Reels ಸಂಕಷ್ಟ ಯಲ್ಲಾಪುರದ ಹೆಗ್ಗಾರಮನೆ ಗುಡ್ಡಕ್ಕೆ ಪ್ರವಾಸಿಗರಿಗೆ ನಿರ್ಬಂಧ

ಯಲ್ಲಾಪುರದ ಹೆಗ್ಗಾರಮನೆ (ಸೂರ್ಯಕಲ್ಯಾಣಿ) ಗುಡ್ಡಕ್ಕೆ ಮಳೆಗಾಲದಲ್ಲಿ ಪ್ರವಾಸಿಗರ ಪ್ರವೇಶವನ್ನು ಅರಣ್ಯ ಇಲಾಖೆ ತಾತ್ಕಾಲಿಕವಾಗಿ ನಿಷೇಧಿಸಿದೆ. ಪರಿಸರ ಸಂರಕ್ಷಣೆ ಹಾಗೂ ಸುರಕ್ಷತೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಯಲ್ಲಾಪುರದ ಹೆಗ್ಗಾರಮನೆ (ಸೂರ್ಯಕಲ್ಯಾಣಿ) ಗುಡ್ಡ ಪ್ರವೇಶದ ಬಳಿ ಅಳವಡಿಸಿರುವ ಪ್ರವಾಸಿಗರ ಪ್ರವೇಶ ನಿಷೇಧ ಸೂಚನಾ ಫಲಕ ಮತ್ತು ಮಳೆಗಾಲದ ಹಸಿರು ಪ್ರಕೃತಿ ದೃಶ್ಯ. ಯಲ್ಲಾಪುರದ ಹೆಗ್ಗಾರಮನೆ (ಸೂರ್ಯಕಲ್ಯಾಣಿ) ಗುಡ್ಡ ಪ್ರವೇಶದ ಬಳಿ ಅಳವಡಿಸಿರುವ ಪ್ರವಾಸಿಗರ ಪ್ರವೇಶ ನಿಷೇಧ ಸೂಚನಾ ಫಲಕ ಮತ್ತು ಮಳೆಗಾಲದ ಹಸಿರು ಪ್ರಕೃತಿ ದೃಶ್ಯ.
ಯಲ್ಲಾಪುರದ ಹೆಗ್ಗಾರಮನೆ (ಸೂರ್ಯಕಲ್ಯಾಣಿ) ಗುಡ್ಡ

Reels ಸಂಕಷ್ಟ ಯಲ್ಲಾಪುರದ ಹೆಗ್ಗಾರಮನೆ ಗುಡ್ಡಕ್ಕೆ ಪ್ರವಾಸಿಗರಿಗೆ ನಿರ್ಬಂಧ.

 

ಕಾರವಾರ: ಉತ್ತರ ಕನ್ನಡ ಜಿಲ್ಲೆ ಪ್ರವಾಸೋಧ್ಯಮಕ್ಕೆ ಹೆಸರುಮಾಡಿದ ಜಿಲ್ಲೆ ,ಪ್ರವಾಸೋಧ್ಯಮ ಇಲ್ಲಿನ ಆರ್ಥಿಕ ಮೂಲಕೂಡ. ಆದರೇ ಪ್ರವಾಸಿಗರ ರೀಲ್ಸ್ (Reels) ಹುಚ್ಚಾಟ ಪ್ರಾಣಕ್ಕೆ ಕುತ್ತು ತರುವ ಜೊತೆಗೆ ಸ್ಥಳೀಯ ಜೀವ,ಜಲ ಸಂಕುಲಕ್ಕೂ ತೊಂದರೆ ತರುತ್ತಿದೆ.

ಇದನ್ನೂ ಓದಿ:-Yallapur|ಹಂದಿಜ್ವರಕ್ಕೆ ಕಾರ್ಮಿಕ ಮೃತ

Advertisement

ಹೌದು ಯಲ್ಲಾಪುರ ತಾಲೂಕಿನ ಪ್ರಕೃತಿ ಸೌಂದರ್ಯದ ತಾಣವಾಗಿರುವ ಹೆಗ್ಗಾರಮನೆ ಗುಡ್ಡ (ಸೂರ್ಯ ಕಲ್ಯಾಣಿ ಗುಡ್ಡ) ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ  ಇಲ್ಲಿನ ಸೊಬಗು ಭಾರೀ ವೈರಲ್ ಆಗಿದೆ.

ಇದನ್ನೂ ಓದಿ:-Yallapur| ಅರೆಬೈಲ್ ಘಟ್ಟದಲ್ಲಿ ಕಾರು ಚಾಲಕನ ಸಮೇತ ಕಾರು ಸುಟ್ಟ ಪ್ರಕರಣ ಕ್ಕೆ ಬಿಗ್ ಟ್ವಿಸ್ಟ್ -ಮೂವರ ಬಂಧನ

ಹಚ್ಚಹಸಿರಿನ ಹುಲ್ಲುಗಾವಲು, ಮಂಜಿನಿಂದ ಆವೃತವಾದ ಬೆಟ್ಟಗಳು, ಮೋಡಗಳ ನಡುವೆ ಕಾಣುವ ಅದ್ಭುತ ದೃಶ್ಯಗಳು ಸಾವಿರಾರು ಜನರನ್ನು ಆಕರ್ಷಿಸುತ್ತಿದ್ದು, ರೀಲ್ಸ್ ಮತ್ತು ವಿಡಿಯೋಗಳನ್ನು ನೋಡಿ ಅನೇಕ ಪ್ರವಾಸಿಗರು ಟ್ರೆಕ್ಕಿಂಗ್‌ಗಾಗಿ ಮಳೆಗಾಲದಲ್ಲೂ ಇಲ್ಲಿಗೆ ಆಗಮಿಸುತ್ತಿದ್ದಾರೆ.

ಮಳೆಗಾಲದಲ್ಲಿ ಈ ಗುಡ್ಡವು ಸಂಪೂರ್ಣ ಹಸಿರು ಹೊದಿಕೆಯನ್ನು ಹೊದ್ದು ನಿಂತಿರುವ ದೃಶ್ಯ ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಬೆಟ್ಟದ ಸಾಲುಗಳ ನಡುವೆ ತೇಲುವ ಮೋಡಗಳು, ತಾಳೆ ಮರಗಳ ಸಾಲು ಹಾಗೂ ಪ್ರಕೃತಿಯ ನೈಸರ್ಗಿಕ ಸೌಂದರ್ಯ ಈ ತಾಣವನ್ನು ವಿಶೇಷವಾಗಿಸಿವೆ.

ಯಲ್ಲಾಪುರದ ಹೆಗ್ಗಾರಮನೆ (ಸೂರ್ಯಕಲ್ಯಾಣಿ) ಗುಡ್ಡ
ಯಲ್ಲಾಪುರದ ಹೆಗ್ಗಾರಮನೆ (ಸೂರ್ಯಕಲ್ಯಾಣಿ) ಗುಡ್ಡ

ಆದರೆ ಪ್ರವಾಸಿಗರ ( tourist) ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ನೈಜ ಪರಿಸರಕ್ಕೆ ಹಾನಿ ಉಂಟುಮಾಡುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಪ್ಲಾಸ್ಟಿಕ್ ತ್ಯಾಜ್ಯ, ಆಹಾರ ಪ್ಯಾಕೆಟ್‌ಗಳು ಹಾಗೂ ಮದ್ಯದ ಬಾಟಲಿಗಳನ್ನು ಬಿಸಾಡುತ್ತಿರುವ ಘಟನೆಗಳು ವರದಿಯಾಗಿವೆ. ಇದರಿಂದ ಈ ಪ್ರದೇಶದ ಸ್ವಚ್ಛತೆ ಹಾಗೂ ಪರಿಸರ ಸಮತೋಲನಕ್ಕೆ ಧಕ್ಕೆ ಉಂಟಾಗುತ್ತಿದೆ.

ಮಳೆಗಾಲದಲ್ಲಿ ಗುಡ್ಡದ ದಾರಿಗಳು ಜಾರುವ ಸ್ಥಿತಿಯಲ್ಲಿರುವುದರಿಂದ ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಅರಣ್ಯ ಇಲಾಖೆ ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ. ಈ ಕುರಿತು ಅರಣ್ಯ ಇಲಾಖೆ ಮತ್ತು ಗ್ರಾಮಸ್ಥರು ಜಂಟಿಯಾಗಿ ಗುಡ್ಡದ ಪ್ರವೇಶ ಮಾರ್ಗಗಳಲ್ಲಿ “ಸೂರ್ಯಕಲ್ಯಾಣಿ ಗುಡ್ಡಕ್ಕೆ ಬರುವುದನ್ನು ನಿಷೇಧಿಸಲಾಗಿದೆ” ಎಂಬ ಸೂಚನಾ ಫಲಕಗಳನ್ನು ಅಳವಡಿಸಿದ್ದಾರೆ. ಅಲ್ಲದೆ ಸ್ಥಳೀಯರು, ಅರಣ್ಯ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಸೇರಿ ಪ್ರವಾಸಿಗರಿಗೆ ಜಾಗೃತಿ ಮೂಡಿಸುವ ಕಾರ್ಯಕ್ಕೂ ಮುಂದಾಗಿದ್ದಾರೆ.

ಇದನ್ನೂ ಓದಿ:-Yallapur | ಆಸ್ತಿಗಾಗಿ ಮಗನಿಂದ ತಂದೆಗೆ ಕೊಡಲಿಯಿಂದ ಹೊಡೆದು ಕೊಲೆ .

ಸ್ಥಳೀಯರ ಪ್ರಕಾರ, ಸಾಮಾಜಿಕ ಜಾಲತಾಣಗಳ ಮೂಲಕ ಪ್ರಸಿದ್ಧಿ ಪಡೆದ ಬಳಿಕ ವಾರಾಂತ್ಯಗಳಲ್ಲಿ ನೂರಾರು ಮಂದಿ ಗುಡ್ಡದತ್ತ ಆಗಮಿಸುತ್ತಿದ್ದು, ಕೆಲವರು ಸುರಕ್ಷತಾ ನಿಯಮಗಳನ್ನು ಪಾಲಿಸದೇ ಅಪಾಯಕ್ಕೆ ಸಿಲುಕುವ ಸಾಧ್ಯತೆಯೂ ಇದೆ. ಹೀಗಾಗಿ ಮಳೆಗಾಲ ಮುಗಿಯುವವರೆಗೆ ನಿರ್ಬಂಧ ಪಾಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement