Yallapur| ಅರೆಬೈಲ್ ಘಟ್ಟದಲ್ಲಿ ಕಾರು ಚಾಲಕನ ಸಮೇತ ಕಾರು ಸುಟ್ಟ ಪ್ರಕರಣ ಕ್ಕೆ ಬಿಗ್ ಟ್ವಿಸ್ಟ್ -ಮೂವರ ಬಂಧನ

Yallapur:Big twist in the Yallapur Arbail Ghat car burning case in Uttara Kannada. Police reveal it was a murder, not an accident. Three accused arrested, hunt on for others. Alt
Burnt car at Arbail Ghat Yallapur where murder of Nitish Dapale was initially suspected as an accident Burnt car at Arbail Ghat Yallapur where murder of Nitish Dapale was initially suspected as an accident
Yallapur accident case

Yallapur| ಅರೆಬೈಲ್ ಘಟ್ಟದಲ್ಲಿ ಕಾರು ಚಾಲಕನ ಸಮೇತ ಕಾರು ಸುಟ್ಟ ಪ್ರಕರಣ ಕ್ಕೆ ಬಿಗ್ ಟ್ವಿಸ್ಟ್ -ಮೂವರ ಬಂಧನ

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ(yallapur) ತಾಲೂಕಿನ ಅರಬೈಲ್ ಘಟ್ಟದಲ್ಲಿ  ಏಪ್ರೀಲ್ 8 ರಂದು ಕಾರು ಸುಟ್ಟಹೋಗಿ ಚಾಲಕ ಸಾವುಕಂಡ  ಪ್ರಕರಣ ಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.

Yallapur| ಕಾರಿನಲ್ಲೇ ಸುಟ್ಟು ಕರಕಲಾದ ಚಾಲಕ ಸಂಶಯಾಸ್ಪದ ಸಾವಿನ ಶಂಕೆ

Advertisement

ಬೆಳಗಾವಿ ಮೂಲದ ಮೋಸ್ಟ್ ವಾಂಟೆಂಡ್ ಆರೋಪಿ ನಿತೀಶ್ ಡಾಪಳೆ ಕೊಲೆಯಾದ ದುರ್ದೈವಿಯಾಗಿದ್ದು, ಆತನ ಸಹಚರರಾದ ಮೂರು ಜನರನ್ನ ಯಲ್ಲಾಪುರ(yallapur) ಪೊಲೀಸರು ಬಂಧಿಸಿದ್ದಾರೆ.

50 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿದ್ದ ನಿತೀಶ್ ಡಾಪಳೆ ಯನ್ನು ಆತನ ಆರುಜನ ಸಹಚರರು ಹುಬ್ಬಳ್ಳಿಯಲ್ಲಿ ಕೊಲೆ ಮಾಡಿದ್ದು ನಂತರ ಯಲ್ಲಾಪುರದ ಅರೆಬೈಲ್ ಘಟ್ಟಕ್ಕೆ ತಂದು ಕಾರು ಸಮೇತ ಅಪಘಾತ ರೀತಿಯಲ್ಲಿ ಸುಟ್ಟುಹಾಕಿದ್ದರು.

ಮೊದಲು ಅಪಘಾತದಲ್ಲಿ ಸಾವು ಎಂದು ಯಲ್ಲಾಪುರ ಪೊಲೀಸರು ದೂರು ದಾಖಲಿಸಿಕೊಂಡು ಮರಣೋತ್ತರ ಪರೀಕ್ಷೆ ನಡೆಸಿದಾಗ ಹತ್ಯೆಯು ಬಯಲಿಗೆ ಬಂದಿದೆ. ತಕ್ಷಣ ತನಿಖೆ ಕೈಗೊಂಡ ಪೊಲೀಸರು ಹುಬ್ಬಳ್ಳಿ ಮೂಲದ ನಯೀಮ್ ಮೌಲಾ, ದಾದಾ ಪೀರ್, ಸೋಯಬ್ ಮೂವರನ್ನ ಬಂಧನ ಮಾಡಿದ್ದು ತಲೆಮರಸಿಕೊಂಡ ಶಾನು, ಜಮೀರ್, ಹಾಗೂ ಆಯುಬ್ ಮೂವರಿಗಾಗಿ ಯಲ್ಲಾಪುರ ಪೊಲೀಸರು ಶೋಧಕಾರ್ಯ ಮುಂದುವರೆಸಿದ್ದಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement