ಹಳಗಾದಲ್ಲಿ ಪಾರ್ಶವಾಯು ಬಾರದಂತೆ ವೈದ್ಯರಿಂದ 150 ರುಪಾಯಿಯ ಇಂಜೆಕ್ಷನ್ ಪಡೆದ ಚಾರ್ಟೆಡ್ ಅಕೌಂಟೆಂಟ್ ಸಾವು!

642

ಕಾರವಾರ :- ಪಾರ್ಶ್ವ ವಾಯುವಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಯ ವೈದರು ಆರೋಗ್ಯವಾಗಿದ್ದ ಮಹಿಳೆಗೆ ಪಾರ್ಶವಾಯು ಬಾರದಂತೆ ಇಂಜೆಕ್ಷನ್ ನೀಡಿ ಆಕೆಯ ಸಾವಿಗೆ ಕಾರಣವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಳಗ ಗ್ರಾಮದ ಸೆಂಟ್ ಮೇರಿಸ್ ಆಸ್ಪತ್ರೆಯಲ್ಲಿ ನಡೆದಿದೆ.

ಕೊಪ್ಪಳ ಮೂಲದ ಚಾರ್ಟೆಡ್ ಅಕೌಂಟೆಂಟ್ ಸ್ವಪ್ನ‌ ರಾಯ್ಕರ್ (32) ಮೃತ ಮಹಿಳೆಯಾಗಿದ್ದು ಈಕೆಯ ತಂದೆ ಕೇಶವ್ ರವರು ಪಾಶ್ವವಾಯುವಿಗೆ ಇಲ್ಲಿಯೇ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.ತಮ್ಮ ಕುಟುಂಬದವರಿಗೆ ಮೈಕೈ ನೋವು ಇರಿವುದರಿಂದ ಮೃತ ಮಹಿಳೆಯೂ ಸೇರಿ ನಾಲ್ಕು ಜನ ಆಸ್ಪತ್ರೆ ವೈದ್ಯರ ಸಲಹೆ ಪಡೆದು ಪಾರ್ಶವಾಯು ಬಾರದಂತೆ ಇಂಜೆಕ್ಷನ್ ಪಡೆದಿದ್ದಾರೆ.

ಆದ್ರೆ ಮೂರು ಜನರಿಗೆ ಏನೂ ಆಗದೇ ಈ ಮಹಿಳೆ ಮಾತ್ರ ಇಂಜೆಕ್ಷನ್ ಪಡೆದ ಕೆಲವೇ ನಿಮಿಷದಲ್ಲಿ ಮೃತಳಾಗಿದ್ದಾಳೆ.

ಪ್ರತಿ ಇಂಜೆಕ್ಷನ್ ಕೇವಲ 150 ರೂ ಆಗಿದ್ದು ಪ್ಯಾರಲಿಸೀಸ್ ಗೆ ಮಾತ್ರ ಈ ಆಸ್ಪತ್ರೆಯಲ್ಲಿ ಇಂಜೆಕ್ಷನ್ ಕೊಡುತ್ತಾರೆ.ರಾಜ್ಯ ಹೊರ ರಾಜ್ಯದಿಂದ ಸಾಕಷ್ಟು ಸಂಖ್ಯೆಯಲ್ಲಿ ಇಂಜೆಕ್ಷನ್ ತೆಗೆದುಕೊಳ್ಳಲು ಜನರು ಬರುತ್ತಾರೆ. ಈ ಹಿಂದೆ ಈ ಆಸ್ಪತ್ರೆ ವಿರುದ್ಧ ಸಾಕಷ್ಟು ದೂರುಗಳಿದ್ದರೂ ಜಿಲ್ಲಾ ಆರೋಗ್ಯ ಅಧಿಕಾರಿಗಳು ಮಾತ್ರ ಕ್ರಮ ಕೈಗೊಂಡಿರಲಿಲ್ಲ.

ವಿದ್ಯಾವಂತರಾಗಿದ್ದರೂ ಮುಂದೆ ತಂದೆಗೆ ಆದ ಪಾರ್ಶವಾಯು ತನಗೂ ಬರಬಹುದು ಎಂಬ ಭಯ ಹಾಗೂ ವೈದ್ಯರ ನಿರ್ಲಕ್ಷ ಸ್ವಪ್ನ ರವರ ಸಾವಿಗೆ ಕಾರಣವಾದರೇ ಮೂರು ವರ್ಷದ ಮಗು ಅನಾಥವಾಗಿದೆ.

ಇನ್ನು ಘಟನೆ ಸಂಬಂಧ ಕಾರವಾರದ ಚಿತ್ತಾಕುಲ ಠಾಣೆಯಲ್ಲಿ ಮೃತ ಮಹಿಳೆ ಸಂಬಂಧಿಕರು ದೂರು ದಾಖಲಿಸಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!