ಚಿತ್ರದುರ್ಗ ದಿಂದ ಹಾರಿದ ಸ್ವದೇಶಿ ತಪಸ್ ದ್ರೋಣ್ ಕಾರವಾರದ ಅರಬ್ಬಿ ಸಮುದ್ರದಲ್ಲಿ ಯಶಸ್ವಿ ಲ್ಯಾಂಡಿಂಗ್

TextMaster 06 19 03.27.43 TextMaster 06 19 03.27.43

ಕಾರವಾರ: ರಕ್ಷಣಾ ಇಲಾಖೆಯ ಸಂಶೋಧನೆ ಅಭಿವೃದ್ಧಿ ಸಂಸ್ಥೆ (DRDO) ಮತ್ತು ಭಾರತೀಯ ನೌಕಾಪಡೆ ತಂಡವು ಈಚೆಗೆ ಸಂಶೋಧಿಸಿ, ಅಭಿವೃದ್ಧಿ ಪಡಿಸಿದ ತಪಸ್ ಎಂಬ ಸಣ್ಣ ವಿಮಾನ ಮಾದರಿಯ ಡ್ರೋನ್ ಪರೀಕ್ಷೆಯನ್ನು ಯಶಸ್ವಿಗೊಳಿಸಿದೆ.

ಚಿತ್ರದುರ್ಗದಲ್ಲಿರುವ ತನ್ನ ಬೇಸ್ ನಿಂದ ಮಾನವ ರಹಿತ ವಿಮಾನ ಮಾದರಿ ದ್ರೋಣ್ 285 ಕಿಲೋಮೀಟರ್ ದೂರವನ್ನು 3.30 ಘಂಟೆಯ ಹಾರಾಟ ಅವಧಿ ಪೂರೈಸಿ ಕಾರವಾರದ ಅರಬ್ಬಿ ಸಮುದ್ರದಲ್ಲಿ ಇರುವ ಸುಭದ್ರ ನೌಕೆಯಲ್ಲಿ ಲ್ಯಾಂಡಿಂಗ್ ಆಗಿದೆ. ಈ ಅವದಿಯಲ್ಲಿ 20,000 ಅಡಿ ಎತ್ತರದಲ್ಲಿ ಕಾರವಾರದಲ್ಲಿ ಇದ್ದ ಸುಭದ್ರ ನೌಕೆಯ ಸೂಚನೆಯನ್ನು ಪಾಲಿಸುವಲ್ಲಿ ಯಶಸ್ವಿಯಾಗಿದೆ.

Advertisement

ಏನಿದು ತಪಸ್ ದ್ರೋಣ್?
ಸ್ವದೇಶಿ ನಿರ್ಮಿತ ಮಾನವ ರಹಿತ ವಿಮಾನ ಮಾದರಿಯ ದ್ರೋಣ್ ಇದಾಗಿದ್ದು 2013 ರಲ್ಲಿ ಇದರ ಪ್ರಯೋಗ ಆರಂಭಿಸಲಾಯಿತು. ಬೆಂಗಳೂರಿನ HAL ನಲ್ಲಿ ಇದರ ನಿರ್ಮಾಣ ಕಾರ್ಯ ಮಾಡಲಾಗಿದ್ದು ಸ್ವದೇಶಿ ತಂತ್ರಜ್ಞಾನ ಬಳಸಲಾಗಿದ್ದು, 2020 ರಲ್ಲಿ ಮೊದಲ ಬಾರಿ ಚಿತ್ರದುರ್ಗದಲ್ಲಿ 16,000 ಅಡಿ ಎತ್ತರವನ್ನು ಎಂಟು ಗಂಟೆಗಳ ಕಾಲ ಹಾರಾಟ ನೆಡೆಸಿ ಯಶಸ್ವಿಯಾಗಿತ್ತು. ನಂತರ ಇದೇ ಮೊದಲ ಬಾರಿ ಕಾರವಾರದ ಅರಬ್ಬಿ ಸಮುದ್ರದ ವರೆಗೆ 20,000 ಅಡಿ ಎತ್ತರದಲ್ಲಿ ತಡೆರಹಿತವಾಗಿ ಹಾರಾಟ ನಡೆಸಿ ಯಶಸ್ವಿಯಾಗಿದೆ. ಇದರ ಹಾರಾಟ ಸಾಮರ್ಥ್ಯು 24 -35 ಗಂಟೆ ಎಂದು DRDO ಹೇಳಿಕೊಂಡಿದೆ.

ಇದು 350kg ಸಾಮರ್ಥ್ಯ ಹೊಂದಿದ್ದು 1800 KG ತೂಕವಿದ್ದು 31.2 ಅಡಿ ಉದ್ದವಿದೆ.ರೆಕ್ಕೆಗಳು 67 ಅಡಿ ಏಳು ಇಂಚು ಇದೆ.ವೇಗ: 224 km/h (139 mph, 121 kn)ಇದ್ದು 1,000 ಕಿಮೀ (620 ಮೈಲಿ, 540 ಎನ್‌ಮಿ)ನಷ್ಟು ದೂರ ಕ್ರಮಿಸುತ್ತದೆ.

ಈ ದ್ರೋಣ್ 30 ಸಾವಿರ ಅಡಿಯವರೆಗೂ ಹಾರಬಲ್ಲ ಸಾಮರ್ಥ ವಿದೆ. ಇದು ಮೋಡವಿದ್ದರೂ ಯಾವುದೇ ಸಮಸ್ಯೆ ಇಲ್ಲದೇ ಭೂಮಿಯ ಚಿತ್ರಣವನ್ನು ತೆಗೆಯುವ ಸಾಮರ್ಥ್ಯ ಹೊಂದಿದ್ದು ಬೇಹುಗಾರಿಕೆ,ಹವಾಮಾನ ಸೂಚನೆ ,ದಾಳಿಗೆ ಬಳಕೆಯಾಗುತ್ತದೆ.

ಐಎನ್ ಎಸ್ ಸುಭದ್ರ ನೌಕೆ ಬಳಿ ತಪಸ್ ಯುಎವಿ ಕಾರ್ಯಾಚರಣೆಯನ್ನು ನಡೆಸಲು ಹಾಗೂ ಕಂಟ್ರೋಲ್ ಮಾಡಲು ಒಂದು ಗ್ರೌಂಡ್ ಕಂಟ್ರೋಲ್ ಸ್ಟೇಷನ್ (GCS) ಮತ್ತು ಎರಡು ಶಿಪ್ ಡೇಟಾ ಟರ್ಮಿನಲ್ (SDT) ಅನ್ನು ಸ್ಥಾಪಿಸಲಾಗಿದೆ. ಪರೀಕ್ಷೆ ನಂತರ, ತಪಸ್ ಮತ್ತೆ ಎಟಿಆರ್ ಗೆ ಬಂದಿಳಿದಿದ್ದು ಮುಂದೆ ಯುದ್ದ ಸಂದರ್ಭದಲ್ಲಿ ಶತ್ರುಗಳನ್ನು ಮಣಿಸಲು ಹಾಗೂ ಬೇಹುಗಾರಿಕೆ ನಡೆಸಲು ವಾಯುಸೇನೆ,ಭೂ ಸೇನೆ ಹಾಗೂ ನೌಕಾ ಸೇನೆಗೆ ನೆರವಾಗಲಿದೆ. ಇದನ್ನೂ ಓದಿ:- ದೇಶಕ್ಕೆ ಹೊಸದಾಗಿ ಸೇರಿದ ಜಲಂತರ್ಗಾಮಿ ಹಡಗಿಗೆ ಕರ್ನಾಟಕದ ದ್ವೀಪದ ಹೆಸರಿಟ್ಟ ನೌಕಾದಳ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement