾಡಬಾಂಬ್ ಹುದುಗಿಸಿಟ್ಟಿದ್ದರು.
ಇದನ್ನೂ ಓದಿ:-Ankola| ಸರ್ಕಾರದ ಅನುದಾನ ಇಲ್ಲ ಗೃಹಲಕ್ಷ್ಮಿ ಹಣದಿಂದ ಶಾಲೆ ಅಡುಗೆ ಕಟ್ಟಡ ನಿರ್ಮಿಸಿದ ವನಿತೆಯರು
ನಂದಿ ಮರದ ಕೆಳಗೆ ಒಂದು ನೇರಳೆ ಮರದ ಕೆಳಗೆ 2 ನಾಡ ಬಾಂಬ್ ನನ್ನ ಬಬ್ ಪತ್ತೆದಳ ನಿಷ್ಕ್ರಿಯಗೊಳಿಸಿದೆ. ಪ್ರಾಥಮಿಕ ತನಿಖೆ ವೇಳೆ ಈ ಬಾಂಬ್ ನನ್ನು ಮೀನು ಹಿಡಿಯಲು ಬಳಸುತಿದ್ದರು ಎಂದು ತಿಳಿದು ಬಂದಿದೆ.
ನಾಗೇಂದ್ರಗೌಡ ಮೃತನಾಗುತಿದ್ದಂತೆ ಮೂರು ಬಾಂಬ್ ಗಳನ್ನ ಹುದುಗಿಸಿಟ್ಟಿದ್ದರು. ಕೆಲವು ಮಾಹಿತಿ ಆಧಾರದಲ್ಲಿ ಎಸ್.ಪಿ ದೀಪನ್ ನೇತ್ರತ್ವದ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದೆ.
ವಿಡಿಯೋ ನೋಡಿ:-
