Haliyala| ಕೈದಿ ಬಳಿ ಲಂಚ ಕೇಳಿ ಲೋಕಾಯುಕ್ತ ಬಲಗೆ ಬಿದ್ದ ಹಳಿಯಾಳ ಜೈಲಿನ ಜೈಲರ್
ಕೈದಿಗೆ ಸರ್ಕಾರದಿಂದ ಬಂದ ಹಣ ನೀಡಲು 60 ಸಾವಿರ ಬೇಡಿಕೆ ಇಟ್ಟಿದ್ದ ಜೈಲರ್..
Haliyala/ಹಳಿಯಾಳ: ಕೈದಿಯೊಬ್ಬನಿಗೆ ಸರ್ಕಾರದಿಂದ ಬಂದ ಹಣ ನೀಡಲು 60 ಸಾವಿರ ಡಿಮ್ಯಾಂಡ್ ಇಟ್ಟಿದ್ದ ಹಳಿಯಾಳ(haliyala) ಸಬ್ ಜೈಲಿನ ಜೈಲರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.
ಹಳಿಯಾಳ ಸಬ್ ಜೈಲಿನ ಜೈಲರ್ ಕಲ್ಲಪ್ಪ ಗಸ್ತಿ 2022 ರಲ್ಲಿ ಕೊಲೆ ಪ್ರಕರಣದಲ್ಲಿ ಎರಡು ವರ್ಷ ಜೈಲಿನಲ್ಲಿದ್ದ ಹಳಿಯಾಳದ ಯಡೋಗಾ ಗ್ರಾಮದ ರಾಜ್ ಕುಮಾರ್ ಎಂಬಾತನಿಂದ ಜೈಲಿನಲ್ಲಿ ಕೂಲಿ ಮಾಡಿದ ಹಣ ನೀಡಲು 60 ಸಾವಿರ ರೂಪಾಯಿ ಲಂಚ ಕೇಳಿದ್ದನು. ಜೈಲಿನಲ್ಲಿ ಕೆಲಸ ಮಾಡಿದ್ದ ರಾಜ್ ಕುಮಾರ್ ಗೆ ಸರ್ಕಾರದಿಂದ 1.34 ಲಕ್ಷ ಹಣ ಹಾಗೂ 45 ಸಾವಿರ ಹಣ ಎರಡು ಕಂತಿನಲ್ಲಿ ಬಿಡುಗಡೆಯಾಗಿದ್ದು ಈ ಹಣ ನೀಡಲು ಲಂಚಕ್ಕೆ ಬೇಡಿಕೆ ಇಟ್ಟು ಸತಾಯಿಸಿದ್ದನು.
ಇದನ್ನೂ ಓದಿ:-Haliyala| ನಾಲ್ಕು ದಿನದಲ್ಲಿ 16 ಕಡೆ ಕಳ್ಳತನ ದಾಖಲಾಗಿದ್ದು ಎರಡು ಪ್ರಕರಣ!
ಮುಂಗಡವಾಗಿ ಹತ್ತು ಸಾವಿರ ಹಣವನ್ನು ಧಾರವಾಡದ ಮಹಿಳೆಯೊಬ್ಬರ ಹೆಸರಿನಲ್ಲಿ ಫೋನ್ ಪೇಗೆ ಹಾಕಿಸಿಕೊಂಡಿದ್ದು, ನಂತರ ಅಲರ್ಟ್ ಆಗಿ ಉಳಿದ ಹಣ ಪಡೆಯಲು ಬೇರೆ ಬೇರೆ ಕಡೆ ಬರುವಂತೆ ಜೈಲರ್ ದೂರುದಾರ ರಾಜಕುಮಾರ್ ಗೆ ತಿಳಿಸಿದ್ದನು. ಕಾರವಾರ ಲೋಕಾಯುಕ್ತ ಡಿ.ವೈ ಎಸ್ ಪಿ ಧನ್ಯಾನಾಯಕ್ ಹಾಗೂ ಇನ್ಸಪೆಕ್ಟರ್ ವಿನಾಯಕ ಬಿಲ್ಲವ ನೇತೃತ್ವದ ತಂಡ ದಾಳಿ ನಡೆಸಿ ಕಲ್ಲಪ್ಪ ಗಸ್ತಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದರು.
ಇದನ್ನೂ ಓದಿ:-Haliyala| ಸಮಯಕ್ಕೆ ಸರಿಯಾಗಿ ಬಾರದ ಅಂಬುಲೆನ್ಸ್ |ಮಾಜಿ ಯೋಧ ಸಾವು
ಕಲ್ಲಪ್ಪ ಗಸ್ತಿ ಫೋನ್ ಪೇ ಮೂಲಕ ಹಣ ಪಡೆದಿರುವುದು ಖಚಿತವಾದ ಹಿನ್ನಲೆಯಲ್ಲಿ ತಕ್ಷಣ ಆತನನ್ನ ಬೆಳಗಾವಿ ಜೈಲಿಗೆ ವರ್ಗಾವಣೆ ಮಾಡಲಾಗಿದ್ದು ಇಲಾಖೆ ಅಮಾನತು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಸಧ್ಯ ಉಪ ಕಾರಾಗೃಹದ ಅಧೀಕ್ಷಕನಿಗೆ ನೋಟಿಸ್ ನೀಡಿ ಬಿಡುಗಡೆ ಮಾಡಲಾಗಿದೆ.







