Haliyala| ಅಮ್ಮಿಸ್ ಬೇಕರಿಯಲ್ಲಿ ಕೇಕ್ ಖರೀದಿಸುವವರೇ ಎಚ್ಚರ| ಹಣದ ಬದಲು ಸಿಗುತ್ತೆ ಇಲ್ಲಿ ವಿಷ.
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪಟ್ಟಣದ ಅಮ್ಮಿಸ್ ಬೇಕರಿಯಲ್ಲಿ ಅವಧಿ ಮೀರಿದ ಕೇಕ್ ಗಳನ್ನು ಮಾರಾಟ ಮಾಡಿದ ಘಟನೆ ಬೆಳಕಿಗೆ ಬಂದಿದ್ದು ಪುರಸಭೆ ಅಧಿಕಾರಿಗಳು ದೂರು ಬಂದ ಹಿನ್ನಲೆಯಲ್ಲಿ ಬೇಕರಿಗೆ ದಾಳಿ ನಡೆಸಿದಾಗ ಹಾಳಾದ ಹಲವು ಕೇಕ್ ಗಳು ಪತ್ತೆಯಾಗಿವೆ.

ಯಡೋಗಾ ಗ್ರಾಮದ ಕೆಲವು ಯುವಕರು ಅಮ್ಮಿಸ್ ಬೇಕರಿಯಲ್ಲಿ ವಿವಾಹ ಸಮಾರಂಭಕ್ಕಾಗಿ ಕೇಕ್ ಖರೀದಿಸಿದ್ದರು. ಕೇಕ್ ಕತ್ತರಿಸುವಾಗ ಬೂಸ್ಟ್ ಹಿಡಿದಿದ್ದು ಹಾಳಾಗಿದೆ. ಈ ಕುರಿತು ಬೇಕರಿಗೆ ತೆರಳಿ ದೂರಿದ್ದರು.ಆದರೇ ನಿರ್ಲಕ್ಷ ಮಾಡಿ ವಾದ ಮಾಡಿದ್ದರು .ಈ ಹಿನ್ನಲೆಯಲ್ಲಿ ಪುರಸಭೆ ಆಹಾರ ಇಲಾಖೆಗೆ ದೂರು ನೀಡಲಾಗಿತ್ತು. ದೂರು ಹಿನ್ನಲೆಯಲ್ಲಿ ಬೇಕರಿಯಲ್ಲಿ ತಪಾಸಣೆ ನಡೆಸಿದಾಗ ಕೇಕ್ ಸೇರಿದಂತೆ ಹಲವು ವಸ್ತುಗಳು ಅವಧಿ ಮೀರಿರುವುದು ಪತ್ತೆಯಾಗಿದ್ದು ಇದನ್ನೇ ಮಾರಾಟ ಮಾಡುತಿದ್ದರು. ಇದಲ್ಲದೇ ಶುಚಿತ್ವ ಸಹ ಸರಿಯಾಗಿ ಇರದ ಹಿನ್ನಲೆಯಲ್ಲಿ 15 ಸಾವಿರ ದಂಡ ವಿಧಿಸಲಾಗಿದೆ.
ದಂಡ ವಿಧಿಸಿದ್ರೂ ಡೋಂಟ್ ಕೇರ್ !

ಇನ್ನು ಹಳಿಯಾಳದ (haliyala) ಅಮ್ಮಿಸ್ ಬೇಕರಿ ಬಗ್ಗೆ ಈ ಹಿಂದೆಯೂ ಸಹ ದೂರು ಇತ್ತು. ಕಳಪೆ ಮಟ್ಟದ ಆಹಾರ ತ್ಯಯಾರಿಕೆ, ಅವಧಿ ಮೀರಿದ್ದರೂ ಅವುಗಳ ಮಾರಾಟ,ಶುಚಿತ್ವ ಇಲ್ಲದಿರುವುದು ಹೀಗೆ ಹಲವು ಆರೋಪ ಈ ಬೇಕರಿಮೇಲಿದೆ. ಈ ಹಿನ್ನಲೆಯಲ್ಲಿ ಈ ಹಿಂದೆ ಸಹ ದಾಳಿ ನಡೆಸಿ ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿತ್ತು.
Haliyala| ಕೈದಿ ಬಳಿ ಲಂಚ ಕೇಳಿ ಲೋಕಾಯುಕ್ತ ಬಲಗೆ ಬಿದ್ದ ಹಳಿಯಾಳ ಜೈಲಿನ ಜೈಲರ್
ಆದರೇ ಸುಧಾರಿಸಿಕೊಳ್ಳದ ಈ ಬೇಕರಿಯವರು ತಮ್ಮ ಚಾಳಿಯನ್ನ ಮತ್ತೆ ಮುಂದುವರೆಸಿದ್ದು ಹಣ ಮಾಡುವ ಆಸೆಯಿಂದ ಹಾಳಾದ ಆಹಾರ ಪದಾರ್ಥಗಳನ್ನ ಸಹ ಮಾರಾಟ ಮಾಡುತಿದ್ದರು.
ಇನ್ನು ಇಲ್ಲಿನ ಕೇಕ್ ಗಳು ಒಳಗೆ ಹಾಳಾಗಿದ್ದು ಇದನ್ನು ಸೇವಿಸಿದ ಜನರಿಗೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.ಹೀಗಿದ್ದರೂ ಈ ಬೇಕರಿಯವರು ಜನರ ಆರೋಗ್ಯವನ್ನ ನಿರ್ಲಕ್ಷಿಸಿ ಹಣದ ಆಸೆಗೆ ಜನರ ಆರೋಗ್ಯದ ಜೊತೆ ಚಲ್ಲಾಟ ಆಡುತಿದ್ದು ಇವರ ವಿರುದ್ಧ ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳಬೇಕು ಎಂಬುದು ಜನರ ಆಗ್ರಹವಾಗಿದೆ.







